WHEEELING ನರಗುಂದ ಕೋರ್ಟ್‌ 
ಗದಗ

WHEEELING ವ್ಹೀಲಿಂಗ್ ಮಾಡಿದಾತಗೆ ‘ಸಂಚಾರ ನಿಯಮ‘ ಪಾಠದ ಶಿಕ್ಷೆ ನೀಡಿದ ಕೋರ್ಟ್

ನರಗುಂದ: ಬೈಕ್ ವೀಲಿಂಗ್ ಮಾಡಿದ ಯುವಕನಿಗೆ (WHEEELING ) ಇಲ್ಲಿನ ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀಶರು ದಂಡದ ಜತೆಗೆ ವಿನೂತನ ಶಿಕ್ಷೆ ವಿಧಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲಿಂಗ್ ಮಾಡಿದ ಅಪರಾಧಿಗೆ 8,500 ರೂ. ದಂಡ ವಿಧಿಸಲಾಗಿದೆ. ಇದರೊಂದಿಗೆ ಆತನಿಗೆ ತಪ್ಪಿನ ಅರಿವು ಮೂಡಿಸುವ ಸಲುವಾಗಿ ನರಗುಂದ ಹಾಗೂ ತಾಲೂಕಿನ ಎಲ್ಲ ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ತೆರಳಿ ತನ್ನ ಮೇಲಿರುವ ಅಪರಾಧದ ಕುರಿತು, ಅದರಿಂದಾದ ಶಿಕ್ಷೆ, ಮೋಟಾರು ವಾಹನ ಕಾಯ್ದೆ, ಅಪ್ರಾಪ್ತರ ವಾಹನ ಚಾಲನೆಯಿಂದಾಗುವ ಪರಿಣಾಮ, ಕುಡಿದು ವಾಹನ ಚಲಾಯಿಸುವುದರಿಂದ ನಡೆಯುವ ಅವಘಡಗಳ ಬಗ್ಗೆ ವಿಶೇಷ ಜಾಗೃತಿ ಮೂಡಿಸಬೇಕು ಎಂದು ತಿಳಿಸಲಾಗಿದೆ. ಅಪರಾಧಿ ಸ್ವಂತ ಖರ್ಚಿನಲ್ಲಿ ತಾಲೂಕಿನ ವಿವಿಧ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವಿಶೇಷ ಜಾಗೃತಿ ಮೂಡಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾನೆ.
ಏನಿದು ಕೇಸ್
ನರಗುಂದದ ರಾಚಯ್ಯನಗರ ಬಡಾವಣೆಯ ಪ್ರತೀಕ್ಷ ವೀರಭದ್ರಪ್ಪ ತಳವಾರ (25) ಕಳೆದ ಮಾರ್ಚ್ 5ರಂದು ಪುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲಿಂಗ್ ಮಾಡಿದ್ದ. ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಪ್ರಕರದ ವಿಚಾರಣೆ ನಡೆಸಿದ ದಿವಾಣಿ ನ್ಯಾಯಾಧೀಶ ಜಿನ್ನಪ್ಪ ಚೌಗಲಾಗೆ ಜೂ. 23ರಂದು ದಂಡ ಹಾಗೂ ಸಂಚಾರ ನಿಯಮಗಳ ಅರಿವು ಮೂಡಿಸುವ ಶಿಕ್ಷಣೆ ವಿಧಿಸಿದ್ದಾರೆ. ಅರಿವು ಮೂಡಿಸಿದ ಕಾರ್ಯಕ್ರಮದ ಮಾಹಿತಿ, ಚಿತ್ರ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿದ್ದಾರೆ.