ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸದಾನಂದ ಪಿಳ್ಳಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಿತು. ವಿವೇಕಾನಂದಗೌಡ ಪಾಟೀಲ, ಸುಧಾ ಹುಚ್ಚಣ್ಣವರು, ಪತ್ರಕರ್ತ ಶಿವಾನಂದ ಹಿರೇಮಠ, ಸುರೇಖಾ ಪಿಳ್ಳಿ ಇತರರು ಇದ್ದರು. 
ಗದಗ

ಕಸಾಪದಲ್ಲಿ ಸದಾನಂದ ಪಿಳ್ಳಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸಮಾನತೆಯನ್ನು ಕಿತ್ತಿ ಹಾಕಿ, ಮನುಷ್ಯರೆಲ್ಲ ಒಂದೇ ಎಂದು ಸಾರಿ ವ್ಯಕ್ತಿ, ಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣದ ಚಿಂತನೆಗಳನ್ನು ಬಿತ್ತಿ ಆಚರಣೆ ಪ್ರಧಾನ ಸಿದ್ಧಾಂತವನ್ನು ವಿಶ್ವಗುರು ಬಸವಣ್ಣನವರು ರೂಪಿಸಿದರು ಎಂದು ಪ್ರೊ. ಸುಧಾ ಹುಚ್ಚಣ್ಣವರ ಹೇಳಿದರು.
ನಗರದ ಕಸಾಪ ಕಾರ್ಯಾಲಯದಲ್ಲಿ ಇತ್ತಿಚೆಗೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವದ ಸಂಕೇತವಾಗಿದ್ದ ಅನುಭವ ಮಂಟಪದ ಮೂಲಕ ವಚನ ಸಾಹಿತ್ಯದ ಬೆಳವಣಿಗೆಗೆ ಬಸವಣ್ಣನವರು ಕಾರಣರಾದವರು. ಕಾಯಕ, ದಾಸೋಹದ ಮೂಲಕ ಕನ್ನಡ ನೆಲಕ್ಕೆ ಹೊಸ ಸಂಸತಿಯನ್ನು ರೂಪಿಸುವ ಮೂಲಕ ಕನ್ನಡಿಗರಿಗೆ ಸಾಂಸತಿಕ ನಾಯಕನಾಗಿ ಮನೆ ಮನಗಳನ್ನು ಬೆಳಗಿದ್ದಾರೆ. ವಿಶ್ವಮಾನ್ಯ ಚಿಂತನೆಗಳನ್ನು ಒಳಗೊಂಡಿರುವ ವಚನಗಳನ್ನು ನಾವು ಓದಿ ಅರ್ಥೈಸಿಕೊಂಡು, ಆಚರಣೆಗೆ ತರುವ ಮೂಲಕ ಬಸವಾದಿ ಶರಣರ ಚಿಂತನೆಗಳನ್ನು ಸಾಕಾರಗೊಳಿಸಬೇಕಾಗಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಮಾತನಾಡಿ ಪತ್ರಕರ್ತ ಶಿವಾನಂದ ಹಿರೇಮಠ ಅವರು, ಸಾಹಿತಿಗಳು ಮತ್ತು ಪತ್ರಕರ್ತರು ಸಮಾಜದ ಒಳಿತಿಗಾಗಿಯೇ ಶ್ರಮಿಸುತ್ತಾರೆ. ತನಿಖಾ ವರದಿಗಳನ್ನು ಪ್ರಕಟಿಸಿದಾಗ ಪಟ್ಟಭದ್ರರಿಂದ ಅನೇಕ ಸಮಸ್ಯೆಗಳಿಗೆ ಪತ್ರಕರ್ತ ಒಳಗಾಗುತ್ತಾರೆ. ಸಾಹಿತಿಗಳು ಮತ್ತು ಪತ್ರಕರ್ತರು ಜೊತೆಯಾಗಿ ಕಾರ್ಯ ಮಾಡುವ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದಲು ಸಾಧ್ಯವಾಗುತ್ತದೆ. ಅನೇಕ ಕಾಯಕ್ರಮಗಳನ್ನು ಜಂಟಿಯಾಗಿ ಆಯೋಜಿಸುವ ಮೂಲಕ ಸಮಾಜದ ಪ್ರಗತಿಗೆ ಕೆಲಸ ಮಾಡೋಣ ಎಂದರು.
