ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಮುಳಗುಂದ ರೈತ ಸಂಘದ ಸದಸ್ಯರು ಪ್ರತಿಭಟನೆ ( Protest)ನಡೆಸಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರಿಗೆ ಮನವಿ ಸಲ್ಲಿಸಿದರು. 
ಗದಗ

ರಸ್ತೆ ಸಂಚಾರ ತಡೆದು ರೈತರ ಪ್ರತಿಭಟನೆ Protest

ಮಂಜುನಾಥ ಕೆಂಪಸಣ್ಣವರ
ಮುಳಗುಂದ: ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಇಲ್ಲಿನ ರೈತ ಸಂಘದ ಸದಸ್ಯರು ಬುಧವಾರ ಗದಗ-ಲಕ್ಷ್ಮೇಶ್ವರ ರಸ್ತೆಯ ಬಸಾಪೂರ ಕ್ರಾಸ್ ಬಳಿ ರಸ್ತೆ ಸಂಚಾರ ತಡೆದು Protest ಪ್ರತಿಭಟನೆ ನಡೆಸಿದರು.
ಗದಗ ಉಪವಿಭಾಗಧಿಕಾರಿ ಗಂಗಪ್ಪ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವಿ ಸ್ವಿಕರಿಸಲು ಮುಂದಾದಾಗ ಜಿಲ್ಲಾಧಿಕಾರಿಗಳೇ ಬರಬೇಕು ಎಂದು ರೈತರು ಪಟ್ಟು ಹಿಡಿದರು.
ರೈತ ಮುಖಂಡ ಬಸವರಾಜ ಕರಿಗಾರ ಮಾತನಾಡಿ, ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಮುಂಗಾರಿನ ಬೆಳೆ ಹಾನಿ ಸಂಭವಿಸಿ ನಷ್ಟ ಉಂಟಾಗಿದೆ. ಸದ್ಯ ಮೆಕ್ಕೆಜೋಳದ ಬೆಲೆ ಕುಸಿತವಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಿಎಂ ಸಿದ್ದರಾಮಯ್ಯ ಬೆಂಬಲ ಬೆಲೆಯಲ್ಲಿ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವ ಘೋಷಣೆ ಮಾಡಿದ್ದು, ಇದುವರೆಗೂ ಖರೀದಿ ಕೇಂದ್ರ ಆರಂಭಿಸಿಲ್ಲ. ರೈತರನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶೋಷಣೆ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸ್ಥಳಕ್ಕೆ ಬಂದು ರೈತರ ಮನವಿ ಸ್ವಿಕರಿಸಿ ಮಾತನಾಡಿ, ಬೆಳೆ ನಷ್ಟ ಆಗಿರುವುದನ್ನ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಸರ್ಕಾರಕ್ಕೆ ಸೆಪ್ಟಂಬರ್‌ನಲ್ಲೆ ವರದಿ ಕಳುಹಿಸಿದ್ದು ಗದಗ ಜಿಲ್ಲೆಯೇ ಮೊದಲು.
ಸಿಎಂರಿಂದ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿಸುವಂತೆ ತಾತ್ವಿಕ ಒಪ್ಪಿಗೆ ಬಂದಿದೆ. ಆದರೆ, ಇನ್ನಷ್ಟೇ ಆದೇಶ ಬರಬೇಕು. ಬಂದ ತಕ್ಷಣ ಕೇಂದ್ರ ತೆರೆಯಲಾಗುವದು ಎಂದರು.
ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರಣ್ಣವರ, ಡಿವೈಎಸ್‌ಪಿ ಮುರ್ತುಜ್ ಖಾದರಿ, ಸಿಪಿಐ ಸಂಗಮೇಶ ಶಿವಯೋಗಿ, ಬಸವರಾಜ ಸಾಬಳೆ, ಮಹ್ಮದಲಿ ಶೇಖ, ಮಹಾಂತೇಶ ಗುಂಜಳ, ದೇವರಾಜ ಸಂಗನಪೇಟಿ, ಮುತ್ತಣ್ಣ ಪಲ್ಲೆದ, ಇತರರು ಇದ್ದರು.