ಮುಂಡರಗಿ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಘಟಕದಿಂದ ಗುರುವಾರ ತಹಸೀಲ್ದಾರ್ ರ‍್ರಿಸ್ವಾಮಿ ಪಿ.ಎಸ್.ಅವರಿಗೆ ಮನವಿ ಸಲ್ಲಿಸಲಾಯಿತು. ದುರುಗಪ್ಪ ಹರಿಜನ, ಸೋಮಣ್ಣ ಹೈತಾಪೂರ, ಶಿವಾನಂದ ದೊಡ್ಡಮನಿ, ಕಟ್ಟೆಪ್ಪ ಚಿಗರಮ್ಮನವರ, ಇತರರಿದ್ದರು.
ಮುಂಡರಗಿ: ತಾಲೂಕಿನ ಚಿಕ್ಕವಡ್ಡಟ್ಟಿ (Chikkavaddatti) ಗ್ರಾಮದ ದಲಿತ ಮಾದಿಗ ಸಮುದಾಯಕ್ಕೆ ಪ್ರತ್ಯೇಕವಾಗಿ ನ್ಯಾಯಬೆಲೆ ಅಂಗಡಿ, ಸಾಮೂಹಿಕ ಶೌಚಗೃಹ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಗುರುವಾರ ತಹಸೀಲ್ದಾರ್ ಎರ‍್ರಿಸ್ವಾಮಿ ಪಿ.ಎಸ್. ಅವರಿಗೆ ಮನವಿ ಸಲ್ಲಿಸಲಾಯಿತು.
ಚಿಕ್ಕವಡ್ಡಟ್ಟಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಕಾಲನಿಯಲ್ಲಿ ೧೫೦ ಪಡಿತರ ಚೀಟಿಗಳನ್ನು ಹೊಂದಿದ್ದು ಅದಕ್ಕಾಗಿ ಪ್ರತ್ಯೇಕವಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಬೇಕು. ನರೇಗಾ ಯೋಜನೆಯಡಿ ನಿರಂತರ ಕೆಲಸ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಹಿಳೆಯರಿಗೆ ಬಯಲು ಬಹಿರ್ದೆಸೆ ತಪ್ಪಿಸಲು ಸಾಮೂಹಿಕ ಮಹಿಳಾ ಶೌಚಗೃಹ ಮಂಜೂರು ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ದುರುಗಪ್ಪ ಹರಿಜನ, ಸೋಮಣ್ಣ ಹೈತಾಪೂರ, ಶಿವಾನಂದ ದೊಡ್ಡಮನಿ, ಕಟ್ಟೆಪ್ಪ ಚಿಗರಮ್ಮನವರ, ಶಿವಪುತ್ರಪ್ಪ ಗುಂಡಪ್ಪನವರ, -Àಕೀರಪ್ಪ ಸೋಮ್ಮನವರ, ರಣದಪ್ಪ ಮೈಲಮ್ಮನವರ, ಬಸವರಾಜ ತಿಮ್ಮನವರ, ಮಜುರಪ್ಪ ಉಡಚಮ್ಮನವರ, ಹನುಮಂತ ದೊಡ್ಡಮನಿ, ಇತರರು ಇದ್ದರು.