ನರಗುಂದ:
ತಾಲೂಕಿನ ಕಣಕೀಕೊಪ್ಪ ಗ್ರಾಮದ ಫಕೀರಪ್ಪ ಶಿದ್ದಪ್ಪ ನುಗ್ಗಾನಟ್ಟಿ ಹಣ ಕಳೆದುಕೊಂಡವರು. ಮುಂಗಾರು ಹಂಗಾಮಿನ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿವಿಧ ಕೃಷಿ ಚಟುವಟಿಕೆಗಾಗಿ ರೈತ ಫಕೀರಪ್ಪ ಸೋಮವಾರ ಬೆಳಗ್ಗೆ ನರಗುಂದಕ್ಕೆ ಆಗಮಿಸಿದ್ದರು.
ಪಟ್ಟಣದ ಕೋರಿ ಕಾಂಪ್ಲೆಕ್ಸ್‌ನಲ್ಲಿರುವ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 4.80 ಲಕ್ಷ ರೂಪಾಯಿ ಹಣ ಪಡೆದು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ತಬ್ಬಲಚಿಯವರ ಅಂಗಡಿ ಹತ್ತಿರ ಬೈಕ್ ನಿಲ್ಲಿಸಿ ಎಲೆ-ಅಡಕೆ ಖರೀದಿಸಲು ಹೋದಾಗ ಬ್ಯಾಂಕ್‌ನಿಂದ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಬೈಕ್ ಸೈಡ್ ಬ್ಯಾಗ್‌ನಲ್ಲಿಟ್ಟಿದ್ದ ಹಣದ ಬ್ಯಾಗ್ ಎಗರಿಸಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.