ವಿಜಯವಾಣಿ ಸುದ್ದಿಜಾಲ ಗದಗ
ದೇಶದ ಅಭಿವೃದ್ಧಿ, ಭದ್ರತೆ, ಉದ್ಯೋಗ ಮತ್ತು ಮಹಿಳಾ ಸ್ವಾಲಂಭನೆಯೇ ಕೇಂದ್ರ ಸರ್ಕಾರದ ಆಡಳಿತ ಮಂತ್ರ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷದ ಸೇವಾ ಸಂಕಲ್ಪ ಕಾರ್ಯಕ್ರಮ ನಿಮಿತ್ಯ ಬುಧವಾರ ಏರ್ಪಡಿಸಿದ್ದ ಸೇವಾಜ್ಯೋತಿ ಯಾತ್ರೆ ಹಾಗೂ ವಿಕಸಿತ ಭಾರತದ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 25 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನ ನಡೆಸಿ ಉತ್ತಮ ಆಡಳಿತ ನಡೆಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅವಧಿಯಲ್ಲಿ ಭಾರತದ ಆಥಿರ್ಕತೆ ಬಿಜೆಪಿ ಅವಧಿಯಲ್ಲಿ ಉತ್ತುಂಗಕ್ಕೆ ಏರಿದೆ. ಜಿಡಿಪಿ ದರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆಥಿರ್ಕ ಸುಭದ್ರತೆ ದೇಶದಲ್ಲಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿರುವುದಕ್ಕೆ ಇದಕ್ಕೆ ಉದಾಹರಣೆ ಆಗಿವೆ ಎಂದರು.
ನರೇಂದ್ರ ಮೋದಿ ಅವರ ದೂರದೃಷ್ಟಿ ಆಡಳಿತದಲ್ಲಿ ಇಂದು ಭಾರತ ವಿಶ್ವದ ಬಲಿಷ್ಠ ರಾಷ್ಟ್ರಗಳ ಜತೆ ಉತ್ತಮ ಬಾಂಧವ್ಯವನ್ನು ಹೊಂದುವುದರ ಜತೆಗೆ ಆರೋಗ್ಯಕರ ಸ್ಪರ್ಧೆ ನೀಡುತ್ತಿದೆ. ಉದ್ಯೋಗ, ಮಹಿಳಾ ಸ್ವಾವಲಂಭನೆಗೆ ಕೇಂದ್ರ ಸರ್ಕಾರ ಆಧ್ಯತೆ ನೀಡಿದೆ. ಪ್ರತಿ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ನೀಡಲಾಗಿದೆ. ಮೂಲಸೌಕರ್ಯಕ್ಕೆ 14 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ವಿಶ್ವದ ಅನೇಕ ರಾಷ್ಟ್ರಗಳ ನಡುವಿನ ಯುದ್ಧದ ನಡುವೆಯೂ ಭಾರತ ನಾಲ್ಕನೇ ಅತೀದೊಡ್ಡ ಆಥಿರ್ಕ ಶಕ್ತಿಯಾಗಿ ಮುನ್ನಡೆಯುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಭನೆ ಸಾಧಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ರಕ್ಷಣಾ ಸಾಮಗ್ರಿಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ದೇಶದಲ್ಲೇ ಉತ್ಪಾದನೆ ಮಾಡಲಾಗುತ್ತಿದೆ. ಇದು ಸ್ವಾವಲಂಭನೆಯ ಪ್ರತಿಕ. ದೇಶದಲ್ಲಿ ನಕ್ಸಲಿಸಂ ಕೊನೆ ಗಾಣಿಸಲಾಗಿದೆ. ಆಂತರಿಕ ಭದ್ರತೆ ಹೆಚ್ಚಿಸಲಾಗಿದೆ. ಸಂಸದೀಯ ವ್ಯವಹಾರಗಳನ್ನು ಉತ್ತಮವಾಗಿ ನಿಭಾಯಿಸಲಾಗುತ್ತಿದೆ ಎಂದು ತಿಳಿಸಿದರು.
