ಮುಂಡರಗಿ ಪಟ್ಟಣದ ಜೆ.ಟಿ. ಕೋಟೆ ಪ್ರೌಢಶಾಲೆಯಲ್ಲಿ (school) ಶುಕ್ರವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಎರಡು ದಿನದ ಓದು ಕರ್ನಾಟಕ, ಗಣಿತ ಗಣಕ, ಮೌಲ್ಯ ಶಿಕ್ಷಣ ತರಬೇತಿಯನ್ನು ಡಯಟ್ ಹಿರಿಯ ಉಪನ್ಯಾಸಕ ಯಲ್ಲಪ್ಪ ಹಂದ್ರಾಳ ಉದ್ಘಾಟಿಸಿದರು.  
ಗದಗ

school ಶಾಲಾ ಹಂತದಲ್ಲೆ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡಿ

ಮುಂಡರಗಿ: ಮಕ್ಕಳಿಗೆ ಮೌಲ್ಯ ಶಿಕ್ಷಣದ ಅಗತ್ಯವಿದೆ. ಶಿಕ್ಷಕರು ಕಡ್ಡಾಯವಾಗಿ ಶಾಲಾ school ಹಂತದಲ್ಲಿ ಮೌಲ್ಯ ಶಿಕ್ಷಣ ನೀಡಬೇಕು. ಮಕ್ಕಳಿಗೆ ಸ್ಪಷ್ಟವಾಗಿ ಓದುವುದಕ್ಕೆ ಬರೆಯುವುದಕ್ಕೆ ಬರಬೇಕು ಎಂದು ಗದಗ ಡಯಟ್ ಹಿರಿಯ ಉಪನ್ಯಾಸಕ ಯಲ್ಲಪ್ಪ ಹಂದ್ರಾಳ ಹೇಳಿದರು.
ಪಟ್ಟಣದ ಜೆ.ಟಿ. ಕೋಟೆ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕಿನ 3ರಿಂದ 5ನೇ ತರಗತಿವರೆಗೆ ಬೋಧಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಎರಡು ದಿನದ ಓದು ಕರ್ನಾಟಕ, ಗಣಿತ ಗಣಕ, ಮೌಲ್ಯ ಶಿಕ್ಷಣ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಪ್ರೌಢಶಾಲಾ ವಿಭಾಗದ ಬಿಆರ್‌ಪಿ ಹನುಮರೆಡ್ಡಿ ಇಟಗಿ ಅವರು, ತರಬೇತಿಯ ಮೂಲ ಉದ್ದೇಶದ ಕುರಿತು ಹಾಗೂ ತರಬೇತಿಯಿಂದಾಗುವ ಪ್ರಯೋಜನ ಮತ್ತು ತರಬೇತಿ ಪಡೆದ ನಂತರ ಮಕ್ಕಳಿಗೆ ಹೇಗೆ ತಲುಪಿಸಬೇಕು ಎಂಬುದರ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಮಂಜುನಾಥ ತೆಗ್ಗಿನಮನಿ ಮಾತನಾಡಿ, ಇಲಾಖೆ ಹಾಕಿಕೊಂಡಿರುವ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಪಡೆದುಕೊಂಡು ಶಾಲಾ ಹಂತದಲ್ಲಿ ಅನುಷ್ಠಾನಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಇದ್ದರು. ಸಿಆರ್‌ಪಿಗಳಾದ ಇಟಗಿ ನಿರೂಪಿಸಿದರು. ಹೊಳೆಯನ್ನವರ ವಂದಿಸಿದರು.