ಹೂವಿನ ಶಿಗ್ಲಿ ಮಠದ ಖಡಕ್‌ರೊಟ್ಟಿ-ಕರಿಂಡಿ ಜಾತ್ರೆಗೆ ಗ್ರಾಮದ ಮಹಿಳೆಯರು ರೊಟ್ಟಿ (rotti) ಬುಟ್ಟಿ ಹೊತ್ತು ಸಾಗಿದರು. 
ಗದಗ

Rotti ಖಡಕ್‌ ರೊಟ್ಟಿ ಕರಿಂಡಿ ಜಾತ್ರೆ 13ರಿಂದ

ಮಂಜುನಾಥ ಕೆಂಪಸಣ್ಣವರ
ಲಕ್ಷ್ಮೇಶ್ವರ: ಸಮೀಪದ ಹೂವಿನಶಿಗ್ಲಿ ಮಠದಲ್ಲಿ ಜ.13 ರಿಂದ 15 ವರೆಗೆ ನಡೆಯುವ Rotti ಖಡಕ್‌ ರೊಟ್ಟಿ, ಕರಿಂಡಿ ಜಾತ್ರಾ ಮಹೋತ್ಸವ ಹಿನ್ನೆಲೆ ಶನಿವಾರ ಗ್ರಾಮದಲ್ಲಿ ಎತ್ತಿನ ಬಂಡಿಗಳ ಮೂಲಕ ರೊಟ್ಟಿ, ಕಡಬು ಇತರ ಆಹಾರ ಪದಾರ್ಥ ಸಂಗ್ರಹಿಸುವ ಕಾರ್ಯ ನೆರವೇರಿತು.
ಕಳೆದ ವರ್ಷದಿಂದ ಶ್ರೀಗಳೇ ಎತ್ತಿನ ಬಂಡಿ, ವಾದ್ಯಮೇಳದೊಂದಿಗೆ ಗ್ರಾಮದಲ್ಲಿ ಸಂಚರಿಸಿ ನೇರವಾಗಿ ಭಕ್ತರಿಂದಲೇ ರೊಟ್ಟಿ, ದವಸ ಧಾನ್ಯ ಸಂಗ್ರಹಿಸಿ ಮೆರವಣಿಗೆ ಮೂಲಕ ಮಠಕ್ಕೆ ತರುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಶ್ರೀಗಳೇ ಭಕ್ತರ ಮನೆ ಬಾಗಿಲಿನತ್ತ ಬರುತ್ತಾರೆಂಬ ಸಂಭ್ರಮದಿಂದ ಗ್ರಾಮ ಪಂಚಾಯಿತಿಯವರು ಊರೆಲ್ಲ ಸ್ವಚ್ಛತೆ ಮಾಡಿದ್ದರು. ಪ್ರತಿ ಓಣಿಯಲ್ಲೂ ಭಕ್ತರು ತಮ್ಮ ಮನೆಯ ಮುಂದೆ ತಳಿರು ತೋರಣ ಕಟ್ಟಿ, ರಂಗೋಲಿ ಹಾಕಿದ್ದರು.
ಅಲಂಕೃತ ಎತ್ತಿನ ಬಂಡಿ, ಭಜನೆ, ಡೊಳ್ಳು ವಾದ್ಯಮೇಳದ ಮೆರವಣಿಗೆ ವೇಳೆ ಎಲ್ಲ ಜಾತಿ, ಜನಾಂಗದ ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು ಶ್ರೀಮಠದ ಭಕ್ತ ಮಂಡಳಿಯ ಅಂದಾನಯ್ಯ ಹಿರೇಮಠ, ನೀಲಪ್ಪ ಹೊಸೂರ, ಆರ್.ಎಸ್. ಪಾಟೀಲ, ಮಾದೇವಪ್ಪ ಬಿಷ್ಟಣ್ಣವರ, ಸೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
"

ಹೂವಿನಶಿಗ್ಲಿ ಮಠದಲ್ಲಿ ಮಕರ ಸಂಕ್ರಾಂತಿ ಪುಣ್ಯಕಾಲದಲ್ಲಿ ಜರುಗುವ ಜಾತ್ರಾ ಮಹೋತ್ಸವ ನಿಮಿತ್ತ ನಡೆಯುವ ಖಟಕ್-ರೊಟ್ಟಿ, ಕರಿಂಡಿ, ಕಡಬು ಪ್ರಸಾದ ಮಾಡುವ ಸಂಪ್ರದಾಯವನ್ನು ಶ್ರೀಮಠದ ಲಿಂ.ನಿರಂಜನ ಮಹಾಸ್ವಾಮಿಗಳು ಹಾಕಿಕೊಟ್ಟಿದ್ದಾರೆ. 5 ದಶಕಗಳಿಂದ ಭಕ್ತರು ಮಠಕ್ಕೆ ರೊಟ್ಟಿ, ಧಾನ್ಯ ತಂದು ಕೊಡುತ್ತಿದ್ದರು. 2 ವರ್ಷದಿಂದ ನಾವೇ ಭಕ್ತರ ಮನೆಯತ್ತ ಹೋಗಿ ಬಂಡಿ ಮೂಲಕ ರೊಟ್ಟಿ ಸಂಗ್ರಹಿಸುವ ಕಾರ್ಯ ಮಾಡಿದ್ದೇವೆ. ಗ್ರಾಮದ ಭಕ್ತರು ಶ್ರೀಮಠದ ಶಕ್ತಿ ಮತ್ತು ಸಂಪತ್ತಾಗಿದ್ದು ಜಾತ್ರೆಯಷ್ಟೇ ಅಲ್ಲದೇ ವರ್ಷದುದ್ದಕ್ಕೂ ಗುರುಕುಲ ಮತ್ತು ಶಾಲೆಯ ಮಕ್ಕಳ ತ್ರಿವಿಧ ದಾಸೋಹ ಸೇವೆಗೆ ತನುಮನಧನದ ಸೇವೆ ಮಾಡುತ್ತ ಬಂದಿದ್ದಾರೆ. ಜಾತ್ರೆಯ 3 ದಿನಗಳ ಕಾಲ ನಾಡಿನ ಅನೇಕ ಹರಗುರುಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹ ಮಹೋತ್ಸವ ಜರುಲಿವೆ. ಶ್ರೀ > ಚನ್ನವೀರ ಮಹಾಸ್ವಾಮಿಗಳು