ಮುಳಗುಂದ: ಇಲ್ಲಿನ ಕಿರಣ ಕುಲಕರ್ಣಿ ಅವರ ಹೊಲದಲ್ಲಿ ಮಂಗಳವಾರ ಕೃಷಿ ಇಲಾಖೆಯ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ()ಯೋಜನೆಯಡಿ ಕಡಲೆ ಬೆಳೆಯ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು. (Mulgund) ಕೇಂದ್ರ ಸರ್ಕಾರದ ನೋಡಲ್ ಅಧಿಕಾರಿ ಸಿ. ಸಿಖಾ ಭೇಟಿ ನೀಡಿ, ನಬಾರ್ಡ್, ಕೃಷಿ, ಸಹಕಾರಿ ಇಲಾಖೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ, ಯೋಜನೆಯಿಂದ ರೈತರಿಗೆ ಆಗಿರುವ ಪ್ರಯೋಜನ ಹಾಗೂ ಲಾಭಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷಿ ವಿಜ್ಞಾನಿ ಕಲಾವತಿ ಕಂಬಳ್ಳಿ ಮಾತನಾಡಿ, ಕಡಲೆ ಬೆಳೆಗೆ ತಗುಲುವ ರೋಗ ನಿರ್ವಹಣೆ ಮತ್ತು ಕ್ರಿಮಿನಾಶಕ ಸಿಂಪಡಣೆ ಕುರಿತು ಸಮಗ್ರ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಸಹಾಯಕ ನಿರ್ದೇಶಕಿ ಸೂರ್ತಿ ಜಿ.ಎಸ್. ಮಲ್ಲಯ್ಯ ಕೊರಣ್ಣವರ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಜೇಶ್ವರಿ ಚಿನಿವಾರ, ಕೃಷಿ ಸಹಾಯಕ ಎಪ್.ಸಿ. ಗುರಿಕಾರ, ರೈತರಾದ ದೇವರಾಜ ಸಂಗನಪೇಟಿ, ರಾಜಣ್ಣ ಕುಲಕರ್ಣಿ, ಮುತ್ತಪ್ಪ ಪಲ್ಲೇದ ಇತರರಿದ್ದರು.