ಗಜೇಂದ್ರಗಡ ತಾಲೂಕಿನ ಸೂಡಿಯಲ್ಲಿ ಸ್ಮಾರಕ ದತ್ತು ಯೋಜನೆಯಡಿ ಐತಿಹಾಸಿಕ ನಾಗಕುಂಡ ಪುಷ್ಕರಣಿ ಸಂರಣೆ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಸಚಿವ ಎಚ್.ಕೆ. ಪಾಟೀಲ, ಶಾಸಕ, ಜಿ.ಎಸ್. ಪಾಟೀಲ ಲೋಕಾರ್ಪಣೆಗೊಳಿಸಿ ವೀಸಿದರು. ಚಾಲುಕ್ಯರ ವಾಸ್ತುಶಿಲ್ಪ ವೈಭವ ಪುಸ್ತಕ ಬಿಡುಗಡೆಯಾಯಿತು. ಕರ್ನಾಟಕ ಹಸ್ತಪ್ರತಿಗಳ ಸಮೀಾ ಕಾರ್ಯಕ್ಕೂ ಚಾಲನೆ ನೀಡಲಾಯಿತು.
- ಡೆಕ್ಕನ್ ಹೆರಿಟೇಜ್ ಫೌಂಡೇಷನ್ನಿಂದ ಅನುದಾನದ ನೆರವು
ಗಜೇಂದ್ರಗಡ: ತಾಲೂಕಿನ ಸೂಡಿಯಲ್ಲಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಮೈಸೂರು, ಪ್ರವಾಸೋದ್ಯಮ ಇಲಾಖೆ, ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಸಹಯೋಗದಲ್ಲಿ ಸ್ಮಾರಕ ದತ್ತು ಯೋಜನೆಯಡಿ ಐತಿಹಾಸಿಕ ನಾಗಕುಂಡ ಪುಷ್ಕರಣಿ ಅಭಿವೃದ್ಧಿ ಕಾಮಗಾರಿಯನ್ನು ಸಚಿವ ಎಚ್.ಕೆ. ಪಾಟೀಲ ಹಾಗೂ ಶಾಸಕ ಜಿ.ಎಸ್. ಪಾಟೀಲ ಲೋಕಾರ್ಪಣೆ ಮಾಡಿದರು.
ರಾಜಶ್ರೀ ಎನ್ನಮನೇನಿ ಅವರ ತಂದೆ ಡಾ. ದೇವಿನೇನಿ ಸುಬ್ಬರಾವ್ ಅವರ ಸ್ಮರಣಾರ್ಥ ಬಾವಿ ಸಂರಣಾ ಕಾಮಗಾರಿ ದಾನಿಗಳಾಗಿದ್ದಾರೆ. ಬಿ. ವಿ. ಪಾಪಾರಾವ್ ಟ್ರಸ್ಟಿಗಳಾಗಿದ್ದು, ಡೆಕ್ಕನ್ ಹೆರಟೇಜ್ ಫೌಂಡೇಷನ್ 1.5 ಕೋಟಿ ರೂ.ಅನುದಾನ ವೆಚ್ಚದಲ್ಲಿ ಐತಿಹಾಸಿಕ ನಾಗಕುಂಡ ಬಾವಿಯ ಲೋಕಾರ್ಪಣೆ ಹಾಗೂ ಪುಸ್ತಕ ಬಿಡುಗಡೆ ನಡೆಯಿತು.
ವೀರಣ್ಣ ಶೆಟ್ಟರ, ಮಲ್ಲಿಕಾರ್ಜುನ ಬಿದರೂರ, ಸಂಗಮೇಶ ಅಬ್ಬಿಗೇರಿ, ಪ್ರವಾಸೋದ್ಯಮ ಇಲಾಖೆ ಕಾಯದಶಿರ್, ಡಾ. ಕೆ.ವಿ. ತ್ರಿಲೋಕಚಂದ್ರ, ಜಿಲ್ಲಾ ಉಸ್ತುವಾರಿ ಕಾರ್ಯದಶಿರ್ ರಮಣದೀಪ ಚೌಧರಿ, ಪ್ರವಾಸೋದ್ಯಮ ಇಲಾಖೆ ಆಯುಕ್ತ ಅಕ್ರಂ ಪಾಷಾ, ಡಿಸಿ ಸಿ. ಎನ್. ಶ್ರೀಧರ, ಎಸ್ಪಿ ರೋಹನ್ ಜಗದೀಶ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿ ದೇವರಾಜು, ನಿರ್ದೇಶಕ ಡಾ. ಆರ್. ಶೇಜೇಶ್ವರ, ಡಾ. ಸ್ಮಿತಾ ರಡ್ಡಿ, ಇಂಜಿನಿಯರ್ ಆರ್.ಬಿ. ಶ್ರೀಖಂಡೆ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಗದಗ ಮತ್ತು ಲಕ್ಕುಂಡಿ ಪ್ರದೇಶದ ಕಲ್ಯಾಣ ಚಾಲುಕ್ಯರ ಪುಸ್ತಕ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಹಸ್ತಪ್ರತಿಗಳ ಸಂರಣಾ ಕಾರ್ಯಕ್ಕೆ ಚಾಲನೆ ದೊರೆಯಿತು.