ರೈತರ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಚರ್ಚಿಸಲು ಲಕ್ಷ್ಮೇಶ್ವರದಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ರವಿಕಾಂತ ಅಂಗಡಿ ಮಾತನಾಡಿದರು. ಸಮಗ್ರ ರೈತಪರ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಮಾಗಡಿ, ಮಹೇಶ ಹೊಗೆಸೊಪ್ಪಿನ ಇತರರು ಇದ್ದರು. 
ಗದಗ

OFFICER: ಅಧಿಕಾರಿಗಳು ಹೀಗೆ ಮಾಡೋದು ಸರಿನಾ..?

ಲಕ್ಷ್ಮೇಶ್ವರ: ಪಟ್ಟಣದ ಕೆಂಚಲಾಪುರ ಓಣಿಯ ಮಾಗಡಿಯವರ ಇಂಡಸ್ಟ್ರೀಜ್‌ನಲ್ಲಿ ರೈತರ ವಿವಿಧ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲು ಶುಕ್ರವಾರ ಸಮಾಲೋಚನ ಸಭೆ ನಡೆಸಲಾಯಿತು.
ವಕೀಲ ರವಿಕಾಂತ ಅಂಗಡಿ ಮತ್ತು ಸಮಗ್ರ ರೈತಪರ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ‘ರಸಗೊಬ್ಬರ ನೀಡುವ ವಿಚಾರದಲ್ಲಿ ಎಫ್‌ಐಡಿ ಆದ ರೈತರಿಗೆ ಒಂದು ಚೀಲ ಗೊಬ್ಬರ ಎಂಬ ನಿರ್ಬಂಧ ವಿಧಿಸಿರುವದನ್ನು ಕೈಬಿಡಬೇಕು. ಮೊದಲಿನಂತೆ ರೈತರಿಗೆ ಹೆಬ್ಬೆಟ್ಟು ಒತ್ತುವ ಪದ್ಧತಿ ಕೈಬಿಟ್ಟು, ಒಟಿಪಿ ಮೂಲಕ ಬೀಜ, ರಸಗೊಬ್ಬರ ವಿತರಣೆ ಮಾಡಬೇಕು. ಅಲ್ಲದೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯವರು ರೈತರಿಗೆ ಕೆಲವೇ ಗೊಬ್ಬರಗಳ ಮಾಹಿತಿ ನೀಡದೇ ಎಲ್ಲ ರಸಗೊಬ್ಬರಗಳ ಬಗ್ಗೆಯೂ ಮಾಹಿತಿ ನೀಡಬೇಕು. ಸೌಲಭ್ಯಗಳು ನೇರವಾಗಿ ರೈತರಿಗೆ ಮುಟ್ಟಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.
ಕೃಷಿಕ ಸಮಾಜ (ನವದೆಹಲಿ) ತಾಲೂಕು ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಮತ್ತು ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಬೆಳೆ ವಿಮೆ ರೈತರಿಗೆ ಬಂದಿಲ್ಲ. ಆದಷ್ಟು ಬೇಗ ಬೆಳೆ ವಿಮೆ ಬಿಡುಗಡೆ ಮಾಡಬೇಕು, ರೈತರ ಸಮಸ್ಯೆ ಬಂದಾಗ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ. ರೈತರ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ ಎಂದು ಹೇಳಿದರು.
ಬಸವರಾಜ ಹಿರೇಮನಿ, ನೀಲಪ್ಪ ಶೇರಸೂರಿ, ಹೊನ್ನಪ್ಪ ವಡ್ಡರ ಟಾಕಪ್ಪ ಸಾತಪುತೆ ಮಾತನಾಡಿದರು. ನಾಮದೇವ ಮಾಂಡ್ರೆ, ಸಂಜೀವ ಹುಡೇದ, ಬಸವರಾಜ ಜಾಲಗಾರ, ಚಂದ್ರು ಮಾಗಡಿ, ಮಂಜುನಾಥ ಮುಳಗುಂದ, ಶಂಕರ ಬ್ಯಾಡಗಿ, ವೀರಣ್ಣ ಕಟಗಿ, ಪವನ ಬಂಕಾಪುರ, ಮುತ್ತಣ್ಣ ನೀರಲಗಿ, ಮಲ್ಲಿಕಾರ್ಜುನ ನೀರಾಲೋಟ, ರಾಜು ಗುಡಗೇರಿ, ಶಿವಪುತ್ರಪ್ಪ ತಾರಿಕೊಪ್ಪ, ಪದ್ಮನಗೌಡ ಪಾಟೀಲ, ಫಕೀರಪ್ಪ ಕುಸಲಾಪುರ, ನಾಗನಗೌಡ ಪಾಟೀಲ, ಮಹಾಂತೇಶ ಉಮಚಗಿ ಇತರರಿದ್ದರು.