ನರಗುಂದ: ವಿಪರೀತ ಮದ್ಯ ಸೇವಿಸಿ ದೇವಸ್ಥಾನದ ಆವರಣ ಬಳಿ ಮಲಗಿದ್ದ ಹೋಟೆಲ್ ಕೆಲಸಗಾರ (DIES) ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಪಟ್ಟಣದ ಗಾಡಿ ಓಣಿ ಬಳಿಯ ಶ್ರೀಮಾರುತಿ ದೇವಸ್ಥಾನ ಆವರಣದಲ್ಲಿ ಘಟನೆ ನಡೆದಿದ್ದು, ಅಂದಾಜು 50 ವರ್ಷದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಹಲವು ವರ್ಷಗಳಿಂದ ಈತ ನರಗುಂದದ ವಿವಿಧ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದ. ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದ. ಕೆಲವು ಹೋಟೆಲ್‌ಗಳ ಮಾಲೀಕರು, ಸಾರ್ವಜನಿಕರು ಈತನನ್ನು ರಾಮು ಎಂದು ಕರೆಯುತ್ತಿದ್ದರು. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.