ಮುಂಡರಗಿ ಪಟ್ಟಣದ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಸೋಮವಾರ ಜಿಲ್ಲಾಧಿಕಾರಿ ಶ್ರೀಧರ ಭೇಟಿ ನೀಡಿ ಪರಿಶೀಲಿಸಿದರು. ಗಂಗಪ್ಪ, ಎರ್ರಿಸ್ವಾಮಿ ಪಿ.ಎಸ್.,ಇತರರಿದ್ದರು. 
ಗದಗ

ನಿಷ್ಕಾಳಜಿ ತೋರಿದರೆ ಸೂಕ್ತ ಕ್ರಮ DC

ವೀರೇಶ ಸೌದ್ರಿ
ಇಥೆನಾಲ್​ನಿಂದ ಮೆಕ್ಕೆಜೋಳ ಖರೀದಿ ಪ್ರತಿಕ್ರಿಯೆ ಪೂರ್ಣಗೊಂಡಿದ್ದು, ಪೌಲ್ಟ್ರಿ ಮೂಲಕ ರೈತರ ಹೆಸರು ನೋಂದಾಯಿಸಿಕೊಂಡು ಮೆಕ್ಕೆಜೋಳ ಖರೀದಿಸಬೇಕು. ಈಗಾಗಲೆ ಇಥೆನಾಲ್​ನಲ್ಲಿ ಹೆಸರು ನೋಂದಾಯಿಸಿಕೊಂಡು ಇನ್ನೂ ಮೆಕ್ಕೆಜೋಳ ಖರೀದಿಸದಿರುವಂತಹ ರೈತರ ಹೆಸರುಗಳನ್ನು ಪೌಲ್ಟ್ರಿನಲ್ಲಿ ಸೇರಿಸಿಕೊಂಡು ಅವರಿಂದ ಮೆಕ್ಕೆಜೋಳ ಖರೀದಿಸಬೇಕು ಎಂದು ಖರೀದಿ ಕೇಂದ್ರದ ಸಿಬ್ಬಂದಿಗೆ ಸೂಚಿಸಿದರು.
ಖರೀದಿ ಕೇಂದ್ರದ ಸಿಬ್ಬಂದಿ ತಾಂತ್ರಿಕ ನೆಪವೊಡ್ಡಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿದ್ದರಿಂದ ಜಿಲ್ಲಾಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.ಇಥೆನಾಲ್ ಓಪನ್ ಆಗದಿದ್ದಾಗ ಪೌಲ್ಟ್ರಿ ಮೂಲಕ ಖರೀದಿಸಬೇಕು. ಬೇರೆ ಕಡೆಗಳಲ್ಲಿ ಖರೀದಿ ಪ್ರಕ್ರಿಯೆ ಮಾಡಲಾಗುತ್ತಿದ್ದು, ನಿಮ್ಮಲ್ಲಿ ಅದ್ಹೇಗೆ ಆರಂಭ ಆಗುವುದಿಲ್ಲ? ಬೇಜವಾಬ್ದಾರಿಯಿಂದ ಏನಾದರೂ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.
ನೀವು ರೈತರಿಗೆ ಒಳ್ಳೆಯದನ್ನು ಮಾಡುವವರೇ?, ರೈತರು ಬಂದು ಕಾಯುತ್ತಿದ್ದಾರೆ. ಹಮಾಲರು ಬಂದಿಲ್ಲ, ಹೀಗಾಗಿ ಖರೀದಿ ಪ್ರಕ್ರಿಯೆ ಮಾಡುತ್ತಿಲ್ಲ ಎನ್ನುತ್ತೀರಿ, ಇಂತಹ ನೆಪ ಹೇಳದೇ ತಕ್ಷಣ ಹಮಾಲರನ್ನು ನಿಯೋಜಿಸಿಕೊಂಡು, ಈಗಾಗಲೇ ಹೆಸರು ನೋಂದಾಯಿಸಿಕೊಂಡ ರೈತರನ್ನು ಕರೆಯಿಸಿ ಸರದಿ ಪ್ರಕಾರದಲ್ಲಿ ಪೌಲ್ಟ್ರಿ ಮೂಲಕ ಖರೀದಿ ಮಾಡಬೇಕು. ಪ್ರತಿದಿನ ರೈತರ ಹೆಸರುಗಳ ಪಟ್ಟಿ ಮಾಡಿ ನಾಮಫಲಕಕ್ಕೆ ಅಂಟಿಸಬೇಕು. ನೋಂದಾಯಿಸಿಕೊಂಡ ರೈತರಿಗೆ ಮುಂಚಿತವಾಗಿ ಕರೆ ಮಾಡಿ ತಿಳಿಸಿ ಕರೆಸಿಕೊಳ್ಳಬೇಕು. ಒಂದು ವೇಳೆ ಅವರು ಅಂದು ಬಾರದಿದ್ದರೆ, ಮತ್ತೊಬ್ಬರಿಗೆ ಅವಕಾಶ ನೀಡಬೇಕು. ನಿಷ್ಕಾಳಜಿ ತೋರಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಉಪವಿಭಾಗಾಧಿಕಾರಿ ಗಂಗಪ್ಪ, ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್., ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ, ರೈತರಾದ ಶಿವಾನಂದ ಇಟಗಿ, ಕೆ.ಎ.ದೇಸಾಯಿ, ಶಂಕರಗೌಡ ಜಾಯನಗೌಡ್ರ, ಇತರರು ಇದ್ದರು.