hanuman ಮುಳಗುಂದ ಚಿಂದಿಪೇಟಿ ಓಣಿಯ ಹನುಮಂತನ ದೇವಸ್ಥಾನದಲ್ಲಿ ಹನುಮ ಜಯಂತಿ ಆಚರಿಸಲಾಯಿತು.  
ಗದಗ

Hanuman ಹನುಮ ಜಯಂತಿ, ತೊಟ್ಟಿಲೋತ್ಸವ

ಮುಳಗುಂದ: ಪಟ್ಟಣದ ಚಿಂದಿಪೇಟಿ ಸೇರಿದಂತೆ ವಿವಿಧ ಓಣಿಗಳಲ್ಲಿರುವ ಶ್ರೀ ಹನುಮಾನ್ (hanuman) ದೇವಸ್ಥಾನದಲ್ಲಿ ಗುರುವಾರ ಶ್ರದ್ಧಾ ಭಕ್ತಿಯಿಂದ ಹನುಮ ಜನ್ಮದಿನೋತ್ಸವ ಜರುಗಿತು. ಚಿಂದಿಪೇಟಿ ಓಣಿಯ ಹನುಮಂತನ ಮೂರ್ತಿಯು ಬಲ ಮುಖಿಯಾಗಿದ್ದು, ಈ ಭಾಗದಲ್ಲಿಯೇ ವಿಶೇಷವಾಗಿದೆ. ಹನುಮ ಮೂರ್ತಿಗೆ ನಾನಾ ತರಹದ ಫಲ ಪುಷ್ಪಗಳೊಂದಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನೆರವೇರಿತು. ಬಳಿಕ ಅರ್ಚಕರಿಂದ ವೇದ ಮಂತ್ರಗಳ ಪಠಣ, ಮಹಿಳೆಯರಿಂದ ಜೋಗುಳ, ತೊಟ್ಟಿಲೋತ್ಸವ ನಡೆಯಿತು. ನಂತರ ಕಡಲೆಕಾಳು ಉಸಳಿ, ಸಿಹಿ ಪ್ರಸಾದ ವಿತರಣೆ ಮಾಡಿದರು. ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಂಜುನಾಥ ಅಣ್ಣಿಗೇರಿ, ಸಮಿತಿ ಸದಸ್ಯರಾದ ರಾಮಣ್ಣ ಕುಲಕರ್ಣಿ, ಎಂ.ಎಚ್. ಕಣವಿ, ಸಿ.ಕೆ. ಭಜಂತ್ರಿ, ಯಲ್ಲಪ್ಪ ಅಳ್ಳಣ್ಣವರ, ಬಿ.ಎಲ್. ಜಾಧವ, ಚಿನ್ನಪ್ಪ ಕುಲಕರ್ಣಿ, ನಾಗಪ್ಪ ಸಿದ್ದನಗೌಡ, ಆನಂದ ಸಿದ್ದನಗೌಡ್ರ, ಪ್ರಕಾಶ ಮದ್ದಿನ, ಗೀತಾ ಜಾಧವ, ರೇಣುಕಾ ಜಾಧವ, ಇತರರಿದ್ದರು.