ಬಾಲೆಹೊಸೂರಿನ ಶ್ರೀದಿಂಗಾಲೇಶ್ವರ ಜಾತ್ರಾ (FAIRS) ಮಹೋತ್ಸವದ ಅಂಗವಾಗಿ ಜರುಗಿದ ಧರ್ಮಸಭೆಯಲ್ಲಿ ಖೇಡಗಿ ವಿರಕ್ತಮಠದ ಶ್ರೀ ಶಿವಬಸವ ರಾಜೇಂದ್ರ ಮಹಾಸ್ವಾಮಿಗಳಿಗೆ ತುಲಾಭಾರ ಸೇವೆ ನೆರವೇರಿಸಲಾಯಿತು. ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರು ಇತರರಿದ್ದರು.
ಲಕ್ಷ್ಮೇಶ್ವರ: ಜಾತ್ರೆ, (FAIRS) ಹಬ್ಬ, ಉತ್ಸವಗಳು ನಾಡಿನ ಸಾಸ್ಕೃತಿಕ ಶ್ರೀಮಂತಿಕೆ ಬಿಂಬಿಸುವುದರ ಜತೆಗೆ ಜಾತಿ, ಮತ, ಪಂಥ ಮೀರಿ ಪರಸ್ಪರ ಸ್ನೇಹ, ಪ್ರೀತಿ, ಬಾಂಧವ್ಯ, ಸೌಹಾರ್ದ ಬೇಸೆಯುವ ಮಹೋನ್ನತ ವೇದಿಕೆಯಾಗಿವೆ ಎಂದು ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಹೇಳಿದರು.
ಬಾಲೆಹೋಸೂರಿನ ಶ್ರೀ ದಿಂಗಾಲೇಶ್ವರಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಧರ್ಮಸಭೆ, ಗುಡ್ಡಾಪುರ ದಾನಮ್ಮದೇವಿ ಪುರಾಣ ಮಹಾಮಂಗಲೋತ್ಸವ, ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಠಮಾನ್ಯಗಳು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ, ಸಾಂಪ್ರದಾಯಿಕ, ಸಾಮಾಜಿಕ ಕಾರ್ಯಗಳು ಸಮಾಜದ ಶ್ರೇಯೋಭಿವೃದ್ಧಿಗೆ ಮೂಲಾಧಾರವಾಗಿದೆ. ಧರ್ಮ, ಸಂಸ್ಕೃತಿ, ಆಚಾರ-ವಿಚಾರ, ಮೌಲ್ಯಗಳನ್ನು ಬಿತ್ತುವ ಮೂಲಕ ಸಾಮಾಜಿಕ ಬದಲಾವಣೆಯಲ್ಲಿ ಮಠಮಾನ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮನುಷ್ಯನ ಬದುಕು ಮೌಲ್ಯಯುತ ಮತ್ತು ಸ್ಮರಣೀಯವಾಗಿರಲು ಧರ್ಮದ ತಳಹದಿಯಲ್ಲಿ ಸಾಗಬೇಕು. ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಆಚರಣೆ, ಪದ್ಧತಿಗಳು ಮುಂದುವರಿಯಬೇಕು. ಈ ನಿಟ್ಟಿನಲ್ಲಿ ಸಮಾಜದ ಎಲ್ಲರ ಪಾತ್ರ ಮಹತ್ವದ್ದಾಗಿದೆ ಎಂದರು.
ಖೇಡಗಿ ವಿರಕ್ತಮಠದ ಶ್ರೀ ಶಿವಬಸವ ರಾಜೇಂದ್ರ ಮಹಾಸ್ವಾಮಿಗಳ ತುಲಾಭಾರ ಸೇವೆ, ಪುರಾಣ ಪ್ರವಚನಕಾರರು, ದಾನಿಗಳು, ಸಾಧಕರನ್ನು ಸನ್ಮಾನಿಸಲಾಯಿತು. ಬೊಮ್ಮನಹಳ್ಳಿಯ ಶಿವಯೋಗೀಶ್ವರ ಶ್ರೀಗಳು, ಮಸೂತಿಯ ಪ್ರಭುಕುಮಾರ ಶಿವಾಚಾರ್ಯರು, ಬಿಜಕಲ್‌ನ ಶಿವಲಿಂಗ ಸ್ವಾಮೀಜಿಗಳು, ನಿಡಗುಂದಿಕೊಪ್ಪದ ಚನ್ನಬಸವ ಸ್ವಾಮೀಜಿ, ಹೂವಿನಶಿಗ್ಲಿಯ ಚನ್ನವೀರ ಸ್ವಾಮೀಜಿ, ಕುಂದಗೋಳದ ಶ್ರೀ ಬಸವಣ್ಣಜ್ಜನವರು, ಅಗಡಿ ಅಕ್ಕಿಮಠದ ಗುರುಲಿಂಗ ಶ್ರೀಗಳು, ರಮೇಶ ಸ್ವಾಮೀಜಿ ಇತರರಿದ್ದರು. ಸಂಗನಬಸವ ಶ್ರೀಗಳು, ಅಶೋಕ ಮಾಗಿ ನಿರೂಪಿಸಿದರು.