SAINIKA ನರಗುಂದ ತಾಲೂಕು ಬನಹಟ್ಟಿಯ ನಿವೃತ್ತ ಸೈನಿಕ ಗಂಗಾಧರಯ್ಯ ಹಿರೇಮಠ ದಂಪತಿಯನ್ನು ಗ್ರಾಮಸ್ಥರು ಸೋಮವಾರ ಸನ್ಮಾನಿಸಿದರು. 
ಗದಗ

SAINIKA ಸೈನಿಕರ ತ್ಯಾಗ, ಬಲಿದಾನ ಸದಾ ಸ್ಮರಿಸಲಿ

ನರಗುಂದ: ಪ್ರತಿಯೊಬ್ಬರೂ ಹೊಟ್ಟೆ ತುಂಬ, ನೆಮ್ಮದಿಯ ಜೀವನ ನಡೆಸಲು (SAINIKA ) ಸೈನಿಕರೇ ಕಾರಣ. ದೇಶದ ರಕ್ಷಣೆಗೆ ಸದಾ ಸನ್ನದ್ಧರಾಗಿರುವ ಸೈನಿಕರ ತ್ಯಾಗ, ಬಲಿದಾನ ಸದಾ ಸ್ಮರಿಸಬೇಕು ಎಂದು ವಿರಕ್ತಮಠದ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬನಹಟ್ಟಿ ಗ್ರಾಮದ ವೀರಯೋಧ ಗಂಗಾಧರ ಹಿರೇಮಠ ಅವರಿಗೆ ಪಟ್ಟಣದ ಸರಸ್ವತಿ ನಗರ ಬಡಾವಣೆಯ ಶ್ರೀಸರಸ್ವತಿ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಿವೃತ್ತ ಸೈನಿಕರ ಗೌರವ-ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜಗದೀಶ ಹಿರೇಮಠ, ಸುನೀಲ ಹಿರೇಮಠ ಮಾತನಾಡಿದರು. ನಿವೃತ್ತ ಸೈನಿಕ ಗಂಗಾಧರಯ್ಯ ಹಿರೇಮಠ ಅವರ ಮೇಲೆ ಪುಷ್ಪ ಮಳೆಗರೆದು ಮೆರವಣಿಗೆ ಮಾಡಲಾಯಿತು. ನಿವೃತ್ತ ಶಿಕ್ಷಕ ಎಸ್.ಆರ್. ಹಿರೇಮಠ, ಬನಹಟ್ಟಿ ರುದ್ರಸ್ವಾಮಿಮಠದ ಸೊಲಬಯ್ಯ ಮಹಾಸ್ವಾಮಿಗಳು, ನಿವೃತ್ತ ಪ್ರಾಚಾರ್ಯ ಎಚ್.ಬಿ. ಅಸೂಟಿ, ಬಿ.ಎನ್. ಮಾನೆ, ಆನಂದಯ್ಯ ನಂದಿಕೋಲಮಠ, ಬಿ.ಎನ್. ಹಿರೇಮಠ, ಮುದುಕಯ್ಯ ಹಿರೇಮಠ, ಮಾಜಿ ಸೈನಿಕ ಬಸವರಾಜ ಎಮ್ಮಿ, ಜಯಶ್ರೀ ಹಿರೇಮಠ, ಮೃತ್ಯುಂಜಯ ಹಿರೇಮಠ, ಉಮೇಶ ಹಿರೇಮಠ, ಲೋಕಯ್ಯ ಹಿರೇಮಠ, ಶರಣಯ್ಯ, ಗಿರೀಶ ಹಿರೇಮಠ, ಇತರರಿದ್ದರು. ಆರ್.ಬಿ. ಚಿನಿವಾಲರ ನಿರ್ವಹಿಸಿದರು.
ಫೋಟೋ ಶಿರ್ಷಿಕೆ) 6 ಎನ್‌ಆರ್‌ಡಿ-5: ನರಗುಂದ ತಾಲೂಕು ಬನಹಟ್ಟಿಯ ನಿವೃತ್ತ ಸೈನಿಕ ಗಂಗಾಧರಯ್ಯ ಹಿರೇಮಠ ದಂಪತಿಯನ್ನು ಗ್ರಾಮಸ್ಥರು ಸೋಮವಾರ ಸನ್ಮಾನಿಸಿದರು. ಶಿವಕುಮಾರ ಸ್ವಾಮಿಗಳು, ಎಸ್.ಆರ್. ಹಿರೇಮಠ, ಸೊಲಬಯ್ಯ ಸ್ವಾಮಿಗಳು, ಜಯಶ್ರೀ ಹಿರೇಮಠ, ಇತರರಿದ್ದರು.