ಮುಳಗುಂದ ಅಂಜುಮನ್ ಶಾದಿಹಾಲ್‌ನಲ್ಲಿ ಕಾರ್ಮಿಕ ಇಲಾಖೆಯಿಂದ (labour day)ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಿಸಲಾಯಿತು. ಮಹ್ಮದಶಫಿ ಸಿದ್ದಿ, ಕಿರಣಕುಮಾರ, ಬಸಯ್ಯ ಇತರರಿದ್ದರು. 
ಗದಗ

LABOURS: ಕಾರ್ಮಿಕರು ಆರೋಗ್ಯದ ಕಾಳಜಿ ವಹಿಸಲಿ

ಮುಳಗುಂದ: ಕಟ್ಟಡ ನಿರ್ಮಾಣ ಸೇರಿದಂತೆ (LABOURS) ವಿವಿಧ ರೀತಿಯ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಕಾರ್ಮಿಕರು ಸುರಕ್ಷಾ ಪರಿಕರಗಳನ್ನ ಧರಿಸಿ ಕೆಲಸ ಮಾಡಬೇಕು. ಜೀವ ಅಮೂಲ್ಯವಾಗಿದ್ದು, ಕಾರ್ಮಿಕರು ಜಾಗ್ರತೆ ವಹಿಸಬೇಕು ಎಂದು ಉದಯ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಮಹ್ಮದಶಫಿ ಸಿದ್ದಿ ಹೇಳಿದರು.
ಇಲ್ಲಿನ ಶಾದಿಹಾಲ್‌ನಲ್ಲಿ ಕಾರ್ಮಿಕ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ ಹಾಗೂ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.
ಶಿಬಿರ ಸಂಯೋಜಕ ಕಿರಣಕುಮಾರ, ಬಸಯ್ಯ, ಸಂಘದ ಪದಾಧಿಕಾರಿಗಳಾದ ಮೌಲಾಸಾಬ ಸದರಭಾವಿ, ಕುಮಾರ ಹಡಪದ, ನೀಲಪ್ಪ ಭೋವಿ, ಸೈದುಸಾಬ ಕಲಕುಟ್ರ, ಮೋದಿನ ಲಾಡಸಾಬನವರ, ಮಹಾಂತೇಶ ಹಿರೇಮಠ, ಶಿವಾನಂದ ನಿಂಗೋಜಿ, ಇಸ್ಮಾಯಿಲ್ ಅಣ್ಣಿಗೇರಿ ಇತರರು ಇದ್ದರು.