2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರು ಗುಜರಾತ್ ಅನ್ನು ಅಭಿವೃದ್ಧಿಯ ಮಾದರಿಯನ್ನಾಗಿ ಮಾಡಿದರು. 2047ಕ್ಕೆ ವಿಕಸಿತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಆಡಳಿತ ಸಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಇಡೀ ದೇಶಕ್ಕೆ ಉಚಿತ ಲಸಿಕೆ ನೀಡಿ ಜೀವರಕ್ಷಣೆಗೆ ಮಹತ್ವದ ಹೆಜ್ಜೆ ಇಡಲಾಯಿತು. ಲೋಕಲ್ ಫಾರ್ ಮೋಕಲ್, ಮೇಕ್ ಇನ್ ಇಂಡಿಯಾ, ಸ್ವಾವಲಂಬಿ ಭಾರತದ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಆಮದಿನಿಂದ ರಫ್ತಿನತ್ತ ದೇಶವನ್ನು ಕೊಂಡೊಯ್ದಿರುವುದು ಮೋದಿ ಸರ್ಕಾರದ ಸಾಧನೆ.
ಇದೇ ಸಂದರ್ಭದಲ್ಲಿ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ 9 ಮಂಡಲಗಳಿಂದ ತಂದ ಜ್ಯೋತಿಗಳೊಂದಿಗೆ ನಗರದಲ್ಲಿ ಸೇವಾಜ್ಯೋತಿ ಯಾತ್ರೆ ಮೆರವಣಿಗೆ ನಡೆಸಲಾಯಿತು. ಪಂಚಾಚಾರ್ಯ ಮಾಂಗಲ್ಯ ಮಂದಿರದಿಂದ ಆರಂಭಗೊಂಡ ಯಾತ್ರೆಯೂ ಗಾಂಧೀ ವೃತ್ತದಿಂದ ಸಾಗಿ ಟಾಂಗಾಕೂಟ ವೃತ್ತದ ವರೆಗೂ ಸಾಗಿ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಶಾಸಕ ಡಾ. ಚಂದ್ರು ಲಮಾಣಿ, ರಾಜ್ಯ ಪ್ರಧಾನ ಕಾರ್ಯದಶಿರ್ ಪ್ರೀತಂ ಗೌಡ, ಭೋಜರಾಜ್ ಬಾರೂಜಿ, ಎಂ. ಎಸ್. ಕರಿಗೌಡ್ರು, ಶ್ರೀಪತಿ ಉಡುಪಿ, ರವಿ ದಂಡಿನ ಹಲವರು ಇದ್ದರು.
ವಿಶ್ವ ನಾಯಕರಾಗಿ, ದೇಶದ ಪ್ರಧಾನಿ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿ ಅವರ 25 ವರ್ಷಗಳ ಸೇವಾವಧಿಯ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವರು 12 ವರ್ಷ ಮುಖ್ಯಮಂತ್ರಿಗಳಾಗಿ, 12.5 ವರ್ಷ ಮತ್ತು ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸಾರ್ವಜನಿಕ ಆಡಳಿತವೇ ನಮಗೆ ಆದರ್ಶ ಎಂದು ಹೇಳಿದರು.ಶಾಸಕ ಸಿ.ಸಿ. ಪಾಟೀಲ
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವಿಶ್ವಕ್ಕೆ ಮಾದರಿ. ಭಾರತ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದುತ್ತಿರುವುದರಿಂದಲೇ ಇಂದು ವಿಶ್ವ ಗುರುವಾಗಿದೆ. ನಮ್ಮ ರಕ್ಷಣಾ ವ್ಯವಸ್ಥೆ, ವಿದೇಸಿ ವ್ಯವಹಾರಗಳ ತ್ರಂತ್ರಗಳನ್ನು ವಿದೇಶಿಗರು ಅಳವಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಮುಖ್ಯ ಕಾರಣ.ಅನಿಲ ಮೆಣಸಿನಕಾಯಿ, ಬಿಜೆಪಿ ಮುಖಂಡ