ಅಧ್ಯತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ, ಸಂಸತದ ಪ್ರಭಾವದಿಂದ ಕನ್ನಡವನ್ನು ಮುಕ್ತಗೊಳಿಸುವ ಮೂಲಕ ಭಾಷಾ ಸಂಸತಿಯನ್ನು, ರಾಜನನ್ನು ಪ್ರಶ್ನಿಸುವ ಮೂಲಕ ರಾಜಕೀಯ ಸಂಸತಿಯನ್ನು, ಕಾಯಕ&ದಾಸೋಹಗಳ ಮೂಲಕ ಆಥಿರ್ಕ ಸಂಸತಿಯನ್ನು, ವಚನಗಳ ರಚನೆ ಮೂಲಕ ಸಾಹಿತ್ಯ ಸಂಸತಿಯನ್ನು, ದೇಹವನ್ನೇ ದೇಗುಲವಾಗಿಸುವ ಮೂಲಕ ಧಾಮಿರ್ಕ ಸಂಸತಿಯನ್ನು, ಸಮಾನತೆಯ ಮೂಲಕ ಸಾಮಾಜಿಕ ಸಂಸತಿಯನ್ನು ಪರಿಚಯಿಸಿದ ಬಸವಣ್ಣನವರು ಕರ್ನಾಟಕಕ್ಕೆ ಅಷ್ಟೇ ಅಲ್ಲ, ವಿಶ್ವದ ಸಾಂಸತಿಕ ನಾಯಕರಾಗಿದ್ದಾರೆ. ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸಿದ ಬಸವಣ್ಣ ಈ ಜಗದ ಚೈತನ್ಯವಾಗಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಡಾ. ಸಹನಾ ಸದಾನಂದ ಪಿಳ್ಳಿ ಅವರು ಮಾತನಾಡಿ, ಬೇಸಿಗೆ ಸಂದರ್ಭದಲ್ಲಿ ಹಿರಿಯರು ಮಕ್ಕಳು ಅನುಸರಿಸಬೇಕಾಗಿ ಆರೋಗ್ಯದ ಕ್ರಮಗಳ ಬಗ್ಗೆ ತಿಳಿಸಿದರು. ದೇಹಕ್ಕೆ ನೀರಿನ ಕೊರತೆಯಾದಾಗ ಆಗುವ ಅನೇಕ ತೊಂದರೆಗಳ ಕುರಿತು ವಿವರಿಸಿದರು. ಆಹಾರ ಮತ್ತು ಜೀವನ ಶೈಲಿ ವಿಧಾನಗಳ ಮೂಲಕ ಸ್ವಸ್ಥ ಆರೋಗವನ್ನು ಕಾಪಾಡಿಕೊಳ್ಳುವ ರೀತಿಗಳನ್ನು ವಿವರಿಸಿದರು.
ಸುರೇಖಾ ಸದಾನಂದ ಪಿಳ್ಳಿ, ಡಾ. ದತ್ತಪ್ರಸನ್ನ ಪಾಟೀಲ, ರಾಹುಲ ಗಿಡ್ನಂದಿ, ಡಿ. ಎಸ್​. ಬಾಪುರಿ, ಕೆ. ಎಚ್​. ಬೇಲೂರ, ಜಿ. ಬಿ.ಪಾಟೀಲ, ಅನ್ನದಾನಿ ಹಿರೇಮಠ, ಶಂಕರಪ್ಪ ಗಾಂಜಿ, ರಶ್ಮಿ ಅಂಗಡಿ, ಅಮರೇಶ ರಾಂಪೂರ, ಶೈಲಜಾ ಗಿಡ್ನಂದಿ, ಸಿ.ಎಂ. ಮಾರನಬಸರಿ, ಜಯಶ್ರೀ ಪಟ್ಟಣಶೆಟ್ಟಿ, ಬಿ. ಬಿ. ಹೊಳಗುಂದಿ, ಅಶೋಕ ಸತ್ಯರೆಡ್ಡಿ, ಭಾರತಿ ಕೋಟಿ, ಅಶೋಕ ಅಂಗಡಿ, ಕಲ್ಲೇಶ ಮೂರಶಿಳ್ಳಿನ, ಜೆ. ಎ. ಪಾಟೀಲ ಇತರರು ಇದ್ದರು.