ಗದಗ: ಬೆಟಗೇರಿಯ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಿಗಾಗಿ (TEACHER) ಪರಿಣಾಮಕಾರಿ ಸಂವಹನ ಕಲೆ ಮತ್ತು ಬೋಧನೆ ಎಂಬ ವಿಷಯದ ಕುರಿತು ಏಳು ದಿನ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿ ಆದರ್ಶ ಶಿಕ್ಷಣ ಸಮಿತಿ ಉಪನ್ಯಾಸಕಿ ಸುಮಲತಾ ಸಂಗನಾಳಮಠ ಅವರು ಶಿಕ್ಷಕರಿಗೆ ಸಂವಹನದ ವಿವಿಧ ಆಯಾಮಗಳ ಮಾಹಿತಿ ನೀಡಿದರು. ಪ್ರಾಯೋಗಿಕ ಚಟುವಟಿಕೆ, ಗುಂಪು ಚರ್ಚೆಗಳನ್ನು ಏರ್ಪಡಿಸಿ ಕೌಶಲದ ಕುರಿತು ಮಾಹಿತಿ ನೀಡಿದರು. ಉತ್ತಮ ಸಂವಹನವು ಮನುಷ್ಯರ ನಡುವೆ ಸೇತುವೆ ನಿರ್ಮಿಸುತ್ತದೆ. ಹಾಗೆಯೇ ತರಗತಿಯಲ್ಲಿ ಅವುಗಳನ್ನು ಅಳವಡಿಸಿಕೊಂಡು ಆಲಿಸುವಿಕೆ, ಸ್ಪಷ್ಟತೆ, ವಿದ್ಯಾರ್ಥಿಗಳೊಂದಿಗಿನ ಬಾಂಧವ್ಯ ಅವರ ಸಮಸ್ಯೆಗಳನ್ನು ಅರಿತು ಅವರೊಂದಿಗೆ ಸಕಾರಾತ್ಮಕವಾಗಿ ಮಾತನಾಡುವ ಕಲೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಜಿ.ಬಿ. ಬೇವಿನಕಟ್ಟಿ, ಸಿ.ಯು. ಹುಲಿಕಂತಿಮಠ, ಎಸ್.ವಿ. ಶಿಗ್ಲಿ, ಆನಂದ ಪೋತ್ನೀಸ್, ಡಾ.ಜೆ. ಸಿ. ಶಿರೋಳ, ಜೆ.ಡಿ. ಉತ್ತರಕರ, ಇತರರಿದ್ದರು.