ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದಲೇ ಗ್ರಾಮ ಸಭೆ ಉದ್ಘಾಟಿಸಲಾಯಿತು. 
ಗದಗ

Children'sಆಡರಕಟ್ಟಿಯಲ್ಲಿ ಮಕ್ಕಳ ಗ್ರಾಮ ಸಭೆ

ಲಕ್ಷ್ಮೇಶ್ವರ: ಜಿಪಂ, ತಾಪಂ, ಆಡರಕಟ್ಟಿ ಗ್ರಾಪಂ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ಸೋಮವಾರ ( Children's) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಇಲಾಖೆ ತಾಲೂಕು ಸಂಯೋಜಕರಾದ ಉಮಾ ಬಾರ್ಕಿ ಮಾತನಾಡಿ, ಶಿಕ್ಷಣ, ಆರೋಗ್ಯ, ಕ್ರೀಡೆ, ಮಕ್ಕಳ ರಕ್ಷಣೆ, ಸಮಸ್ಯೆ ಹಾಗೂ ಮೂಲ ಸೌಲಭ್ಯಕ್ಕಾಗಿ ಮಕ್ಕಳ ಗ್ರಾಮಸಭೆ ಅತ್ಯಂತ ಮಹತ್ವದ್ದಾಗಿದೆ ಎಂದ ಅವರು, ಗ್ರಾಪಂ ವ್ಯಾಪ್ತಿಯಲ್ಲಿ ಮಕ್ಕಳ ಆರೋಗ್ಯ, ಶಾಲೆ ಬಿಟ್ಟ ಮಕ್ಕಳ ಅಂಕಿ- ಅಂಶ, ಬಾಲ್ಯವಿವಾಹ, ಬಾಲಕಾರ್ಮಿಕ, ಅಪೌಷ್ಟಿಕ ಮಕ್ಕಳ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸಿದರು.
ಪಿಡಿಒ ಪ್ರಶಾಂತ ಮಾಡಳ್ಳಿ ಮಾತನಾಡಿ, ಪಂಚಾಯಿತಿ ಸೇವೆಗಳು ಕರ್ತವ್ಯಗಳು, ಜವಾಬ್ದಾರಿಗಳ ಬಗ್ಗೆ ಹಾಗೂ ಮಕ್ಕಳ ಹಕ್ಕುಗಳ ಸಮಗ್ರ ರಕ್ಷಣೆಯಲ್ಲಿ ಗ್ರಾಪಂ ಪಾತ್ರದ ಬಗ್ಗೆ ಮಕ್ಕಳು ತಮಗೆ ಬೇಕಾದ ಹಕ್ಕುಗಳು, ಸಮಸ್ಯೆಗಳ ಪರಿಹಾರದ ಬಗ್ಗೆ ಮಾಹಿತಿ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಪ್ರೇಮಕ್ಕ ಲಮಾಣಿ, ಸದಸ್ಯರಾದ ನಿಂಗಪ್ಪ ಪ್ಯಾಟಿ, ಪವಿತ್ರಾ ಗಡೆಪ್ಪನವರ, ಹರೀಶ ಲಮಾಣಿ, ಕಮಲವ್ವ ಲಮಾಣಿ, ಕಾರ್ಯದರ್ಶಿ ಎಸ್.ಕೆ. ಡಂಬಳ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ ಅಡರಕಟ್ಟಿ, ಉಪಾಧ್ಯಕ್ಷೆ ಪವಿತ್ರಾ ಮೂಲಿಮನಿ, ಇಮಾಮಹುಸೇನ ಸಂಕ್ಲಿಪುರ, ದೇವಪ್ಪ ಲಮಾಣಿ, ಶೈಲಾ ಭಾವಿಕಟ್ಟಿ, ಗೀತಾ ಭಾಂಗಿ, ರಾಜೇಶ್ವರಿ ಅಳ್ಳಳ್ಳಿ, ಎಂ.ಎಸ್. ಹಿರೇಮಠ ಭಾಗವಹಿಸಿದ್ದರು. ಐ.ಎಸ್. ನೇಕಾರ, ಡಿ.ಡಿ. ಲಮಾಣಿ, ಪರಮೇಶ್ವರ ಕಾಳಶೆಟ್ಟಿ ನಿರೂಪಿಸಿದರು.