ಕಪ್ಪತಗುಡ್ಡದ  
ಗದಗ

ಕಪ್ಪತಗುಡ್ಡದ :ಜಾಗೃತಿ ಸಭೆಗಳು ಇಲ್ಲ. ಸೂಕ್ಷ್ಮ​ ಪರಿಸರ ಗುರುತಿಸುವ ಕೆಲಸಗಳಿಲ್ಲ.

ಶಿವಾನಂದ ಹಿರೇಮಠ
ಅಂತಿಮ ಅಧಿಸೂಚನೆ ನಂತರ ನಡೆದ ಮುಂದಿನ ಪ್ರಕ್ರಿಯೆ
ಶಿವಾನಂದ ಹಿರೇಮಠ, ಗದಗ
ಕಪ್ಪತಗುಡ್ಡದ ವನ್ಯಜಿವಿಧಾಮ ಸುತ್ತಲಿನ 322 ಚದರ್​ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ​ ವಲಯ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಇಲಾಖೆ ಘೋಷಿಸಿ, ಆದೇಶ ಹೊರಡಿಸಿ 6 ತಿಂಗಳು ಕಳೆದರೂ ಸಹ ಸೂಕ್ಷ$್ಮ ಪರಿಸಿದರ ರಕ್ಷಣೆಗೆ ಮುಂದಿನ ಪ್ರಕ್ರಿಯೆ ಬಗ್ಗೆ ಅರಣ್ಯ ಇಲಾಖೆ ಚಕಾರ ಎತ್ತುತ್ತಿಲ್ಲ. ಗೆಜೆಟ್​ ಅಧಿಸೂಚನೆಯಂತೆ ನೇಮಕವಾದ ಸಮಿತಿಯು ಸಭೆ ನಡೆಸಿಲ್ಲ. ಸೂಕ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳಾಗಲಿ, ಪರಿಸರ ಸೂಕ್ಷ$್ಮ ಪ್ರದೇಶದ ಹದ್ದುಬಸ್ತು ಗುರುತಿಸುವ ಕೆಲಸಗಳಾಗಲಿ ಇನ್ನೂ ಜರುಗದೇ ಇರುವ ಕಾರಣ ಇಲಾಖೆಗಳು ಕಪ್ಪತಗುಡ್ಡ ರಕ್ಷಣೆಯ ನಿಷ್ಕಾಳಜಿ ವಹಿಸಿದಂತೆ ಕಾಣುತ್ತಿದೆ. ಸೂಕ್ಷ್ಮ​ ಪರಿಸರ ವ್ಯಾಪ್ತಿ ಗ್ರಾಪಂಗಳಿಗೆ ಅರಣ್ಯ ಇಲಾಖೆಯಿಂದ ಪತ್ರ ರವಾನೆ ಮಾಡಿದ ಪ್ರಕ್ರಿಯೆ ಒಂದನ್ನು ಹೊರತು ಪಡಿಸಿ ಇನ್ನೂಳಿದ ಪ್ರಕ್ರಿಯೆಗಳು ನಡೆದಿಲ್ಲ. ಹೀಗಾಗಿ ಅಧಿಸೂಚನೆ ನಂತರವೂ ಸಹ ಸೂಕ್ಷ$್ಮ ಪರಿಸರ ವಲಯದಲ್ಲಿ ಸ್ಥಳಿಯ ಸಂಸ್ಥೆಗಳಿಂದ ಅನುಮತಿ ಪಡೆದು ನಡೆಸುವ ನಿಯಮ ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬೀಳುವುದೇ ಎಂಬ ಪ್ರಶ್ನೆ ಶುರುವಾಗಿದೆ.
