BUDGET  
ಗದಗ

BUDGET ಬಜೆಟ್ ಮನವಿಗೆ ಮಾಹಿತಿ, ಸಲಹೆಗಳಿಗೆ ಸೂಚನೆ

ರವಿ ಎಸ್. ಬಳೂಟಗಿ
ಗದಗ: ನಗರದ ಚೇಂಬರ್ ಕಾಮರ್ಸ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಮುಂಗಡ (BUDGET ) ಪತ್ರದ ಮನವಿ ತಯಾರಿಕೆ ಸಭೆ ಗುರುವಾರ ಜರುಗಿತು.
ಅಧ್ಯಕ್ಷ ಶರಣು ಗುಡಿಮನಿ ಮಾತನಾಡಿ, ಸರ್ಕಾರಗಳು ಸಂಸ್ಥೆಗೆ ಪ್ರತಿ ವರ್ಷವು ವಿವಿಧ ಬೇಡಿಕೆಗಳ ಕುರಿತು ಮನವಿ ನೀಡಲು ಆಮಂತ್ರಣ ನೀಡುತ್ತ ಬಂದಿದೆ. ಸಂಸ್ಥೆಯಿಂದ ಜಿಎಸ್‌ಟಿ, ವಾಣಿಜ್ಯ ತೆರಿಗೆ, ವೃತ್ತಿ ತೆರಿಗೆ, ಆದಾಯ ತೆರಿಗೆ, ಎಪಿಎಂಸಿ, ಕಾರ್ಮಿಕ ವಿಷಯಗಳು, ಸ್ವಯಂ ಘೋಷಿತ ಆಸ್ತಿ ತೆರಿಗೆ, ನಗರಾಭಿವೃದ್ಧಿ, ರೈಲ್ವೆ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದ ಮತ್ತು ಗದಗ ಜಿಲ್ಲೆಯ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯಗಳು ಮತ್ತು ಕೈಗಾರಿಕೋದ್ಯಮಿಗಳ ಸಮಸ್ಯೆಗಳ ವಿಷಯವಾಗಿ ಸಂಸ್ಥೆಯಿಂದ ಮುಂಗಡ ಪತ್ರದ ಮನವಿ ತಯಾರಿಸಬೇಕಿದೆ. ಸಂಸ್ಥೆಯ ಸದಸ್ಯರು ಮತ್ತು ಉದ್ಯಮಿಗಳು ಅಗತ್ಯ ವಿಷಯಗಳ ಕುರಿತು ಸಂಸ್ಥೆಗೆ ಮಾಹಿತಿ ನೀಡಬೇಕು ಎಂದರು.
ಸಂಸ್ಥೆಯ ಸದಸ್ಯರು, ವ್ಯಾಪಾರಸ್ಥರು ಮತ್ತು ವಾಣಿಜ್ಯೋದ್ಯಮಿಗಳು, ಸಂಘ ಸಂಸ್ಥೆಗಳಿಂದ ಈಗಾಗಲೇ ಸಲಹೆ ಸೂಚನೆಗಳಿದ್ದರೆ, ಲಿಖಿತ ರೂಪದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ತಿಳಿಸಬೇಕು ಎಂದರು.
ಹಲವು ವಿಷಯಗಳ ಬಗ್ಗೆ ವಿವರವಾಗಿ ಮತ್ತು ವ್ಯಾಪಾರಸ್ಥರಿಗೆ, ವಾಣಿಜ್ಯೋದ್ಯಮಿಗಳ ಅನುಕೂಲ ಹಾಗೂ ಅನಾನುಕೂಲ ಮತ್ತು ಸರ್ಕಾರದಿಂದ ಆಗುತ್ತಿರುವ ಅನ್ಯಾಯ, ಬದಲಾವಣೆ ಕುರಿತು ಚರ್ಚಿಸಲಾಯಿತು. ತೆರಿಗೆ ಉಪ ಸಮಿತಿ ಚೇರ್ಮನ್ ವಿಜಯಕುಮಾರ ಮಾಟಲದಿನ್ನಿ, ಚನ್ನವೀರಪ್ಪ ಪ್ರಭಣ್ಣ ಹುಣಸಿಕಟ್ಟಿ, ಇತರರಿದ್ದರು