ನರಗುಂದ: ಜಮೀನಿಗೆ ತೆರಳುತ್ತಿದ್ದ ರೈತನ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ರೈತ ಸ್ಥಳದಲ್ಲೇ ಮೃತಪಟ್ಟಿರುವ (Farmer dies) ಘಟನೆ ಭೈರನಹಟ್ಟಿ ರಸ್ತೆ ಹೊರವಲಯದ ರೋಖಡೆಯವರ ಶೆಡ್ ಬಳಿಯ ಸೇತುವೆ ಪಕ್ಕದಲ್ಲಿ ಸೋಮವಾರ ನಡೆದಿದೆ.
ನರಗುಂದ ಗುಡ್ಡದಕೇರಿ ಓಣಿಯ ಫಕೀರಪ್ಪ ಹನುಮಂತಪ್ಪ ಕೀಲಿಕೈ (70) ಮೃತ ಬೈಕ್ ಸವಾರ. ನರಗುಂದದಿಂದ ಭೈರನಹಟ್ಟಿ ರಸ್ತೆ ಮಾರ್ಗವಾಗಿ ಜಮೀನಿಗೆ ತೆರಳುತ್ತಿದ್ದಾಗ ಬಾಗಲಕೋಟೆಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಕಾರ್ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.