ರೋಣ ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಸಿ.ಸಿ. ಪಾಟೀಲ ಚಾಲನೆ ನೀಡಿದರು. ಸೋಮು ಚರೇದ, ಸುರೇಶಗೌಡ್ರ ಪಾಟೀಲ, ವೀರಣ್ಣ ತಾಳಿ, ಶೇಖಣ್ಣ ಮೇಟಿ, ವಿಜಯಕುಮಾರ ನೀಲಗುಂದ, ಮುತ್ತಪ್ಪ ಉಳ್ಳಾಗಡ್ಡಿ, ಸುರೇಶ ಬೀರನೂರ ಇದ್ದರು. 
ಗದಗ

WORK: ಗುಣಮಟ್ಟದ ಕಾಮಗಾರಿಗೆ ಸಹಕಾರ ಅಗತ್ಯ

ಸೋಮನಾಥ ರೆಡ್ಡಿ
ರೋಣ: ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಗುಣಮಟ್ಟದ ರಸ್ತೆ (WORK) ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಮುಖ್ಯ ರಸ್ತೆಯಿಂದ ಕೆರೆ ದಂಡೆಯವರೆಗೆ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಸರ್ಕಾರ ವರ್ಷಕ್ಕೆ ಪ್ರತಿ ಶಾಸಕರಿಗೆ 2 ಕೋಟಿ ರೂಪಾಯಿ ಅನುದಾನ ನೀಡಬೇಕಿತ್ತು. ಆದರೆ, ಈವರೆಗೆ ಕೇವಲ 50 ಲಕ್ಷ ರೂ. ನೀಡಿದೆ. ಹೀಗಾದರೆ ಕ್ಷೇತ್ರದ ಅಭಿವೃದ್ಧಿಗಳು ಹೇಗಾಗುತ್ತವೆ’ ಎಂದು ಪ್ರಶ್ನಿಸಿದರು.
ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರಿಂದ ಮುಂದಿನ ಮೂರು ತಿಂಗಳು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಹೀಗಾಗಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕೌಜಗೇರಿ ಗ್ರಾಮದ ಗ್ರಾಮದೇವತೆ ಸಮುದಾಯ ಭವನಕ್ಕೆ ಅನುದಾನ ನೀಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಶೀಘ್ರ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಹೊಳೆಅಲೂರ ಮಂಡಲಾಧ್ಯಕ್ಷ ಸೋಮು ಚರೇದ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಸುರೇಶಗೌಡ್ರ ಪಾಟೀಲ, ವೀರಣ್ಣ ತಾಳಿ, ಶೇಖಣ್ಣ ಮೇಟಿ, ಯಲ್ಲಪ್ಪಗೌಡ ಮೇಟಿ, ವಿಜಯಕುಮಾರ ನೀಲಗುಂದ, ಮುತ್ತಪ್ಪ ಉಳ್ಳಾಗಡ್ಡಿ, ಸುರೇಶ ಬೀರನೂರ, ನಾಗರಾಜ ಸುರಕೋಡ, ಮಾಂತೇಶ ದೇವಗಣ್ಣವರ, ನವೀನ ಪೂಜಾರ, ಗೋವಿಂದ ಸಾವನ್ನವರ, ಶರಣು ಬರಶೆಟ್ಟಿ, ಇತರರು ಇದ್ದರು.