ಕಳೆದ ಜೂನ್​ ತಿಂಗಳಲ್ಲಿ ಕಪ್ಪತಗುಡ್ಡ ಪ್ರದೇಶ ಆಯ್ದ 322 ಚ.ಕಿಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ​ ಪ್ರದೇಶ ಎಂದು ಕೇಂದ್ರ ಅರಣ್ಯ ಇಲಾಖೆ ಘೋಷಿಸಿತ್ತು. ಈ ಪ್ರದೇಶದ ವ್ಯಾಫ್ತಿಯಲ್ಲಿ ಹಲವು ಕಪ್ಪತಗುಡ್ಡ ಪರಿಸರ ಹಲವು ಗ್ರಾಮಗಳು ಒಳಪಡುತ್ತವೆ. ಕೇಂದ್ರ ಸರ್ಕಾರದ ತೀರ್ಮಾನದಿಂದ ಸ್ಥಳಿಯ ಗ್ರಾಮಸ್ಥರ ಜೀವನೋಪಾಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಉಳಿಮೆ ಮತ್ತು ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡತಡೆ ಇಲ್ಲದನ್ನು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಸರ್ಕಾರದ ಅಂತಿಮ ಅಧಿಸೂಚನೆಯಂತೆ ಭವಿಷ್ಯದಲ್ಲಿ ಸೂಕ್ಷ$್ಮ ಪರಿಸರ ವಲಯದಲ್ಲಿ ನಿಯಮ ಬಾಹಿರ ಚಟುವಟಿಕೆ ಆಗದಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಜಿಪಂ ಒಳಗೊಂಡು ಜಿಲ್ಲಾಡಳಿತ ಇನ್ನೂ ಮುಂದಿನ ಪ್ರಕ್ರಿಯೆ ಕೈಗೊಳ್ಳದಿರುವುದು ಪರಿಸರ ಪ್ರೇಮಿಗಳಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಜಾರಿ ಆಗಬೇಕಿರುವ ಕ್ರಮಗಳೇನು?
ಈ ಹಿಂದೆ ಕೇಂದ್ರದ ಅಧಿಸೂಚನೆ ನಂತರವೂ ಸ್ಥಳಿಯ ಸಂಸ್ಥೆಗಳಾದ ಜಿಪಮ, ತಾಪಂ ಗಳು ಅಧಿಸೂಚನೆ ಉಲ್ಲಂಘಿಸಿ ನಿಯಮ ಬಾಹಿರ ಚಟುವಟಿಕೆಗೆ ಅನುಮತಿ ನೀಡಿದ್ದರ ಪರಿಣಾಮ ಕಪ್ಪತಗುಡ್ಡ ವ್ಯಾಪ್ತಿಯ ಸೂಕ್ಷ$್ಮ ಪರಿಸರ ವಲಯದಲ್ಲಿ ವಾಣಿಜ್ಯೋದ್ಯಮ ಕೈಗಾರಿಕೆಗಳು ತಲೆ ಎತ್ತುತ್ತಿವೆ. ಹೀಗಾಗಿ ಮುಂದಿನ ಕ್ರಮಗಳ ವಿಳಂಬದಿಂದ ಪರಿಸ್ಥಿತಿ ಕೈಮೀರಿ ಹೋಗಬಹುದು. ಸರ್ಕಾರ ಅಧಿಸೂಚಿತ ಕಪ್ಪತಗುಡ್ಡ ವನ್ಯಜಿವಿ ಧಾಮದ ಸುತ್ತಲಿನ 322 ಚ.ಕಿಮೀ ಪ್ರದೇಶವನ್ನು ಆಯಾ ಗ್ರಾಮ ನೆಯಲ್ಲಿ ಅಳವಡಿಸುವ ಜಿಪಂ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಸಭೆ ಜರುಗಬೇಕಿದೆ. ಈ ಆಧಾರದಲ್ಲಿ ಸ್ಥಳಿಯ ಸಂಸ್ಥೆಗಳ ಅಧಿಕಾರವನ್ನು ಎಚ್ಚರಗೊಳಿಸುವ ನಿಟ್ಟಿನಲ್ಲಿ ಗ್ರಾಮ ನೆಗಳಲ್ಲಿ ಸೂಕ್ಷ ಪರಿಸರ ವಲಯವನ್ನು ನಮೂದಿಸುವ ಕೂಗು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಇಲಾಖೆಗಳು ಎಚ್ಚೆತ್ತುಕೊಂಡು ಪರಿಸರ ಸೂಕ್ಷ$್ಮ ವಲಯದಲ್ಲಿ ಜಾಗೃತಿ ಅಭಿಯಾನದ ಜತೆಗೆ ಸೂಕ್ಷ$್ಮ ಪರಿಸರ ವಲಯ ಗುರುತಿಸುವ ಕೆಲಸ ಆಗಬೇಕಿದೆ.
