ಹೊಳೆಆಲೂರಲ್ಲಿ ಆಯೋಜಿಸಿದ್ದ ಧರ್ಮ ಸಭೆಯನ್ನು (religion) ಉಜ್ಜಯನಿ ಜಗದ್ಗುರು ಶ್ರೀ ಸಿದ್ಧಲಿಂಗರಾಜೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು.
ಹೊಳೆಆಲೂರ: ಹಿಂದು ಧರ್ಮ, ಸಂಸ್ಕೃತಿ ಹಾಗೂ ಆಚಾರ ವಿಚಾರಗಳ ಮೇಲೆ ಪರಕೀಯರ ದಾಳಿ ನಿರಂತರವಾಗಿ ನಡೆದರೂ, ಭಾರತದ ಧರ್ಮ religion ಹಾಗೂ ಜೀವನ ಶೈಲಿಯನ್ನು ನಾಶಗೊಳಿಸಲು ಯಾರಿಗೂ ಸಾಧ್ಯವಾಗಿಲ್ಲ ಎಂದು ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ಧ್ದಲಿಂಗರಾಜೇಂದ್ರ ಶಿವಾಚಾರ್ಯರು ಹೇಳಿದರು.
ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಹಿಂದೆ ಗುರುಕುಲ ಶಿಕ್ಷಣವು ಗುಡಿ-ಗುಂಡಾರಗಳಲ್ಲಿ ನಡೆಯುತ್ತಿದ್ದ ಕಾರಣ ಕಲಿಯುವವರಿಗೆ ಮತ್ತು ಕಲಿಸುವವರಿಗೆ ದೈವ ಭಕ್ತಿ, ದೇಶ ಭಕ್ತಿ, ನೈತಿಕ ಚೌಕಟ್ಟು, ಪಾಪ ಪ್ರಜ್ಞೆ ಇರುತ್ತಿತ್ತು. ಆದರೆ, ಇಂದು ಅಂಕ ಗಳಿಕೆಯ ಭರದಲ್ಲಿ ಗುಣಾತ್ಮಕ ಶಿಕ್ಷಣ, ನಡತೆ, ಸಾಮಾಜಿಕ ಪ್ರಜ್ಞೆ ಯುವಕರಲ್ಲಿ ಮಾಯವಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.
ಅಮೆರಿಕದ ನಾಸಾ ಸಂಸ್ಥೆ ಒಂದರಲ್ಲಿಯೇ 7540 ಭಾರತೀಯ ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರೆ ನಮ್ಮ ದೇಶದ ಪ್ರತಿಭಾ ಪಲಾಯನ ಯಾವ ಪ್ರಮಾಣದಲ್ಲಿದೆ ಎಂಬುದು ಆತಂಕ ಮೂಡಿಸುವಂತಿದೆ. ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಿ ಐಐಟಿ ಸೇರಿದಂತೆ ಪ್ರತಿಷ್ಠ್ಠಿತ ಸಂಸ್ಥೆಗಳಲ್ಲಿ ಉಚಿತ ಸೀಟು ಪಡೆಯುವ ಯುವ ಶಕ್ತಿ ಕನಿಷ್ಠ 10 ವರ್ಷ ದೇಶದಲ್ಲಿಯೇ ಸೇವೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಕಟ್ಟಳೆ ಹಾಕಿದರೆ ಭಾರತ ಇನ್ನಷ್ಟು ಪ್ರಖರವಾಗಿ ಬೆಳೆದು ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ ಎಂದರು.
ಹುಣಸಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಕಾರಂಜಿ ಮಠದ ಡಾ. ಶಿವಯೋಗಿ ದೇವರು, ರೋಣ ಹೊಸಳ್ಳಿ ಬೂದೀಶ್ವರ ಮಠದ ಡಾ.ವಿಶ್ವನಾಥ ಸ್ವಾಮಿಗಳು, ಅಕ್ಕಿಆಲೂರ ಸಾಯಿ ಆಶ್ರಮದ ಶಾಂತಯ್ಯ ಶಾಸ್ತ್ರಿಗಳು, ಹೊಳೆಆಲೂರ ಯಚ್ಚರೇಶ್ವರ ಶ್ರೀಗಳು, ಅಸೂಟಿಯ ರೇವಣಸಿದ್ಧೇಶ್ವರ ಸ್ವಾಮಿಗಳು ಆಶೀರ್ವಚನ ನೀಡಿದರು.
ಉಮೇಶಗೌಡ ಪಾಟೀಲ,ವೀರೇಶ ಕೂಗು, ಮಾಜಿ ಶಾಸಕ ಎಂ.ಕೆ. ಪಟ್ಟಣಶಟ್ಟಿ, ಚಂದ್ರು ಬಾಳಿಹಳ್ಳಿಮಠ, ಡಾ. ಚಂದ್ರಶೇಖರ ನೀರಲಗಿ, ಶಿಲ್ಪಿ ದೇವಿಪ್ರಸಾದ ಮಾಯಾಚಾರ್ಯ, ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದ ಪ್ರಭುಸ್ವಾಮಿ ಸರಗಣಾಚಾರಿ, ಸಮಿತಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.