WATER CRISIS ಲಕ್ಷ್ಮೇಶ್ಚರದ 4,5ನೇ ವಾರ್ಡ್ ನಿವಾಸಿಗಳು ಶುಕ್ರವಾರ ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ: ಪಟ್ಟಣದ ವಾರ್ಡ್ ನಂ. 4 ಮತ್ತು 5ರ ನಿವಾಸಿಗಳು ಶುಕ್ರವಾರ ಸಮರ್ಪಕ ಕುಡಿಯುವ ನೀರು (WATER CRISIS) ಪೂರೈಕೆಗೆ ಆಗ್ರಹಿಸಿ ಪುರಸಭೆ ಕಚೇರಿಗೆ ದೌಡಾಯಿಸಿ ತೀವ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಮುಂದೆ ನಿತ್ಯ ತಾವು ಅನುಭವಿಸುತ್ತಿರುವ ನೀರಿನ ಗೋಳು ತೋಡಿಕೊಂಡರು. ನಮ್ಮ ವಾರ್ಡ್‌ಗಳಿಗೆ ತಿಂಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ನಿತ್ಯ ಬಳಕೆಗಾಗಿ ವಾರ್ಡ್‌ನ ಕೆಲ ಕಡೆ ಅಳವಡಿಸಿರುವ ಸಾರ್ವಜನಿಕ ಸವಳು ನೀರಿನ ಪೂರೈಕೆಯೂ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದೆ. ನಿತ್ಯವೂ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನೀರು ಸರಬರಾಜು ಸಿಬ್ಬಂದಿಗೆ ಕೇಳಿದರೆ ಸಾರ್ವಜನಿಕ ನೀರು ಸರಬರಾಜು ಮಾಡುವ ಬೋರ್‌ವೆಲ್ ದುರಸ್ತಿಯಲ್ಲಿದೆ. ನದಿ ನೀರಿನ ಪೂರೈಕೆಯಲ್ಲಿ ವಿದ್ಯುತ್ ಸಮಸ್ಯೆ, ಪೈಪ್‌ಲೈನ್ ಹಾಳಾಗಿರುವ ನೆಪ ಹೇಳುತ್ತಾ ದಿನ ದೂಡುತ್ತಿದ್ದಾರೆ ಎಂದು ಆರೋಪಿಸಿದರು.
ನೀರಿಗಾಗಿ ಎಲ್ಲೆಂದರಲ್ಲಿಗೆ ಅಲೆದಾಡುವ ಪರಿಸ್ಥಿತಿ ಇದೆ. ವಾರ್ಡ್‌ನ ಪುರಸಭೆಯ ಸದಸ್ಯರ ಅವಧಿಯೂ ಪೂರ್ಣಗೊಂಡಿದ್ದರಿಂದ ಯಾರಿಗೆ ನಮ್ಮ ಪ್ರಾಬ್ಲಂ ಹೇಳಬೇಕು ಗೊತ್ತಾಗುತ್ತಿಲ್ಲ. ವಾರ್ಡಿನ ಬಹುತೇಕ ನಿವಾಸಿಗಳು ಬಡವರು, ಕೂಲಿಕಾರರು, ಬೀದಿಬದಿ ವ್ಯಾಪಾರಸ್ಥರೇ ಆಗಿದ್ದಾರೆ. ದುಡ್ಡು ಕೊಟ್ಟು ಟ್ಯಾಂಕರ್ ನೀರು ಹಾಕಿಸಿಕೊಳ್ಳುವ ಶಕ್ತಿಯಿಲ್ಲ. ದಯವಿಟ್ಟು ನೀರು ಕೊಟ್ಟು ಪುಣ್ಯಕಟ್ಟಿಕೊಳ್ಳಬೇಕು ಎಂದು ಮುಖ್ಯಾಧಿಕಾರಿಗೆ ಬೇಡಿಕೊಂಡರು.
ವಸೀಮ್ ಖವಾಸ್, ಮುಕ್ತಿಯಾರಮ್ಮದ್ ಸಿದ್ದಿ, ಹಜರೇಸಾಬ್ ಸೂರಣಗಿ,ಜೈಲಾನಿ ಚೌರಿ, ಇಬ್ರಾಹಿಂ ರೋಶನಖಾನವರ, ಅಬ್ದುಲ್ ಸಿದ್ದಿ, ದುದ್ದು ಹುಲಗೂರ, ಮುಜಮಿಲ್ ಬಾರಿಗಿಡದ, ಹಜರತಲಿ ಸೂರಣಗಿ, ಐ.ಡಿ.