ಸಾಂದರ್ಭಿಕ ಚಿತ್ರ 
ಗದಗ

Imprisonment: ಪಾದಚಾರಿ ಸಾವಿಗೆ ಕಾರಣವಾದ ವ್ಯಕ್ತಿಗೆ ಶಿಕ್ಷೆ

ಮಂಜುನಾಥ ಗದಗಿನ
ನರಗುಂದ: ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಸಾವಿಗೆ ಕಾರಣವಾದ ಅಪರಾಧಿಗೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯವು 12 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ 14 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಕಣಕೀಕೊಪ್ಪ ಗ್ರಾಮದ ಅಜ್ಜಪ್ಪ ಸಿದ್ದಪ್ಪ ಸಂಶಿ (27) ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಏನಿದು ಪ್ರಕರಣ?: ಅಪರಾಧಿ ಸಿದ್ದಪ್ಪ 2020 ಜನವರಿ 9ರಂದು ನರಗುಂದ ಕೋರ್ಟ್ ಸರ್ಕಲ್‌ನಿಂದ ಎಪಿಎಂಸಿ ಮಾರುಕಟ್ಟೆಗೆ ಟಂಟಂ ತೆಗೆದುಕೊಂಡು ಹೋಗುವಾಗ ರಸ್ತೆಬದಿ ಹೋಗುತ್ತಿದ್ದ ನರಗುಂದ ತಾಲೂಕು ಸಂಕಧಾಳದ ರಾಚನಗೌಡ ರುದ್ರಗೌಡ ಪಾಟೀಲ (66) ಎಂಬುವವರಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದರು. ರಾಚನಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸಿಪಿಐ ಡಿ.ಬಿ. ಪಾಟೀಲ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನರಗುಂದ ಜೆಎಂಎಫ್‌ಸಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಜೀನ್ನಪ್ಪ ಚೌಗಲಾ ಅಪರಾಧಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕ ಹನುಮಂತಪ್ಪ ಅರಳಿ ವಾದ ಮಂಡಿಸಿದ್ದರು.