ನೀಟ್ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ ರೋಣ, ನರೇಗಲ್ಲ ಬ್ಲಾಕ್ ಕಾಂಗ್ರೆಸ್‌ನಿಂದ ಶನಿವಾರ ಕ್ಯಾಂಡಲ್ ಮಾರ್ಚ್ ನಡೆಯಿತು. ವೀರಣ್ಣ ಶೆಟ್ಟರ್, ಮುತ್ತು ನವಲಗುಂದ, ಬಸವರಾಜ ನವಲಗುಂದ, ಪ್ರಭು ಮೇಟಿ, ಬಾವಾಸಾಬ್ ಬೆಟಗೇರಿ, ಸಂಜಯ್ ದೊಡ್ಡಮನಿ, ಸೋಮು ನಾಗರಾಜ, ಅಭಿಷೇಕ ನವಲಗುಂದ, ಬಸವರಾಜ ತಳವಾರ, ದುರಗಪ್ಪ ಹಿರೇಮನಿ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು. 
ಗದಗ

Candle march ಕಾಂಗ್ರೆಸ್‌ನಿಂದ ಕ್ಯಾಂಡಲ್ ಮಾರ್ಚ್

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ನೀಟ್ ಪರೀಕ್ಷೆಯಲ್ಲಿ ಅಕ್ರಮ
  • ವಿದ್ಯಾರ್ಥಿಗಳು, ಪೊಲೀಸರ ಮೇಲಿನ ಹಲ್ಲೆಗೆ ಖಂಡನೆ
ರೋಣ: ನೀಟ್ ