MINISTER ಶಾಸಕ ಜಿ.ಎಸ್. ಪಾಟೀಲ  
ಗದಗ

MINISTER ಸಚಿವ ಸ್ಥಾನಕ್ಕಾಗಿ ದಲಿತ ಮಹಿಳೆಯರಿಂದ ಪತ್ರ ಚಳವಳಿ

ನರೇಗಲ್ಲ: ಜೈಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಹಿರಿಯ ಮಹಿಳೆಯರು ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ (MINISTER ) ನೀಡಬೇಕು ಎಂದು ಆಗ್ರಹಿಸಿ ಗುರುವಾರ ಪತ್ರ ಚಳವಳಿ ನಡೆಸಿದರು. ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬರೆದ ಪತ್ರವನ್ನು ಸ್ಥಳೀಯ ಅಂಚೆ ಕಚೇರಿ ಮೂಲಕ ರವಾನಿಸಲಾಯಿತು. ಬಳಿಕ ಮಾತನಾಡಿದ ಸಮಿತಿ ರಾಜ್ಯ ಉಪಾಧ್ಯಕ್ಷ ಮೈಲಾರಪ್ಪ ಚಳ್ಳಮರದ, ಜಿ.ಎಸ್. ಪಾಟೀಲ ಅವರು ದಲಿತರನ್ನು ಎಂದಿಗೂ ಕೈಬಿಟ್ಟಿಲ್ಲ. ಯಾವುದೇ ಕಪ್ಪ್ಪುಚುಕ್ಕೆ ಚುಕ್ಕೆ ಇಲ್ಲದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದರು. ಸಮಿತಿ ನರೇಗಲ್ಲ ಘಟಕದ ಅಧ್ಯಕ್ಷೆ ಮುತ್ತವ್ವ ಚಳ್ಳಮರದ, ಕರಿಯಮ್ಮ ಚಳ್ಳಮರದ, ದುರಗವ್ವ ಚಳ್ಳಮರದ, ಮುಕ್ಕವ್ವ ಅಬ್ಬಿಗೇರಿ, ರೇಣವ್ವ ಹೊಂಬಳ, ಮುದಕವ್ವ ಹಳ್ಳದಮನಿ, ಶಾಂತವ್ವ ಪಾದಗಟ್ಟಿ, ಗಂಗವ್ವ ಚಳ್ಳಮರದ, ತುಳಸವ್ವ ಚಳ್ಳಮರದ, ಮುದಕಮ್ಮ ಚಳ್ಳಮರದ, ಕನಕವ್ವ ಹೊಂಬಳ ಇದ್ದರು.