ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ ಸಹಯೋಗದಲ್ಲಿ ನಗರದ ಸ್ವಾಮಿ ವಿವೇಕಾನಂದ ಸಭಾಭವನ ನಡೆಯುತ್ತಿರುವ ಗದಗ ಉತ್ಸವದಲ್ಲಿ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಟಕದ ವತಿಯಿಂದ ಬುಧವಾರ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಹಲಸಿನ ಹಣ್ಣು ಮತ್ತು ಬಾಳೆಹಣ್ಣಿನ ಸಿಹಿ ಪದಾರ್ಥ, ಜೋಳ ಮತ್ತು ಜೋಳದ ಹಿಟ್ಟಿನ ಖಾರದ ಪದಾರ್ಥ ಎರಡು ವಿಭಾಗಗಳಲ್ಲಿ ಸ್ಪಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. 60ಕ್ಕೂ ಹೆಚ್ಚು ಮಹಿಳೆಯರು ಆಸಕ್ತಿಯಿಂದ ಭಾಗಹಿಸಿದ್ದರು.
ಸಿಹಿ ಪದಾರ್ಥ ತಯಾರಿಕೆ ಸ್ಪಧೆಯಲ್ಲಿ ಶೈಲಜಾ ಹೆಗಡೆ, ರಾಜೇಶ್ವರಿ ಅಂಗಡಿ, ಗೀತಾ ಹೆಗಡೆ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡರು. ಸಂಜನಾ ಮಲ್ಲಾಡದ ಅವರಿಗೆ ವಿಶೇಷ ಬಹುಮಾನ ನೀಡಲಾಯಿತು.
ಖಾರದ ಪದಾರ್ಥ ತಯಾರಿಕೆ ಸ್ಪರ್ಧೆಯಲ್ಲಿ ದೀಪಾ ಉಗಲಾಟ, ನಯನಾ ಮಲ್ಲಾಡದ, ಕಲಾವತಿ ಹಿರೇಮಠ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡರು. ಶಿಲ್ಪಾ ರಾಯ್ಕರ ಅವರಿಗೆ ವಿಶೇಷ ಬಹುಮಾನ ನೀಡಲಾಯಿತು.
ನಿರ್ಣಾಯಕರಾಗಿ ಕೃಷಿ ಇಲಾಖೆಯ ಉಪನಿರ್ದೆಶಕಿ ಸ್ಮತಿ ಬಿ. ಎಸ್, ಡಾ.ರಾಧಿಕಾ ಕುಲಕಣಿರ್ ಅವರು ಅಡುಗೆ ಸ್ಪರ್ಧೆಯ ನಿರ್ಣಾಯಕರಾಗಿದ್ದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಟಕದ ಅಧ್ಯೆ ಜ್ಯೋತಿ ದಾನಪ್ಪಗೌಡ್ರ, ರ್ಪೂಣಿಮಾ ಆಟದ, ಸುಜಾತಾ ಗುಡಿಮನಿ ಇತರರು ಇದ್ದರು.