ಲಕ್ಷ್ಮೇಶ್ವರ ಬರಪೀಡಿತ ತಾಲೂಕೆಂದು ಘೋಷಿಸುವಂತೆ ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಮಹಾಂತೇಶ ಮಣಕವಾಡ, ಮಲ್ಲಿಕಾರ್ಜುನ ನೀರಲೋಟಿ, ವಿನಯ ಪಾಟೀಲ, ಆನಂದ ಅಮರಶೆಟ್ಟಿ, ಇತರರಿದ್ದರು. 
ಗದಗ

ಲಕ್ಷ್ಮೇಶ್ವರ ತಾಲೂಕು ಬರಪೀಡಿತ ಘೋಷಿಸಿ drought

ಲಕ್ಷ್ಮೇಶ್ವರ: ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ಬರಗಾಲ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ ನೇತೃತ್ವದಲ್ಲಿ ಕಾರ್ಯಕರ್ತರು ತಹಸೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಶರಣು ಗೊಡಿ, ರೈತರಿಂದ ಬೆಳೆ ವಿಮೆ ಪರಿಹಾರ ಕೊಡಿಸುವ ಹೆಸರಿನಲ್ಲಿ ಹಣ ವಸೂಲಿ ಮಾಡುವ ಏಜೆಂಟರ ಹಸ್ತಕ್ಷೇಪ ತಡೆಗಟ್ಟಬೇಕು. ತಾಲೂಕಿನಲ್ಲಿ 2025- 26ನೇ ಸಾಲಿನ ಹಿಂಗಾರು ಬೆಳೆ ವಿಮೆ ಜಾರಿ ಮಾಡಬೇಕು. 2026- 27ನೇ ಸಾಲಿನ ಮುಂಗಾರು ಮಳೆ ಕೊರತೆಯಾಗಿರುವ ಪರಿಣಾಮ ರೈತರು ಬಿತ್ತನೆ ಮಾಡಿದ ಹೆಸರು, ಜೋಳ, ಮೆಣಸಿನಕಾಯಿ, ಬಳ್ಳೊಳ್ಳಿ, ಮೆಕ್ಕೆಜೋಳ, ಹತ್ತಿ, ತೊಗರಿ, ಶೇಂಗಾ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳು ಒಣಗುತ್ತಿವೆ. ಕೃಷಿ ಮಾತ್ರವಲ್ಲ ಕುಡಿಯುವ ನೀರಿನ ಅಭಾವ ಎದುರಾಗಿದೆ. ರೈತರು ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರ ತಕ್ಷಣ ಬರಗಾಲ ಘೋಷಿಸಿ, ಎಲ್ಲ ರೈತರಿಗೆ ಸೂಕ್ತ ಪರಿಹಾರಧನ ನೀಡಬೇಕು ಎಂದರು.
ಮಹಾಂತೇಶ ಮಣಕವಾಡ, ಮಲ್ಲಿಕಾರ್ಜುನ ನೀರಲೋಟಿ, ವಿನಯ ಪಾಟೀಲ, ಆನಂದ ಅಮರಶೆಟ್ಟಿ, ಸಿರಾಜ ಡಾಲಾಯತ, ಪ್ರವೀಣ ಆಚಾರಿ, ಲುಕಮಾನ ಬೆಟಗೇರಿ, ಕೈಸರ ಮಹಮ್ಮದಅಲಿ, ಮಹಾಂತೇಶ ಇಟಗಿ, ನಾಗರಾಜ ಸಾಲಾವಳಿಮಠ, ಕಿರಣ ಬಡಿಗೇರ, ಅಷ್ಪಾಕ ಬಾಗೋಡಿ, ಮಲ್ಲೇಶ ಬನ್ನಿ, ದುದ್ದು ಅಕ್ಕಿ, ಆಕಾಶ ಭಜಂತ್ರಿ, ಬಸವರಾಜ ಬೂದಿಹಾಳ, ಮಲ್ಲಿಕಜಾನ್ ಗದವಾಲ್, ನವಾಜ ಅತ್ತಾರ, ಮಹಾಂತೇಶ ಉಮಚಗಿ, ಧರ್ಮಶಿಂಗ್ ಕಿಲ್ಲೆದಾರ, ಇತರರಿದ್ದರು.