ಮುಂಡರಗಿ ಪಟ್ಟಣದಲ್ಲಿ ರಾಜ್ಯ ಬಣಜಿಗರ ಸಮಾಜದ ಕ್ಷೇಮಾಭಿವೃದ್ಧಿ ಸಂಘಸ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಗುಡದೀರಪ್ಪ ಲಿಂಬಿಕಾಯಿ, ವೀರೇಶ ಗುಗ್ಗರಿ, ಬಸವರಾಜ ಅಬ್ಬಿಗೇರಿ ಇತರರಿದ್ದರು. 
ಗದಗ

JOB: ಉದ್ಯೋಗ ಮೀಸಲಾತಿಗಾಗಿ 2ಎ ಪರಿಗಣಿಸಲಿ

ಸೋಮನಾಥ ರೆಡ್ಡಿ
ಮುಂಡರಗಿ: ಬಣಜಿಗ ಸಮುದಾಯವನ್ನು ಪ್ರವರ್ಗ-2ಎ ಅಡಿಯಲ್ಲಿಯೇ ಉದ್ಯೋಗ ಮೀಸಲಾತಿಗಾಗಿ ಪರಿಗಣಿಸಿ ಆದೇಶ ನೀಡಬೇಕು ಎಂದು ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠವು ಬಣಜಿಗ ಸಮುದಾಯವನ್ನು ಉದ್ಯೋಗ ಉದ್ದೇಶಕ್ಕಾಗಿ ಪ್ರವರ್ಗ ಡಿ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ಪ್ರವರ್ಗ ಬಿ ಅಡಿಯಲ್ಲಿ ವರ್ಗೀಕರಿಸುವುದು ಪರಿಚ್ಛೇದದ ಉಲ್ಲಂಘನೆಯಾಗುತ್ತದೆ. ಹೀಗಾಗಿ ಬಣಜಿಗ ಸಮುದಾಯವನ್ನು ಪರಿಚ್ಛೇದ 16(4) ರ ಅಡಿಯಲ್ಲಿ ಗ್ರೂಪ್ ಡಿ ಬದಲಿಗೆ ಗ್ರೂಪ್ ಬಿ ಅಡಿಯಲ್ಲಿ ಮರು ವರ್ಗೀಕರಿಸಬೇಕು ಎಂದು ಆದೇಶ ನೀಡಿದೆ. ಅಲ್ಲದೆ, ಧಾರವಾಡ ಉಚ್ಛ ನ್ಯಾಯಾಲಯ ಕೂಡ ಇದೇ ರೀತಿಯ ಆದೇಶ ನೀಡಿದೆ.
ಬಣಜಿಗ ಸಮುದಾಯವರು ಶೈಕ್ಷಣಿಕವಾಗಿ ಅತೀ ಹಿಂದುಳಿದಿರುವುದರಿಂದ ಸರ್ಕಾರಿ ನೇಮಕಾತಿಗಳಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಣಜಿಗ ಸಮುದಾಯವನ್ನು ಗ್ರೂಪ್ ಬಿ ಅಡಿಯಲ್ಲಿಯೇ ಮರು ವರ್ಗೀಕರಿಸಿ ನ್ಯಾಯ ಒದಗಿಸಲು ಸಂಬಂಧಿಸಿದ ಇಲಾಖೆಗೆ ಸೂಕ್ತ ಆದೇಶ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ತಹಸೀಲ್ದಾರ್ ಪರವಾಗಿ ಗ್ರೇಡ್-2 ತಹಸೀಲ್ದಾರ್ ಕೆ.ರಾಧಾ ಮನವಿ ಸ್ವೀಕರಿಸಿದರು. ಸಂಘದ ತಾಲೂಕು ಅಧ್ಯಕ್ಷ ಗುಡದೀರಪ್ಪ ಲಿಂಬಿಕಾಯಿ, ವೀರೇಶ ಗುಗ್ಗರಿ, ಬಸವರಾಜ ಅಬ್ಬಿಗೇರಿ, ಬಸವರಾಜ ಬ್ಯಾಳಿ, ಅಂದಪ್ಪ ಶಿವಶೆಟ್ಟಿ, ಗಿರೀಶ ಅಂಗಡಿ, ಗಂಗಾಧರ ಬಳ್ಳೊಳ್ಳಿ, ಶಾಂತಪ್ಪ ಕಡ್ಡಿ, ವರುಣ ಬೆಲ್ಲದ, ಜಗದೀಶ ಹೊರಡಿ, ಶಿವಶರಣಪ್ಪ ಹುಲ್ಲೂರು, ಕೊರಿಶೆಟ್ಟರ, ಡಾ.ಬಿ.ಜಿ.ಜವಳಿ, ಎನ್.ಎಫ್.ಅಕ್ಕೂರ, ಎಸ್.ಪಿ.ಕೊಪ್ಪಳ, ಬಿ.ಎಸ್.ಬಿಸನಳ್ಳಿ, ಅಶೋಕ ತ್ಯಾಮನವರ, ಅಮರೇಶ ಅಂಗಡಿ, ಶರಣಪ್ಪ ಕಡ್ಡಿ, ವಿಶ್ವನಾಥ ಅಂಗಡಿ, ಶರಣಪ್ಪ ಬಿಸನಳ್ಳಿ, ಇತರರು ಇದ್ದರು.