ಗದಗ ವಿಜಯ ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳು ರಚಿಸಿದ ಕತೆ ಮತ್ತು ಕವಿತೆಗಳ ಕರಡು ಸಂಕಲನಗಳನ್ನು ಲೋಕಾರ್ಪಣೆ ಗೊಳಿಸಲಾಯಿತು. ಎಸ್. ಎಸ್. ಪಾಟೀಲ, ವಿವೇಕಾನಂದಗೌಡ ಪಾಟೀಲ, ತಯಬಅಲಿ ಹೊಂಬಳ, ಡಾ. ಶರಣಬಸವೇಶ ಆಲೂರ, ಡಾ. ಶಿವಪ್ಪ ಕುರಿ, ಎಂ. ಎಸ್. ಹುಲ್ಲೂರ, ಸಂಜಯ ಬಾಗಮಾರ ಇತರರು ಇದ್ದರು.
ಮಕ್ಕಳ ಬಾಲ್ಯ ಸುಂದರಗೊಳಿಸುವ ಕಾರ್ಯ ಮನೆಯಿಂದಲೇ ಪ್ರಾರಂಭಗೊಳ್ಳಬೇಕು. ಅವಿಭಕ್ತ ಕುಟುಂಬ ಮಕ್ಕಳ ಪ್ರೀತಿ, ವಾತ್ಸಲ್ಯ, ಸಹಬಾಳ್ಳೆ, ಸಹಸ್ಪಂದನೆಯನ್ನು ಸ್ವಾಭಾವಿಕವಾಗಿ ಕಲಿಸುತ್ತಿತ್ತು ಎಂದು ಮಾಜಿ ಸಚಿವ ಎಸ್. ಎಸ್. ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ವಿಜಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಜರುಗಿದ ಎರಡು ದಿನಗಳ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬದಲಾದ ಪರಿಸ್ಥಿತಿಯಲ್ಲಿ ಮನೆ ಮಕ್ಕಳಿಗೆ ಅನಾಥ ಪ್ರಜ್ಞೆಯನ್ನು ಹುಟ್ಟಿಸುತ್ತಿದೆ. ಅಂಕ ಗಳಿಕೆಗೆ ಮಕ್ಕಳನ್ನು ಸಜ್ಜುಗೊಳಿಸದೇ ಬಾಲ್ಯವನ್ನು ಆನಂದದಿಂದ ಕಳೆಯಲು ಒತ್ತಡಮುಕ್ತ ಪರಿಸರವನ್ನು ನಿಮಿರ್ಸುವುದು ಅಗತ್ಯವಾಗಿದೆ. ಮಕ್ಕಳ ಕ್ರಿಯಾಶೀಲತೆಗೆ ಅವಕಾಶ ಕಲ್ಪಿಸಿ ಅವರ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಸಮ್ಮೇಳನ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಅಧ್ಯತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮೂಲತ: ಸೃಜನಶೀಲರಾಗಿರುವ ಮಕ್ಕಳು ಅವಕಾಶ, ಸಂದರ್ಭಗಳಿಂದ ವಂಚಿತರಾಗಿದ್ದಾರೆ. ಮಾನವೀಯ ಗುಣಗಳು ನೆಲೆಗೊಳ್ಳಲು ವ್ಯಕ್ತಿಗೆ ಸಾಹಿತ್ಯ, ಕಲೆ, ಸಂಗೀತದೊಲವು ಮುಖ್ಯ. ಈ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಪ್ರಾಯೋಗಿಕವಾಗಿ ಸಂಟಿಸುವ ಮೂಲಕ ಮಕ್ಕಳ ಪ್ರತಿಭೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ತಿಳಿಸಿದರು.
ಮಾಜಿ ಕಸಾಪ ಅಧ್ಯ ಡಾ. ಶಿವಪ್ಪ ಕುರಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳಿಗಾಗಿ ಹಮ್ಮಿಕೊಂಡ ಈ ಸಮ್ಮೇಳನ ಮಾದರಿಯಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ವಿವಿಧ ವಿಷಯಗಳ ಬಗ್ಗೆ ಆಸಕ್ತಿ, ಅಭಿರುಚಿಯನ್ನು ಬೆಳೆಸಲು ಇಂತಹ ಸಮ್ಮೇಳನಗಳ ಅಗತ್ಯವಿದೆ ಎಂದು ತಿಳಿಸಿದರು.
ಸಮ್ಮೇಳನಾಧ್ಯರಾದ ತಯಬಅಲಿ ಹೊಂಬಳ ಅವರು ಮಾತನಾಡಿ, ಸರ್ಕಾರ ಮಕ್ಕಳ ಸಾಹಿತ್ಯದ ಕೃತಿಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸಬೇಕು. ಹಿರಿಯ ಮಕ್ಕಳ ಸಾಹಿತಿಗಳನ್ನು ಜಿಲ್ಲಾ ಹಂತದಲ್ಲಿ ಗುರುತಿಸಿ ಗೌರವಿಸಬೇಕು ಎಂದು ತಿಳಿಸಿದರು.
ತಯಬಅಲಿ ಹೊಂಬಳ ದಂಪತಿಗಳನ್ನು ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು. ಸಮ್ಮೇಳನದ ವಿವಿಧ ವಿಭಾಗಗಳಲ್ಲಿ ಮಕ್ಕಳು ರಚಿಸಿದ ಕತೆ ಮತ್ತು ಕವಿತೆಗಳ ಕರಡು ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಸಾಧನೆ ಮಾಡಿದ ಮಕ್ಕಳಾದ ಪ್ರವಿಣಕುಮಾರ ಸೊಬಗಿನ, ರಾಧಿಕಾ ತೊಂಡಿಹಾಳ, ತನುಶ್ರೀ ಬದಿ, ಪ್ರಣತಿ ಗಡಾದ, ಬಿ. ಬಿ. ನಾಗನೂರ ಮೊದಲಾದವರನ್ನ ಸನ್ಮಾನಿಸಲಾಯಿತು.
ಎಂ.ಎಸ್.ಹುಲ್ಲೂರ, ಡಾ. ಶರಣಬಸವೇಶ ಆಲೂರ, ರತ್ನಕ್ಕ ಪಾಟೀಲ, ಸಂಜಯ ಬಾಗಮಾರ, ರಮಾಕಾಂತ ಕಮತಗಿ, ದತ್ತಪ್ರಸನ್ನ ಪಾಟೀಲ, ಬಸವರಾಜ ನೆಲಜೇರಿ, ರಾಹುಲ ಗಿಡ್ನಂದಿ ಇತರರು ಇದ್ದರು.