indigenousಗಜೇಂದ್ರಗಡ ತಾಲೂಕಿನ ಜಿಗೇರಿ ಗ್ರಾಮದಲ್ಲಿ ಸ್ವದೇಶಿ ವಸ್ತುಗಳ ಬಳಕೆ ಜಾಗೃತಿ ಕುರಿತು ಮನೆಮನೆಗೆ ಸ್ಟಿಕರ್ ಅಂಟಿಸುವ ಕಾರ್ಯಕ್ರಮಕ್ಕೆ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪೂರ ಚಾಲನೆ ನೀಡಿದರು.  
ಗದಗ

indigenous ಸ್ವದೇಶಿ ಉತ್ಪನ್ನ ಬಳಸುವ ಸಂಕಲ್ಪ ಮಾಡೋಣ

ರವಿ ಎಸ್. ಬಳೂಟಗಿ
ಗಜೇಂದ್ರಗಡ: ಭಾರತದ ಆರ್ಥಿಕತೆ ಸದೃಢಗೊಳ್ಳಲು ಪ್ರತಿಯೊಬ್ಬರೂ ವಿದೇಶಿ ವಸ್ತುಗಳನ್ನು (indigenous) ತಿರಸ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸಬೇಕು. ಪ್ರಧಾನ ಮಂತ್ರಿಗಳ ಅತ್ಮ ನಿರ್ಭರ ಯೋಜನೆಯನ್ನು ಮತಕ್ಷೇತ್ರದ ಪ್ರತಿ ಮನೆಗೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪೂರ ಹೇಳಿದರು.
ತಾಲೂಕಿನ ಜಿಗೇರಿ ಗ್ರಾಮದಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವದೇಶಿ ವಸ್ತುಗಳ ಬಳಕೆಯ ಜಾಗೃತಿ ಕುರಿತು ಮನೆಮನೆಗೆ ಸ್ಟಿಕರ್ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
90 ದಿನಗಳ ಕಾಲ ನಡೆಯುವ ಸ್ವಾವಲಂಬಿ ಬದುಕಿನ ಸಂಕಲ್ಪ ಅಭಿಯಾನವನ್ನು ಶೀಘ್ರ ಆರಂಭಿಸಲಾಗುವುದು. ಭಾರತ ಪಾಶ್ಚಿಮಾತ್ಯ ದೇಶದ ವಸ್ತುಗಳ ಮೇಲೆ ಅವಲಂಬನೆಯಾಗಿದೆ. ಇದನ್ನು ತಡೆಗಟ್ಟಿ ಸ್ವದೇಶಿ ವಸ್ತುಗಳನ್ನು ಉತ್ಪನ್ನ ಮಾಡಿ ಅವುಗಳನ್ನೇ ಬಳಸುವ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರಧಾನಮಂತ್ರಿಗಳು ಸಲಹೆ ನೀಡಿದ್ದಾರೆ. ಅದಕ್ಕಾಗಿ ಅಭಿಯಾನ ನಡೆಸಿ, ಜನರಲ್ಲ ಜಾಗೃತಿ ಮೂಡಿಸಲಾಗುವುದು ಎಂದರು.
ಬಿಜೆಪಿ ರೋಣ ಮಂಡಲ ಕಾರ್ಯದರ್ಶಿ ಬಾಳಾಜಿರಾವ್ ಭೋಸ್ಲೆ ಮಾತನಾಡಿ, ನಾವೆಲ್ಲರೂ ಸ್ವದೇಶಿ ಉತ್ಪನ್ನಗಳ ಬಳಕೆಗೆ ಧ್ವನಿಯಾಗಬೇಕಿದೆ. ಸ್ಥಳೀಯವಾಗಿ ಉತ್ಪಾದನೆಯಾಗುವ ವಸ್ತುಗಳನ್ನೇ ಬಳಸುವ ಬಗ್ಗೆ ಸಂಕಲ್ಪ ಮಾಡೋಣ ಎಂದರು. ಸೂಗಿರಪ್ಪ ಕಾಜಗಾರ, ಸಂಜೀವಪ್ಪ ಲೆಕ್ಕಿಹಾಳ, ಪರಸಪ್ಪ ಘೋರ್ಪಡೆ, ಮಲ್ಲಪ್ಪ ಕಮರಿ, ರಾಜಾರಾಮಸಿಂಗ್ ರಜಪೂತ, ಭೀಮಪ್ಪ ಮೇಟಿ, ಕುಮಾರ ಪಾಟಗಾರ, ಈಶಪ್ಪ ಅಂಗಡಿ, ರವಿ ಕಮತರ, ಮಂಜುನಾಥ ಕಮತರ ಇತರರಿದ್ದರು.