formers ರೈತ ವಿರೋಧಿ ನಡೆ ಖಂಡಿಸಿ ಲಕ್ಷ್ಮೇಶ್ವರದಲ್ಲಿ ತಹಸೀಲ್ದಾರ್‌ಗೆ ಶಾಸಕ ಡಾ.ಚಂದ್ರು ಮನವಿ ಅರ್ಪಿಸಿದರು.
ಲಕ್ಷ್ಮೇಶ್ವರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಅನೇಕ ರೈತಪರ ಯೋಜನೆಗಳನ್ನು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಮುಖ್ಯಮಂತ್ರಿ ಕೂಡಲೇ ಎಚ್ಚೆತ್ತುಕೊಂಡು ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಗದಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಾಗೂ ಶಿರಹಟ್ಟಿ ಬಿಜೆಪಿ ಮಂಡಳ, ಲಕ್ಷ್ಮೇಶ್ವರ ನಗರ ಘಟಕ, ರೈತ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ‌್ಯಾಲಿಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ಸರ್ಕಾರ ಇದನ್ನು ಕೊಡಲು ಮೀನಮೇಷ ಎಣಿಸುತ್ತಿದೆ. ಹಲವು ವಿಚಾರಗಳಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಸರ್ಕಾರ ನೀತಿ ವಿರುದ್ಧ ಕಿಡಿಕಾರಿದರು.
ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಕಿಸಾನ್ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಶಿ ಕುಲಕರ್ಣಿ, ಬಸವರಾಜ ಯಂಕಂಚಿ, ಶಿರಹಟ್ಟಿ ಮಂಡಳ ಬಿಜೆಪಿ ಅಧ್ಯಕ್ಷ ಸುನೀಲ್ ಮಹಾಂತಶೆಟ್ಟರ್, ಗದಗ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಇಟಗಿ ಮಾತನಾಡಿದರು. ಸೋಮವಾರ ಬೆಳಗ್ಗೆ ನಿಗದಿಯಂತೆ ಪಟ್ಟಣದ ಪಂಪ ವೃತ್ತದಲ್ಲಿ ಸಾವಿರಾರು ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ತಹಸೀಲ್ದಾರ್ ಧನಂಜಯ ಎಂ., ಅವರಿಗೆ ಮನವಿ ಸಲ್ಲಿಸಿದರು.
ಬಸವರಾಜ ಪಲ್ಲೇದ, ನಾಗರಾಜ ಲಕ್ಕುಂಡಿ, ಫಕೀರೇಶ ರಟ್ಟಿಹಳ್ಳಿ, ಥಾವರೆಪ್ಪ ಲಮಾಣಿ, ಜಾನು ಲಮಾಣಿ, ನಿಂಗಪ್ಪ ಬನ್ನಿ, ಡಿ.ವೈ. ಹುನಗುಂದ, ಪರಶುರಾಮ ಇಮ್ಮಡಿ, ವಿಜಯಕುಮಾರ ಹತ್ತಿಕಾಳ, ಪರಮೇಶ ಹತ್ತಾಳ, ಕೃಷ್ಣ ಬಿದರಳ್ಳಿ, ಅಶೋಕ ಹರಿಜನ, ಅಶೋಕ ಶಿರಹಟ್ಟಿ, ಭೀಮಣ್ಣ ಯಂಗಾಡಿ, ಶಿವಣ್ಣ ಮಾದರ, ಹನಮಂತ ಜಾಲಿಮರದ, ಜಗದೀಶಗೌಡ ಪಾಟೀಲ, ಮಂಜನಗೌಡ ಕೆಂಚನಗೌಡ್ರ, ನೀಲಪ್ಪ ಹತ್ತಿ, ಶಿವಯೋಗಿ ಅಂಕಲಕೋಟಿ, ಸೋಮೇಶ ಉಪನಾಳ, ಶಿವಣ್ಣ ಲಮಾಣಿ, ಪಾಂಡು ಲಮಾಣಿ, ಅನೀಲ ಮುಳಗುಂದ, ಬಸವರಾಜ ಕಲ್ಲೂರ, ಪವಿತ್ರ ಕಲಬುರ್ಗಿ, ರಾಧಾ ಬಾರಕೇರ, ವೀಣಾ ಬೂದಿಹಾಳ, ಸೋಮರೆಡ್ಡಿ ಮುದ್ದಾಬಳ್ಳಿ, ಕುಮಾರ ಹಿರೇಮಠ, ಶಕ್ತಿ ಕತ್ತಿ, ಸುರೇಶ ಮಾಂಡ್ರ ಇತರರಿದ್ದರು.