20 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ಉಷ್ಣಾಂಶ ದಾಖಲು
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ವಾತಾವರಣ ಏರುಪೇರು ಆಗುತ್ತಿದ್ದು, ಏಕಾಏಕಿ ಚಳಿ ಹೆಚ್ಚಿಗೆ ಆಗಿದೆ. ಬೆಳಗ್ಗೆ ಮತ್ತು ಸಂಜೆ ಶೇ. 20 ಕ್ಕಿಂತ ಕಡಿಮೆ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದ್ದು, ಉತ್ತರ ಭಾರತದ ಚಳಿಯಂತೆ ದಣದ ಗದಗ ಜಿಲ್ಲೆಯಲ್ಲೂ ನವೆಂಬರ ತಿಂಗಳ ಕೊನೆ ವಾರದಲ್ಲಿ ಚಳಿ ಹೆಚ್ಚಾಗಿದೆ. ನಗರದ ನಾಗರಿಕರು ಚಳಿ ಚಳಿ ತಾಳೇನು ಈ ಚಳಿಯಾ ಎಂದು ಪಿಸುಗುಡುತ್ತಿದ್ದಾರೆ. ಈ ನಡುವೆ ಮಕ್ಕಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಗಗಲಿನಲ್ಲಿ 20 ರಿಂದ 20 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುವ ಉಷ್ಣಾಂಶವು, ಸಂಜೆ 6 ಗಂಟೆಬೆಳಗಿನ ಜಾವ 5 ಗಂಟೆ ವರೆಗೆ 16 ರಿಂದ 17 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿವೆ. ವಾತಾವರಣ ಸಂರ್ಪೂಣ ಬದಲಾಗಿ ಜನರಲ್ಲಿ ನಡುಕ ಶುರುವಾಗಿದೆ. ಬೆಳಗ್ಗೆ ಮತ್ತು ಸಂಜೆ ಜನ ಚಳಿತಿ ರಕ್ಷಿಸಿಕೊಳ್ಳಲು ಬೆಚ್ಚಗಿನ ಉಡುಪು ಧರಿಸಿ ವಾಯುವಿಹಾರ ಆರಂಭಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ರಸ್ತೆ ಬದಿ, ಮನೆ ಆವರಣದಲ್ಲಿ ಬೆಂಕಿ ಕಾಯಿಳ್ಳುವ ದೃಶ್ಯಗಳು ಚಳಿ ಏರಿಕೆಗೆ ಸಾಕ್ಷಿಯಾಗುತ್ತಿದೆ.
ಕಳೆದ ಬಾರಿಗಿಂತ ಪ್ರಸಕ್ತ ಸಾಲಿನಲ್ಲಿ ಚಳಿ ಹೆಚ್ಚಾಗಿದೆ. ಕಳೆದ ಸಾಲಿನಲ್ಲಿ 25 ಸೆಲ್ಸಿಯಸ್ ಗಿಂತ ಕಡಿಮೆ ದಾಖಲಾಗಿರಲಿಲ್ಲ. ಈ ಬಾರಿ 17 ಸೆಲ್ಸಿಯಸ್ ಗೆ ಕುಸಿದಿದೆ. ಕಳೆದ ವರ್ಷ ಹೋಲಿಕೆ ಮಾಡಿದರೆ ಈ ಬಾರಿ ಚಳಿಗಾಲ ಬೇಗನೆ ಆರಂಭವಾಗಿದೆ.
ಜಿಲ್ಲಾದ್ಯಂತ ಚಳಿ ಮುಂದುವರಿದಿದ್ದು, ಬೆಚ್ಚನೆ ಉಡುಪಿಗೆ ಬೇಡಿಕೆ ಹೆಚ್ಚಿದೆ. ಚಳಿಗಾಲ ಸೀಸನ್ ಆರಂಭವಾಗುತ್ತಿದ್ದಂತೆ ರಸ್ತೆ ಬದಿ ಬೆಚ್ಚನೆ ಉಡುಪುಗಳ ಮಾರಾಟದ ಅಂಗಡಿಗಳು ಆರಂಭವಾಗಿವೆ. ಜಕಿರ್ನ್ ಮತ್ತು ಉಣ್ಣೆ ಬಟ್ಟೆಗಳಿಗೆ, ಟೊಪ್ಪಿಗೆಗೆ ಬೇಡಿಕೆ ಹೆಚ್ಚಿದೆ. ಶ್ವೇಟರ್ಗಳ ಮಾರಾಟವೂ ಭರದಿಂದ ಸಾಗಿದೆ.
