ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ (sharana) ಜಂಗಮಾಭಿವೃದ್ಧಿ ಟ್ರಸ್ಟ್‌ನಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ಶ್ರೀ ಮುದುಕೇಶ್ವರ ಶಿವಾಚಾರ್ಯರು, ಎಸ್.ಎಸ್. ಪಾಟೀಲ, ಚನ್ನವೀರಯ್ಯ ಸಾಲಿಮಠ, ವಿ.ಜೆ.ಹಿರೇಮಠ, ಇತರರಿದ್ದರು. 
ಗದಗ

Sharana: ಶರಣರ ಜಯಂತಿ ಒಂದೇ ದಿನ ಆಚರಿಸಲಿ

ಮುಂಡರಗಿ: ಸರ್ಕಾರ ಎಲ್ಲ ಶರಣರ (Sharana) ಜಯಂತಿಗಳನ್ನು ಒಂದೇ ದಿನದಂದು ಒಂದೇ ವೇದಿಕೆಯಲ್ಲಿ ಆಚರಿಸುವ ರೀತಿಯಲ್ಲಿ ಆದೇಶಿಸಿದರೆ ಒಳ್ಳೆಯದು. ಎಲ್ಲರೂ ಒಂದೇ ವೇದಿಕೆಯ ಮೇಲೆ ಸೇರಿ ಆಚರಿಸುವುದರಿಂದ ನಮ್ಮಲ್ಲಿ ಸಹೋದರತ್ವ ಹೆಚ್ಚು ಬೆಳೆಯುತ್ತದೆ. ಇದರಿಂದ ಎಲ್ಲರಲ್ಲಿ ಸಮಾನತೆ ಮೂಡಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
ತಾಲೂಕಿನ ಕಲಕೇರಿ ಗ್ರಾಮದಲ್ಲಿ ಜಂಗಮಾಭಿವೃದ್ಧಿ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಕೇರಿ ಕೆಂಡಗಿ ದುರ್ಗಮ್ಮ ದೇವಸ್ಥಾನದ ಜೀರ್ಣೋದ್ದಾರಕ್ಕೆ ಒಂದು ಲಕ್ಷ ರೂ. ನೀಡುವುದಾಗಿ ಎಸ್.ಎಸ್.ಪಾಟೀಲ ಅವರು ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ಕಲಕೆರಿ-ವಿರುಪಾಪೂರದ ಶ್ರೀಮುದುಕೇಶ್ವರ ಶಿವಾಚಾರ್ಯರು, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯರು, ಅಭಿನವ ಚೆನ್ನಬಸವೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಅಂದಪ್ಪ ಮೇಟಿ, ಸೋಮಣ್ಣ ದೇಸಾಯಿ, ಮಂಜುನಾಥ ಬನ್ನಿಕೊಪ್ಪ, ಜಯಣ್ಣ ದ್ರಾಕ್ಷಿ, ವಿ.ಜೆ. ಹಿರೇಮಠ, ಕಮಿಟಿ ಅಧ್ಯಕ್ಷ ಚನ್ನವೀರಯ್ಯ ಸಾಲಿಮಠ ಇತರರು ಇದ್ದರು.