ಘೋಷಿತ ಪರಿಸರದಲ್ಲಿ ಎಲ್ಲ ರೀತಿಯ ಗಣಿಗಾರಿಕೆ, ಪರಿಸರಕ್ಕೆ ಹಾನಿ ಮಾಡುವ ಕೈಗಾರಿಕೆಗಳ ಸ್ಥಾಪನೆ, ಹೊಸ ಉಷ್ಣ ವಿದ್ಯುತ್​ ಯೋಜನೆಗಳು, ನೈಸಗಿರ್ಕ ಜಲಮೂಲಗಳಿಗೆ ಸಂಸ್ಕರಿಸದ ತ್ಯಾಜ್ಯಗಳನ್ನು ವಿಸಜಿರ್ಸುವುದು, ಹೊಸ ನತ್ಯಾಜ್ಯ ವಿಲೇವಾರಿ ಟಕಗಳು, ಜೈವಿಕ ಮತ್ತು ವೈದ್ಯಕಿಯ ತ್ಯಾಜ್ಯ ಸುಡುವ ಟಕಗಳು ಮತ್ತು ಇಟ್ಟಿಗೆ ಗೂಡು ಆರಂಭಕ್ಕೆ ಅವಕಾಶ ಇಲ್ಲ. ಸ್ಥಳಿಯ ಗ್ರಾಪಂ ನಿಂದ ನಿರಪೇಕ್ಷಣಾ ಪತ್ರ ಪಡೆದು ಖಾಸಗಿ ಸಂಸ್ಥೆಗಳು ಈ ಮೇಲಿನ ಉದ್ಯಮವನ್ನು ಆರಂಭಿಸುವ ಅವಕಾಶವಿದೆ. ಹೀಗಾಗಿ ಗ್ರಾಮ ನೆಗಳಲ್ಲಿ ಸೂಕ್ಷ್ಮ​ ಪರಿಸರ ವಲಯ ನಮೂದಿಸುವುದು ಅವಶ್ಯವಿದೆ.
ಯಾವ ಗ್ರಾಮಗಳ ಚಟುವಟಿಕೆ ನಿಷೇಧ:
ಗದಗ ತಾಲೂಕಿನಲ್ಲಿ ಅಡವಿ ಸೋಮಾಪುರ, ಪಾಪನಾಶಿ, ನಭಾಪುರ, ಬೆಳದಡಿ, ಶಿರುಂಜಾ, ಕಬಲಾಯತಕಟ್ಟಿ, ಸೊರಟೂರು, ಹಂಗನಕಟ್ಟಿ, ವೆಂಕಟಾಪೂರ, ಲೆ$್ಮಶ್ವರ ತಾಲೂಕಿನ ಶೆಟ್ಟಿಕೆರೆ, ಕುಂದ್ರಳ್ಳಿ, ನಾದಿಗಟ್ಟಿ, ಆದ್ರಳ್ಳಿ, ಸೋಗಿವಾಲ, ಶಿರಹಟ್ಟಿ ತಾಲೂಕಿನ ಪರಸಾಪುರ, ಚಬ್ಬಿ, ವರವಿ, ಮಜ್ಜೂರು, ಕುಸ್ಲಾಪುರ, ಕಡಕೋಳ, ಜಲ್ಲಿಗೇರಿ, ತೆಗ್ಗಿನಬಾವನೂರು, ನವೆಭಾವನೂರು, ಭಾವನೂರು, ಹಡಗಲಿ, ಬನ್ನಿಕೊಪ್ಪ, ಕೆರಿಹಳ್ಳಿ, ಮುಂಡರಗಿ ತಾಲೂಕಿನ ಶಿಂಗಟರಾಯನಕೆರೆ, ಕದಾಂಪುರ, ದಿಂಡೂರು, ಹಿರೇವಡ್ಡಟ್ಟಿ, ಹಾರೋಗೇರಿ, ಮುಸ್ತಿಕೊಪ್ಪ, ಕಲಕೇರಿ, ವೀರಾಪೂರ, ಬಿಡ್ನಾಳ, ಕೋರ್ಲಹಳ್ಳಿ, ಗಂಗಾಪುರ, ಶಿರನಹಳ್ಳಿ ಗ್ರಾಮಗಳ ಕೆಲ ಭಾಗಗಳಲ್ಲಿ ಅನುಮತಿಸಿದ ಮತ್ತು ಕೆಲ ನಿರ್ಬಂಧಿತ ಚಟುವಟಿಕೆಗಳನ್ನು ಅಧೀಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
