ನರೇಗಲ್ಲ ಹಿರೇಮಠದ ಜಾತ್ರಾ(Hiremath jaatre) ಮಹೋತ್ಸವದಲ್ಲಿ ಕಾಶಿ ಜಗದ್ಗುರುಗಳು ಕಾಶಿನಾಥನ ಕಾಶಿ ಯಾತ್ರೆ ಮತ್ತು ವೈದ್ಯ ಪಂ. ಕಾಶಿನಾಥ ಶಾಸ್ತ್ರಿಗಳು ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿದರು. ವೀರಭದ್ರ ಶಿವಾಚಾರ್ಯರು, ಮಲ್ಲಿಕಾರ್ಜುನ ಶಿವಾಚಾರ್ಯರು, ಡಾ. ಕೆ. ಬಿ. ಧನ್ನೂರ, ಎಸ್. ಎಸ್. ಮೇಟಿ, ವೀರೇಶ ಕೂಗುಮಠ, ವಿ. ಕೆ. ಗುರುಮಠ ಇದ್ದರು.
- ನರೇಗಲ್ಲ ಹಿರೇಮಠ (Hiremath jaatre) ಜಾತ್ರಾಮಹೋತ್ಸವ
- ಜಗದ್ಗುರು ಚಂದ್ರಶೇಖರ ಶ್ರೀಗಳು ಆಶೀರ್ವಚನ
- ಪುರಾಣ ಮಂಗಲೋತ್ಸವ, ಗ್ರಂಥಗಳ ಲೋಕಾರ್ಪಣೆ
ನರೇಗಲ್ಲ: (Hiremath jaatre) ವಿದ್ಯೆ ಕಲಿಯುವುದು ಮುಖ್ಯವಲ್ಲ. ಕಲಿತ ವಿದ್ಯೆಯನ್ನು ಸರ್ವರಿಗೂ ತಲುಪಿಸಿ, ಅವರನ್ನು ಜಾಗೃತರಾಗುವಂತೆ ಮಾಡುವುದು ಒಂದು ತಪಸ್ಸಿದ್ದಂತೆ ಎಂದು ಕಾಶಿ ಪೀಠದ ಜ್ಞಾನ ಸಿಂಹಾಸನಾಧೀಶ್ವರ ಜ. ಚಂದ್ರಶೇಖರ ಭಗವತ್ಪಾದಂಗಳವರು ಹೇಳಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಹಿರೇಮಠದ ಜಾತ್ರಾಮಹೋತ್ಸವದಲ್ಲಿ (Hiremath jaatre) ಪುರಾಣ ಮಂಗಲೋತ್ಸವ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ‘ಹಿಂದೆ ನಾಲ್ಕು ವೇದಗಳನ್ನು ಓದುವ, 28 ಆಗಮಗಳನ್ನು ತಿಳಿಯುವ ಜನರಿದ್ದು. ಆದರೆ, ಈಗ ಅವುಗಳನ್ನು ಓದುವವರೂ ಇಲ್ಲ, ಓದಲು ಸಮಯವೂ ಇಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಸಿದ್ಧಾಂತ ಶಿಖಾಮಣಿಯು ಸರಿಯಾದ ಉತ್ತರ ಕೊಡುತ್ತದೆ. ಹೀಗಾಗಿ ಎಲ್ಲರೂ ಸಿದ್ಧಾಂತ ಶಿಖಾಮಣಿಯನ್ನು ಓದಬೇಕು ಎಂದರು.
ಮನುಷ್ಯ ಜನ್ಮ ದೊರಕುವುದೇ ದುರ್ಲಭ. ಅದನ್ನು ವೃಥಾ ಕಳೆಯಬಾರದು. ಮಾನವ ಜನ್ಮವನ್ನು ವ್ಯರ್ಥ ಮಾಡಿಕೊಳ್ಳದೆ, ದಾನ-ಧರ್ಮ, ಸತ್ಸಂಗದಲ್ಲಿ ಕಾಲ ಕಳೆಯುತ್ತ ಸಾರ್ಥಕಪಡಿಸಿಕೊಳ್ಳಬೇಕು ಎಂದು ಜಗದ್ಗುರುಗಳು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಅಬ್ಬಿಗೇರಿ-ಸಿದ್ದರಬೆಟ್ಟದ ಷ.ಬ್ರ. ಶ್ರೀ ವೀರಭದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಭಗವಂತನ ಪ್ರತಿ ಅವತಾರದ ಹಿಂದೆಯೂ ಒಂದು ಸಂದೇಶವಿದೆ. ದುಷ್ಟರನ್ನು ಸೆದೆಬಡಿದು ಶಿಷ್ಟರನ್ನು ಪಾಲಿಸುವುದಕ್ಕಾಗಿಯೆ ಭಗವಂತ ಕಾಲಕಾಲಕ್ಕೆ ಅವತಾರವೆತ್ತಿ ಬರುತ್ತಾನೆ. ಶ್ರೀ ವೀರಭದ್ರೇಶ್ವರನನ್ನು ಸರ್ವರೂ ಪೂಜಿಸುತ್ತಾರೆ. ಅವನು ಸಕಲರನ್ನೂ ಕಾಯುತ್ತಾನೆ. ಅವನ ಪುರಾಣ ಕೇಳಿದವರೇ ಧನ್ಯರು ಎಂದರು.
ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿ ಜಾತ್ರೆ ಪ್ರಾರಂಭಿಸಿ ಮುಂದಿನ ವರ್ಷಕ್ಕೆ ಹತ್ತು ವರ್ಷಗಳಾಗುತ್ತವೆ. ಈ ದಶಮಾನೋತ್ಸವ ಸಂದರ್ಭದಲ್ಲಿ ಜಗದ್ಗುರುಗಳು ಇಲ್ಲಿಯೇ ಐದು ದಿನಗಳ ಕಾಲ ವಾಸ್ತವ್ಯ ಮಾಡಿ ನಮಗೆಲ್ಲ ಮಾರ್ಗದರ್ಶನ ಮಾಡಬೇಕು ಎಂದು ವಿನಂತಿಸಿದರು.
ಡಾ. ಕೆ.ಬಿ. ಧನ್ನೂರ, ಎಸ್.ಎಸ್. ಮೇಟಿ, ವೀರೇಶ ಕೂಗುಮಠ, ವಿ.ಕೆ. ಗುರುಮಠ ಇತರರಿದ್ದರು. ನಿವೃತ್ತ ಶಿಕ್ಷಕ ಎಂ.ಎಸ್ ದಢೇಸೂರಮಠ ನಿರೂಪಿಸಿದರು. ಜಗದ್ಗುರುಗಳು ಕಾಶಿನಾಥನ ಕಾಶಿ ಯಾತ್ರೆ ಮತ್ತು ವೈದ್ಯ ಪಂ. ಕಾಶಿನಾಥ ಶಾಸ್ತ್ರಿಗಳು ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿದರು.
ಜಂಗಮ ವಟುಗಳಿಗೆ, ಭಕ್ತರಿಗೆ ಲಿಂಗದೀಕ್ಷೆ
ನರೇಗಲ್ಲ ಹಿರೇಮಠದ ಜಾತ್ರೆ (Hiremath jaatre) ನಿಮಿತ್ತ ಸೋಮವಾರ ಮಳೆಮಲ್ಲೇಶ್ವರನಿಗೆ ವಿಶೇಷ ಅಭಿಷೇಕ ಜರುಗಿತು.
ಜಂಗಮ ವಟುಗಳಿಗೆ ಸಾಮೂಹಿಕ ಅಯ್ಯಚಾರ, ಲಿಂಗದೀಕ್ಷೆ ನೀಡಿ ಆಶೀರ್ವಚನ ನೀಡಿದ ಮಲ್ಲಿಕಾರ್ಜುನ ಶಿವಾಚಾರ್ಯರು, ’ಜಂಗಮರು ಶಿವನ ಜ್ಞಾನ ಪಡೆಯಬೇಕಾದರೆ ಮೊದಲು ಅಯ್ಯಚಾರ ದೀಕ್ಷೆ ಪಡೆಯಬೇಕು. ಲಿಂಗದೀಕ್ಷೆ, ಸಂಸ್ಕಾರದಿಂದ ಮನುಷ್ಯ ಪರಿಪೂರ್ಣನಾಗುತ್ತಾನೆ. ಅಯ್ಯಚಾರದಿಂದ ಮಾನವನ ಪ್ರತಿನಿತ್ಯ ಲಿಂಗಪೂಜೆ ಮಾಡುತ್ತ ಹೋದಂತೆ ಶಾಂತಿ, ನೆಮ್ಮದಿಯಿಂದ ಜೀವನ ಸಾರ್ಥಕವಾಗುತ್ತದೆ ಎಂದರು. ಹೊಸಳ್ಳಿಮಠ, ರುದ್ರಮುನಿ ಹಿರೇಮಠ, ಗುರಪಾದಯ್ಯ ಪ್ರಭುಸ್ವಾಮಿಮಠ ಹಾಗೂ ರುದ್ರಯ್ಯ ಸೊಬರದಮಠ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.
ಅಡ್ಡ ಪಲ್ಲಕ್ಕಿ ಮಹೋತ್ಸವ
ನರೇಗಲ್ಲ ಹಿರೇಮಠದ ಜಾತ್ರೆ (Hiremath jaatre) ನಿಮಿತ್ತ ಶ್ರೀ ಶಿವಯೋಗಿ ಶಿವಾಚಾರ್ಯರು ವಿರಚಿತ ಸಿದ್ಧಾಂತ ಶಿಖಾಮಣಿ ಕೃತಿ ಹಾಗೂ ಹಿಂದಿನ ಗುರುಗಳ ಭಾವಚಿತ್ರದ ಅಡ್ಡಪಲ್ಲಕ್ಕಿ ಮಹೋತ್ಸವ ಸೋಮವಾರ ನೆರವೇರಿತು. ಮಲ್ಲಿಕಾರ್ಜುನ ಶಿವಾಚಾರ್ಯರು ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಚಾಲನೆ ನೀಡಿದರು. ಪಲ್ಲಕ್ಕಿ ಮುಂದೆ ಮಹಿಳೆಯರು
ಕುಂಭ ಹೊತ್ತು ಸಾಗಿದರು. ಉತ್ಸವದುದ್ದಕ್ಕೂ ಸಾಗಿದ ಭಕ್ತರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಜಗದ್ಗುರು ಪಂಚಾಚಾರ್ಯ ಮಹಾರಾಜಕಿ ಜೈ, ರೇಣುಕಾಚಾರ್ಯ ಮಹಾರಾಜಕಿ ಜೈ ಜಯಘೋಷ ಮೊಳಗಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಸಾಗಿತು. ಮಹಿಳೆಯರ ಡೊಳ್ಳು ಮೇಳ ಹಾಗೂ ಪುರವಂತರು ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡಿದರು. ನಂತರ ಅನ್ನಸಂತರ್ಪಣೆ ನೆರವೇರಿತು. ನರೇಗಲ್ಲ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.