ರೋಣ ತಾಲೂಕಿನ ಜಿಗಳೂರ ಸಮೀಪವಿರುವ ರೋಣ, ಗಜೇಂದ್ರಗಡ ಹಾಗೂ ನರೇಗಲ್ಲ ಪಟ್ಟಣಗಳಿಗೆ ನೀರು ಸರಬರಾಜು ಮಾಡುವ ಘಟಕಗಳಿಗೆ ನಗರ ನೀರು ಸರಬರಾಜು water supply ಮತ್ತು ಒಳಚರಂಡಿ ಉಪವಿಭಾಗದ ಸಹಾಯಕ ಇಂಜಿನಿಯರ್ ರೇಖಾ ತಲ್ಲೂರ ಭೇಟಿ ನೀಡಿ ನೌಕರರೊಂದಿಗೆ ಚರ್ಚೆ ನಡೆಸಿದರು. 
ಗದಗ

water supply ನೀರು ಸರಬರಾಜು ಘಟಕಗಳಲ್ಲಿ ಸ್ವಚ್ಛತೆಗೆ ಆದ್ಯತೆ ಇರಲಿ

ಮಂಜುನಾಥ ಕೆಂಪಸಣ್ಣವರ
ರೋಣ: ಬೇಸಿಗೆ ಆರಂಭವಾಗಿರುವುದರಿಂದ ಕಲುಷಿತ ನೀರು ಸೇವನೆಯಿಂದ ಕಾಯಿಲೆಗಳು ಹರಡುವ ಸಾಧ್ಯತೆ ಇರುವುದರಿಂದ ನೀರು ಸರಬರಾಜು water supply ಘಟಕಗಳಿಗೆ ಗದಗನ ನೀರು ಸರಬರಾಜು, ಒಳಚರಂಡಿ ಉಪವಿಭಾಗದ ಸಹಾಯಕ ಇಂಜಿನಿಯರ್ ರೇಖಾ ತಲ್ಲೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಗಳೂರ ಸಮೀಪವಿರುವ ರೋಣ, ಗಜೇಂದ್ರಗಡ ಹಾಗೂ ನರೇಗಲ್ಲ ಪಟ್ಟಣಗಳಿಗೆ ನೀರು ಸರಬರಾಜು ಮಾಡುವ ಘಟಕಗಳಿಗೆ ಭೇಟಿ ನೀಡಿದ ಅವರು, ನೀರು ಸರಬರಾಜು ಘಟಕಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.
ಇಲ್ಲಿಂದ ಸರಬರಾಜು ಆಗುವ ನೀರು ಲಕ್ಷ ಜನರಿಗೆ ತಲುಪುತ್ತದೆ. ಏನಾದರೂ ತೊಂದರೆ ಉಂಟಾದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು. ಆ ನಿಟ್ಟಿನಲ್ಲಿ ನೀರು ಸರಬರಾಜು ಘಟಕಗಳಲ್ಲಿ ಕೆಲಸ ಮಾಡುವ ನೌಕರರು ಎಚ್ಚರಿಕೆ ವಹಿಸುವುದು ಅತೀ ಅವಶ್ಯಯವಾಗಿದೆ ಎಂದರು.