= = = = =
ಕಪ್ಪತಗುಡ್ಡ ವಿಶೇಷತೆ:
* ಕಪ್ಪತಗುಡ್ಡ 32,346 ಹೆಕ್ಟೇರ್​ ಪ್ರದೇಶದಲ್ಲಿ ವ್ಯಾಪಿಸಿದೆ.
* ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರ ವರೆಗೆ ಸುಮಾರು 63 ಕಿ.ಮೀ. ವ್ಯಾಪ್ತಿ.
* 2019ರಲ್ಲಿ ರಾಜ್ಯ ಸರ್ಕಾರ ಕಪ್ಪತಗುಡ್ಡದ 24,415 ಹೆಕ್ಟೇರ್​ ಪ್ರದೇಶವನ್ನು ವನ್ಯಜಿವಿಧಾಮ ಎಂದು ಘೋಷಣೆ ಮಾಡಿದೆ.
* ಕಪ್ಪತಗುಡ್ಡ ವನ್ಯಜಿವಿಧಾಮದ ಸುತ್ತಲಿನ 322 ಚದರ್​ ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ$್ಮ ವಲಯ ಎಂದು ಇತ್ತೀಚೆಗೆ ಗೋಷಿಸಿದೆ.
* 62 ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ಕಾರ ಘೋಷಿತ ಸೂಕ್ಷ$್ಮಪರಿಸರ ವಲಯ
* ವನ್ಯಜಿವಿಧಾಮದ ಅಂಚಿನಿಂದ ಕನಿಷ್ಠ 1 ಕಿ.ಮೀ.ನಿಂದ ಗರಿಷ್ಠ 4.30 ಕಿ.ಮೀ.ವರೆಗೆ ಪರಿಸರ ಸೂಕ್ಷ್ಮ​ ವಲಯವನ್ನು ಗುರುತಿಸಲಾಗಿದೆ. ಉತ್ತರ ದಿಕ್ಕಿನಲ್ಲಿ 1 ಕಿ.ಮೀ. ನಿಂದ 3.25 ಕಿ.ಮೀ., ಪಶ್ಚಿಮ ದಿಕ್ಕಿನಲ್ಲಿ 4.30 ಕಿ.ಮೀ., ವಾಯುವ್ಯ ದಿಕ್ಕಿನಲ್ಲಿ 1.96 ಕಿ.ಮೀ., ಇನ್ನುಳಿದ ದಿಕ್ಕುಗಳಲ್ಲಿ 1 ಕಿ.ಮೀ ಘೋಷಣೆ ಮಾಡಲಾಗಿದೆ.
* 300ಕ್ಕೂ ಹೆಚ್ಚ ಔಷಧೀಯ ಸಸ್ಯಗಳು, 18ಕ್ಕೂ ಹೆಚ್ಚು ವನ್ಯಜಿವಿಗಳು, ನೂರಾರು ಬಗೆಯ ಪಕ್ಷಿಗಳಿಗೆ ಕಪ್ಪತಗುಡ್ಡ ಆಶ್ರಯ ನೀಡಿದೆ.