ಲಕ್ಷ್ಮೇಶ್ವರದ ವಾರ್ಡ್ ನಂ.16 ರ ಈಶ್ವರ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಪಟ್ಟದ ನೀರಿನ ಟ್ಯಾಂಕ್ (water tank) ಬೇರೆಡೆ ನಿರ್ಮಿಸಲು ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಅಮೃತ 2.0 ಯೋಜನೆ ಅಡಿ 16ನೇ ವಾರ್ಡ್‌ನ ಈಶ್ವರ ನಗರದ ಉದ್ಯಾನದಲ್ಲಿ ಉದ್ದೇಶಿಸಿರುವ ಮೇಲ್ಪಟ್ಟದ ನೀರಿನ ಟ್ಯಾಂಕ್ water tank ಬೇರೆ ಕಡೆ ನಿರ್ಮಿಸಬೇಕೆಂದು ಒತ್ತಾಯಿಸಿ ನಾಗರಿಕರು ಪುರಸಭೆಗೆ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಪುರಸಭೆ ಮಾಜಿ ಸದಸ್ಯ ಪ್ರವೀಣ ಬಾಳಿಕಾಯಿ ಮಾತನಾಡಿ, ಈಶ್ವರನಗರ, ಲಕ್ಷ್ಮೀನಗರ, ಅಗ್ನಿ ಸೋಮೇಶ್ವರನಗರಕ್ಕೆ ಒಂದೇ ನಾಗರಿಕ ಸೌಲಭ್ಯದ ಜಾಗ ಇದ್ದು, ಅಲ್ಲಿ ಉದ್ಯಾನ ಮಾಡಲಾಗಿದೆ. ಆದರೆ, ಅದನ್ನು ಪುರಸಭೆಯವರು ಸರಿಯಾಗಿ ನಿರ್ವಹಣೆ ಮಾಡದೆ ಮುಳ್ಳಿನ ಕಂಟಿ, ಬೆಳೆದು ಸಾರ್ವಜನಿಕ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿತ್ತು.
ಈಶ್ವರ ನಗರದ ಮಹಿಳೆಯರು, ಯುವಕರು, ಸ್ವಯಂ ಪ್ರೇರಿತವಾಗಿ ಸ್ವಚ್ಛತೆಗೊಳಿಸಿ ಸ್ವಂತ ಹಣದಲ್ಲಿ ಕುಳಿತುಕೊಳ್ಳುವ ಆಸನಗಳನ್ನು ಹಾಕಿದ್ದಾರೆ. ಅಲ್ಲಿ ಉತ್ತಮ ಉದ್ಯಾನ ನಿರ್ಮಿಸಲು ಸ್ಥಳೀಯರು ಮುಂದಾಗಿದ್ದಾರೆ. ಆದರೆ, 10 ಲಕ್ಷ ಲೀಟರ್ ಸಾಮರ್ಥ್ಯದ ಜಲ ಸಂಗ್ರಾಹಗಾರವನ್ನು ನಿರ್ಮಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಇದಕ್ಕೆ ಈ ಭಾಗದ ಸಾರ್ವಜನಿಕರ ವಿರೋಧವಿದೆ. ಹೀಗಾಗಿ ಬೇರೆ ಪ್ರದೇಶದಲ್ಲಿ ಜಲ ಸಂಗ್ರಹಾರಗಾರ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮನವಿ ಸ್ವೀಕರಿಸಿದರು. ಪಿ.ಸಿ ಕಾಳಶೆಟ್ಟಿ, ಎಸ್.ಎಸ್. ನಾಗಲೂಟಿ, ಬಿ.ಎನ್. ರಾಟಿ, ಎಸ್.ಬಿ. ಕೊಣ್ಣೂರ, ಶಂಕ್ರಪ್ಪ ಪೂಜಾರ, ರಾಜೇಂದ್ರ ಚವ್ಹಾಣ, ಆರ್.ಸಿ. ಪಟ್ಟಣಶೆಟ್ಟಿ, ಎಸ್.ಎಸ್. ಮಳಲಿ, ಸಂತೋಷ ಪಾಟೀಲ, ಚೇತನಕುಮಾರ ನೀಲಪ್ಪಗೌಡ್ರ, ಡಾ.ಸಂಜೀವ ಬಿರಾದಾರ, ಎನ್.ವಿ. ಹೇಮಗಿರಿಮಠ, ಲಕ್ಷ್ಮೀ ಮುಳಗುಂದ, ಶ್ರೀದೇವಿ ನಾಗಲೂಟಿ, ಶೋಭಾ ಅಂಗಡಿ, ಡಾ. ಸರಳಾ ಬಿರಾದಾರ, ಪುಷ್ಪಾ ಅರಳಿ, ಸವಿತಾ ಪವಾಡಶೆಟ್ಟರ, ಲೀಲಾವತಿ ಆಲದಕಟ್ಟಿ, ರೇಣುಕಾ ಶೀಲವಂತರ, ಲಲಿತಾ ಹಳೆಮನಿ, ಉಮಾ ಪಾಟೀಲ, ಗೌರಮ್ಮ ಅಕ್ಕೂರ, ಇತರರಿದ್ದರು.