MEETING ಸಮಾಲೋಚನಾ ಸಭೆ  
ಗದಗ

MEETING ಬ್ಯಾಂಕ್ ವ್ಯವಸ್ಥಾಪಕರ ಜತೆ ಸಮಾಲೋಚನಾ ಸಭೆ 18ಕ್ಕೆ

ನರಗುಂದ: ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಮಿನಿ ಬ್ರಾೃಂಚ್‌ನಲ್ಲಿ ಮೇ 18ರಂದು ಮಧ್ಯಾಹ್ನ 3ಗಂಟೆಗೆ ಬ್ಯಾಂಕ್ ವ್ಯವಸ್ಥಾಪಕರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ (MEETING ) ಕರೆಯಲಾಗಿದೆ. ಸಭೆಯಲ್ಲಿ ಆರೋಗ್ಯ ವಿಮೆ, ಆದಾಯ ತೆರಿಗೆ, ಟಿಡಿಎಸ್, ಲೈಫ್ ಸರ್ಟಿಫಿಕೆಟ್ ಹಾಗೂ ಬ್ಯಾಂಕಿನ ಇತರ ವ್ಯವಹಾರಗಳ ಕುರಿತು ಚರ್ಚಿಸಲಾಗುವುದು. ಸಭೆಯಲ್ಲಿ ಹಲವಾರು ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಕರ್ನಾಟಕ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಭಾಗಿಯಾಗಿ ತಮಗಿರುವ ಗೊಂದಲ ಪರಿಹರಿಸಿಕೊಳ್ಳುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ. ಅಳಗವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.