ಗದಗ ತೊಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪನವರ ಪ್ರಶಸ್ತಿಯನ್ನು ಮಾಜಿ ಸಚಿವ ಎಸ್. ಎಸ್. ಪಾಟೀಲ ಅವರಿಗೆ ಪ್ರದಾನ ಮಾಡಲಾಯಿತು. ತೋಂಟದ ಸಿದ್ಧರಾಮ ಶ್ರೀಗಳು, ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು, ಅಭಿನವ ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು, ವಿರುಪಾಪುರ ಸಿದ್ಧರಾಮಸ್ವಾಮಿಗಳು, ಮಂಜುನಾಥಗೌಡ ಹಾವೇರಿ, ಎಂ. ಎಸ್. ಸುನಂದಾದೇವಿ, ಎಚ್. ವಿ. ವಾಮದೇವಪ್ಪ, ಅನ್ನರ್ಪೂಣ ಎಚ್. ಎಂ, ಲೀಲಾವತಿ ಟಿ. ಜಿ., ಉಮೇಶ ಪುರದ ಇತರರು ಇದ್ದರು.
ಸಮಾಜಕ್ಕೆ ಅಪಿರ್ತವಾದ ಜೀವನವೇ ಪಾವನ: ತೋಂಟದ ಸಿದ್ಧರಾಮಶ್ರೀ
ಸಮಾಜಮುಖಿ ಸೇವೆಯ ಮೂಲಕ ಶಾಸಕರಾಗಿ, ಮಂತ್ರಿಗಳಾಗಿ ಎಸ್.ಎಸ್. ಪಾಟೀಲರು ಜನಪರ ಕಾರ್ಯವನ್ನು ಮಾಡಿದ್ದಾರೆ. ಅತ್ಯಂತ ಹಿಂದುಳಿದ ಪ್ರದೇಶವಾದ ಮುಂಡರಗಿಯನ್ನು ಪ್ರಗತಿಪಥದತ್ತ ಕೊಂಡೊಯ್ಯವ ದಿಸೆಯಲ್ಲಿ ಮಾಡಿದ ಪ್ರಯತ್ನ ಮಾದರಿ ಆಗಿದೆ. ಪೂಜ್ಯರಲ್ಲಿ ಭಕ್ತಿ, ಮಹಿಳೆಯರಲ್ಲಿ ಗೌರವ, ಮಕ್ಕಳಲ್ಲಿ ಪ್ರೀತಿ, ಸ್ನೇಹಿತರಲ್ಲಿ ಸಲುಗೆ, ರೈತರಲ್ಲಿ ಬಂಧುತ್ವ, ಬಡವರಲ್ಲಿ ಕರುಣೆ, ಕಾರ್ಯದಲ್ಲಿ ತತ್ಪರತೆ, ನಡೆಯಲ್ಲಿ ಪರಿಶುದ್ಧತೆ ಹೊಂದಿ ಇಂದಿನ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪನವರ ಪ್ರಶಸ್ತಿಯನ್ನು ಮಾಜಿ ಸಚಿವ ಎಸ್.ಎಸ್.ಪಾಟೀಲ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ಮಾಗನೂರು ಬಸಪ್ಪನವರು ಆಧುನಿಕ ದಿನಮಾನದ ನಿಜಶರಣರು. ಕಾಯಕ ದಾಸೋಹದ ಮೂಲಕ ಸಮಾಜದ ಏಳ್ಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರು. ಅವರ ಕಾಯಕ ನಿಷ್ಠೆಯನ್ನು ಪರಿವಾರದವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಶರಣಜೀವಿಗಳಾದ ಎಸ್.ಎಸ್.ಪಾಟೀಲರಿಗೆ ಪ್ರತಿಷ್ಠಾನದಿಂದ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಮೌಲ್ಯ ಅಧಿಕಗೊಂಡಿದೆ ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್.ಎಸ್.ಪಾಟೀಲರು ಶರಣರ ಚಿಂತನೆಗಳನ್ನು ವ್ಯಕ್ತಿ ಅಳವಡಿಸಿಕೊಂಡರೆ ಸಮಾಜ ಸರ್ವಾಂಗ ಸುಂದರವಾಗುತ್ತದೆ ಎಂದರು.
ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯ ಮಾಗನೂರು ಸಂಗಮೇಶಗೌಡ ಅಧ್ಯತೆ ವಹಿಸಿ ಮಾತನಾಡಿ, ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಅಪಿರ್ಸಿದಾಗ ಸಂತೃಪ್ತಭಾವ ನೆಲೆಗೊಳ್ಳಲು ಸಾಧ್ಯವಾಗುತ್ತದೆ. ಹಿರಿಯರ ಜೀವನಪಥ ನಮಗೆ ದಾರಿದೀಪವಾಗಿದೆ. ಎಸ್. ಎಸ್. ಪಾಟೀಲರು ಪ್ರಶಸ್ತಿ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದು ಸಂತಸ ತಂದಿದೆ ಎಂದು ತಿಳಿಸಿದರು.
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಹುಲಿಗುಡ್ಡ ಏತ ನೀರಾವರಿ ಯೋಜನೆ, ಸಕ್ಕರೆ ಕಾರ್ಖಾನೆ ಸ್ಥಾಪನೆ, ಶೈಣಿಕ ರಂಗದ ಏಳ್ಗೆ, ಪರಿಸರ ಕಾಳಜಿ, ಮೂಲಭೂತ ಸೌಕರ್ಯಗಳ ನಿರ್ಮಾಣ, ಸಾಹಿತ್ಯ ಸಂಸತಿ ಬಗೆಗಿನ ಒಲವು, ಮಹಿಳೆಯರ ಬಗೆಗಿನ ಗೌರವ ಹೀಗೆ ಎಸ್.ಎಸ್.ಪಾಟೀಲರ ವಿವಿಧ ಆಯಾಮಗಳನ್ನು ಪರಿಚಯಿಸಿದವರು ಎಂದರು
ಸಾರ್ವಜನಿಕ ಶಿಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹೆಚ್.ಕೆ.ಲಿಂಗರಾಜು ಮಾತನಾಡಿದರು. ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು, ಅಭಿನವ ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು, ವಿರುಪಾಪುರ ಸಿದ್ಧರಾಮಸ್ವಾಮಿಗಳು, ಮಂಜುನಾಥಗೌಡ ಹಾವೇರಿ, ಎಂ. ಎಸ್. ಸುನಂದಾದೇವಿ, ಎಚ್. ವಿ. ವಾಮದೇವಪ್ಪ, ಅನ್ನರ್ಪೂಣ ಎಚ್. ಎಂ, ಲೀಲಾವತಿ ಟಿ. ಜಿ., ಉಮೇಶ ಪುರದ, ಶಿವಕುಮಾರಗೌಡ ಪಾಟೀಲ, ಸಿ.ಎಂ.ಪಾಟೀಲ, ಮಹೇಶ್ವರಗೌಡ ಮಾಗನೂರು, ಡಾ. ಧನೇಶ ದೇಸಾಯಿ, ಬಾಲಚಂದ್ರ ಭರಮಗೌಡರ, ದಾನಯ್ಯ ಗಣಾಚಾರಿ, ಅಶೋಕ ಬರಗುಂಡಿ, ಡಿ.ಎಸ್.ಬಾಪುರಿ, ಗಿರಿಜಕ್ಕ ಧರ್ಮರೆಡ್ಡಿ ಹಲವರು ಇದ್ದರು.