ಲಕ್ಷ್ಮೇಶ್ವರ ತಾಲೂಕಿನ ಸೂರಣಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗ ದಿನ ಆಚರಿಸಲಾಯಿತು. 
ಗದಗ

TB ಕ್ಷಯಮುಕ್ತ ಭಾರತ ಎಲ್ಲರ ಗುರಿಯಾಗಲಿ

ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಕ್ಷಯರೋಗ (TB) ದಿನ ಆಚರಿಸಲಾಯಿತು. ಎಸ್‌ಟಿಎಲ್‌ಎಸ್ ರವಿ ಕೊಪ್ಪದ ಮಾತನಾಡಿ, ಕ್ಷಯ ಸೂಕ್ಷ್ಮರೋಗಾಣುಗಳಿಂದ ಹರಡುತ್ತದೆ. ಕೆಮ್ಮಿದಾಗ ಅಥವಾ ಸೀನುವಾಗ ಹೊರಬರುವ ರೋಗಾಣುಗಳು ಗಾಳಿ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಸೋಂಕು ಹರಡುತ್ತವೆ. ಎರಡು ವಾರ ಅಥವಾ ಅದಕ್ಕಿಂತ ಹೆಚ್ಚಿನ ದಿನ ಸತತವಾದ ಕೆಮ್ಮು, ಜ್ವರ ಇದ್ದರೆ, ಸಂಜೆಗೆ ಜ್ವರ ಬರುವುದು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವುದು, ಹಸಿವಾಗದಿರುವ ಲಕ್ಷಣಗಳಿದ್ದರೆ ಕೂಡಲೇ ಕಫದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕರಿಗೆ ಕ್ಷಯದ ಅರಿವು ಮೂಡಿಸಿ ಟಿ.ಬಿ.ಮುಕ್ತ ಭಾರತ ದೇಶ ಮಾಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಗುರಿಯಾಗಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು. ಮೌನೇಶ ಹಡಪದ, ಜಿ.ಟಿ. ಹೋಳಿ, ಎಂ.ಕೆ. ಕುಲಕರ್ಣಿ, ಮಂಜುಳಾ ಹೂಗಾರ, ರೇಷ್ಮಾ ಲಮಾಣಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾಕಾರ್ಯಕರ್ತೆಯರು ಪಾಲ್ಗೊಂಡಿದ್ದರು.