ನರಗುಂದ ತಾಲೂಕಿನ ಹದಲಿಯ ಅಲ್ಲಮಪ್ರಭು ಯುವಕ ಮಂಡಳದಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯನ್ನು(Folklore) ಸೊರಟೂರ ಹಿರೇಮಠದ ಶ್ರೀ ಫಕೀರೇಶ್ವರ ಸ್ವಾಮೀಜಿ ಉದ್ಘಾಟಿಸಿದರು.  
ಗದಗ

Folklore ಜನಪದ ಸಾಹಿತ್ಯ ಹಾಡುಗಾರಿಕೆ ಪದಗಳ ಮೂಲ

ಮಂಜುನಾಥ ಕೆಂಪಸಣ್ಣವರ
ನರಗುಂದ: ಜನಪದ Folklore ಸಾಹಿತ್ಯ ನಮ್ಮ ದೇಶಿಯ ಮೂಲ ಹಾಡುಗಾರಿಕೆ ಪದಗಳ ಸಂಭ್ರಮವೆಂದು ಕರೆಯಲಾಗುತ್ತದೆ. ಕನ್ನಡ ಸಂಸ್ಕೃತಿ ಮತ್ತು ಅದಕ್ಕೆ ಮೆರುಗು ನೀಡಲು ಜನಪದ ಮುಖ್ಯವಾಹಿನಿಯಾಗಿ ಯಾವಾಗಲೂ ಕಾರ್ಯ ನಿರ್ವಹಿಸುತ್ತದೆ ಎಂದು ಸೊರಟೂರ ಹಿರೇಮಠದ ಶ್ರೀ ಫಕೀರೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಹದಲಿಯ ಅಲ್ಲಮಪ್ರಭು ಯುವಕ ಮಂಡಳದಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯ ಸಿಗನಹಳ್ಳಿ ಯಚ್ಚರಸ್ವಾಮಿ ಭಜನಾ ಮಂಡಳ ಪ್ರಥಮ, ರಾಮದುರ್ಗ ತಾಲೂಕಿನ ಗೊನ್ನಾಗರದ ಸವೇಶ್ವರ ಭಜನಾ ಮಂಡಳ ದ್ವಿತೀಯ, ರೋಣದ ದುರ್ಗಾದೇವಿ ಭಜನಾ ತಂಡ ತೃತೀಯ, ಶಲವಡಿಯ ಗುರುಶಾಂತೇಶ್ವರ ಭಜನಾ ಮಂಡಳ ಚತುರ್ಥ, ಕೊಣ್ಣೂರಿನ ಭಾಯಮ್ಮದೇವಿ ಭಜನಾ ಮಂಡಳ ಐದನೇ ಸ್ಥಾನ ಪಡೆದುಕೊಂಡವು.
ಮಂಜುನಾಥ ಯಲಿಗಾರ, ಅಶೋಕ ಕಲಹಾಳ, ಚನ್ನಬಸಪ್ಪ ಬದ್ನಿಕಾಯಿ, ಬಸಪ್ಪ ಬದ್ನಿಕಾಯಿ, ಶಿವಾಜಿ ಪವಾರ, ಅಜಪ್ಪಗೌಡ ಅಲ್ಲಪ್ಪಗೌಡ್ರ, ಸುರೇಶ ತಮ್ಮನಗೌಡ್ರ, ಎಸ್.ಎಲ್. ಒಡ್ಡಿನ, ಪ್ರಭುಲಿಂಗಪ್ಪ ಯಲಿಗಾರ, ರಾಜು ನರಗುಂದ, ಯಲ್ಲಪ್ಪ ಹದಗಲ್ಲ, ಬಸವಂತಪ್ಪ ಹಾದಿಮನಿ, ಬಿ.ಜಿ. ಅರಂಗಜಿ, ಜಿ.ಎನ್. ಮಂತ್ರಿ, ಕೆ.ಸಿ. ನಗರಜ್ಜಿ, ಗಣೇಶ ಗುಡಗುಡಿ, ಪರಶುರಾಮ ಬಣಕಾರ ಇತರರು ಉಪಸ್ಥಿತರಿದ್ದರು.