ಅಸ್ತಮಾ ರೋಗಿಗಳ ಮೇಲೆ ಚಳಿ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು. ನೆಗಡಿ, ಕೆಮ್ಮು ಸಾಮಾನ್ಯವಾಗಿದೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ವಿಶೇಷವಾಗಿ ಚಿಕ್ಕಮಕ್ಕಳನ್ನು ಚಳಿಯಿಂದ ರಕ್ಷಿಸಬೇಕಿದೆ. ಆದ್ದರಿಂದ ಆಹಾರ ಸೇವನೆ ಹಾಗೂ ನೀರಿನ ಬಳಕೆ ಬಗ್ಗೆ ಜಾಗೃತಿ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಚಳಿಗಾಲದಲ್ಲಿ ಇಬ್ಬನಿ ಬೀಳುವುದರಿಂದ ಪ್ರಮುಖ ಬೆಳೆಗೆ ಯಾವುದೇ ತೊಂದರೆ ಆಗುವುದಿಲ್ಲ. ಅದರಲ್ಲೂ ಕಡಲೆ, ಜೋಳ, ಗೋಧಿ ಸೇರಿದಂತೆ ಈ ಭಾಗದ ಪ್ರಮುಖ ಬೆಳೆಗೆ ಯಾವುದೇ ತೊಂದರೆ ಆಗುವುದಿಲ್ಲ. ಹೆಚ್ಚು ಚಳಿಯಿಂದ ಬೆಳೆಗೆ ಹೆಚ್ಚು ಚೇತರಿಕೆ ಬರುತ್ತದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.. ಚಳಿಗಾಲದಲ್ಲಿ ಜನ ಬಹುಬೇಗ ರೋಗಗಳಿಗೆ ತುತ್ತಾಗುತ್ತಾರೆ. ಚಿಕ್ಕಮಕ್ಕಳು ಮತ್ತು ವೃದ್ಧರು ಹೆಚ್ಚು ಬೆಚ್ಚಗೆ ಇರುವುದು ಅಗತ್ಯ. ಮುನ್ನೆಚ್ಚರಿಕೆ ಜತೆಗೆ ಚಳಿಯಿಂದ ರಕ್ಷಣೆ ಮಾಡಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.
ಜಿಲ್ಲೆಯಲ್ಲಿ ಚಳಿಗಾಲ ಆರಂಭವಾಗಿದೆ. ಹೀಗಾಗಿ ಹಿರಿಯರು ಹಾಗೂ ಮಕ್ಕಳು ಮುಜಾಗ್ರತೆ ವಹಿಸಬೇಕು. ವಾತಾವರಣದಲ್ಲಿ ಏಕಾಏಕಿ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಶೀತ, ಕಫ, ನೆಗಡಿ, ಕೆಮ್ಮು ಬರುವುದು ಸಹಜ. ಆದರಿಂದ ಸಾರ್ವಜನಿಕರು ಬೆಚ್ಚನೆ ಆಹಾರ ಸೇವಿಸಬೇಕು. ಹಾಗೆಯೇ ಹೊರಗಡೆ ಖರೀದಿ ಆಹಾರ ಸೇವನೆ ಕಡಿಮೆ ಮಾಡಬೇಕು. ಮಕ್ಕಳು ಹಾಗೂ ಹಿರಿಯರು ಹೆಚ್ಚಿನ ಕಾಳಜಿ ವಹಿಸಬೇಕು.
-ಡಾ.ವೀರೇಶ ಸತ್ತಿಗೇರಿ, ವೈದ್ಯರು.