ಎಳನೀರು ಮಾರಾಟ ಮಾಡುತ್ತಿರುವ ವ್ಯಾಪಾರಿ. 
ಗದಗ

Coconut water: ಬೇಡಿಕೆ ಹೆಚ್ಚಿಸಿಕೊಂಡ ‘ಎಳನೀರು’

ಮಂಜುನಾಥ ಗದಗಿನ
ನರಗುಂದ: ದಿನದಿಂದ ದಿನಕ್ಕೆ ಬೇಸಿಲಿನ ಪ್ರಖರತೆ ಹೆಚ್ಚುತ್ತಿರುವ ಕಾರಣ ಜನರ ಸೂರ್ಯನ ತಾಪದಿಂದ ಮುಕ್ತಿ ಕಂಡುಕೊಳ್ಳಲು ಎಳನೀರು ಮೊರೆ ಹೋಗುತ್ತಿದ್ದಾರೆ.
ಪಟ್ಟಣದಲ್ಲಿ 10ಕ್ಕೂ ಅಧಿಕ ಎಳನೀರು ಅಂಗಡಿಗಳಿವೆ. ಬೇಸಿಗೆ ಪೂರ್ವದಲ್ಲಿ ಒಂದು ಕಾಯಿಗೆ ಕನಿಷ್ಠ 25 ರಿಂದ 30 ರೂ.ಗಳವರೆಗೆ ಪ್ರತಿದಿನ 120 ರಿಂದ 150 ತೆಂಗಿನಕಾಯಿ ಮಾರಾಟ ಮಾಡಲಾಗುತ್ತಿತ್ತು. ಆದರೀಗ ಬಿಸಿಲಿನ ತಾಪಮಾನ ಹೆಚ್ಚಳದಿಂದ 1 ಎಳನೀರು 40 ರೂ.ಗೆ ಮಾರಾಟವಾಗುತ್ತಿದೆ. ಪಟ್ಟಣದ ಎಲ್ಲ ವ್ಯಾಪಾರಸ್ಥರು ಪ್ರತಿದಿನ 3 ಸಾವಿರಕ್ಕೂ ಅಧಿಕ ಎಳನೀರು ಮಾರಾಟ ಮಾಡುತ್ತಿದ್ದು, ಈ ಮೂಲಕ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತಿದ್ದಾರೆ.
ಗಂಜಿ ನೀರಿಗೆ ಬೇಡಿಕೆ: ಪ್ರತಿದಿನ ಎಳನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದ ಉಷ್ಣಾಂಶ ಕಾಯ್ದುಕೊಳ್ಳುವುದರ ಜತೆಗೆ ಜೀರ್ಣಕ್ರಿಯೆ, ರಕ್ತದೊತ್ತಡ ನಿಯಂತ್ರಣ, ತೂಕ ಇಳಿಕೆ ಮತ್ತು ಚರ್ಮದ ಕಾಂತಿ ಹೆಚ್ಚಿಸಲು ಅತ್ಯುತ್ತಮವಾಗಿದೆ. ಹೀಗಾಗಿ ವೈದ್ಯರು ಎಳನೀರು ಕುಡಿಯಲು ಸಲಹೆ ನೀಡುತ್ತಿರುವ ಕಾರಣ ಎಳನೀರಿಗೆ ಭಾರಿ ಬೇಡಿಕೆ ಬಂದಿದೆ. ಅದರಲ್ಲೂ ಗಂಜಿ ಎಳನೀರನ್ನೇ ಜನರು ಬೇಡಿ ಕುಡಿಯುತ್ತಿದ್ದಾರೆ.
ತಂಪು ಪಾನಿಯಗಳಿಗೂ ಡಿಮಾಂಡ್: ದೇಹದ ಉಷ್ಣಾಂಶ ಕಡಿಮೆ ಮಾಡಿ, ನೀರಿನಾಂಶ ಸಮತೋಲನದಲ್ಲಿಟ್ಟುಕೊಳ್ಳಲು ಎಳನೀರು ಜತೆಗೆ ಕಲ್ಲಂಗಡಿ, ದ್ರಾಕ್ಷಿ, ಮೊಸಂಬಿ, ಕಬ್ಬಿನ ಹಾಲು, ಲಸ್ಸಿ, ಮಜ್ಜಿಗೆ ಮುಂತಾದ ಪಾನಿಯಗಳ ಸೇವನೆಗೆ ಜನರು ಮುಂದಾಗುತ್ತಿದ್ದಾರೆ. ಸದಾ ಬಿಕೋ ಎನ್ನುತ್ತಿದ್ದ ತಂಪುಪಾನಿಯ ಅಂಗಡಿಗಳಿಗೆ ಇದೀಗ ಶುಕ್ರದೆಸೆ ಆರಂಭಗೊಂಡಿದೆ.
"

ಕಳೆದ 20 ವರ್ಷಗಳಿಂದ ಎಳನೀರು ಸೇವಿಸುತ್ತಿದ್ದೇನೆ. ಇದರಿಂದ ನನ್ನ ಆರೋಗ್ಯವು ಚೆನ್ನಾಗಿದೆ. ಆದರೀಗ ಒಂದು ಕಾಯಿಗೆ ಏಕಾಏಕಿ 40 ರೂ. ದರ ಹೆಚ್ಚಳಗೊಂಡಿರುವುದರಿಂದ ಆರ್ಥಿಕ ಹೊರೆಯಾಗಲಿದೆ.

"

ವರ್ಷದಿಂದ ವರ್ಷಕ್ಕೆ ಎಳನೀರಿನ ಬೆಲೆ ಹೆಚ್ಚಳಗೊಳ್ಳುತ್ತಿದೆ. ಬೇಸಿಗೆಯಲ್ಲಿ ಹೆಚ್ಚಿನ ಬೇಡಿಕೆ ಸಲ್ಲಿಸಿದರೂ ನಿಗದಿತ ಸಮಯಕ್ಕೆ ಎಳನೀರು ಸಿಗುತ್ತಿಲ್ಲ. ಬೆಲೆ ಏರಿಕೆಯಿಂದ ಗ್ರಾಹಕರು ನಿತ್ಯ ವಾಗ್ದಾದ ಮಾಡುತ್ತಾರೆ. ಆದರೆ, ನಮಗೆ ವ್ಯಾಪಾರ ಮಾಡುವುದು ಅನಿವಾರ್ಯ.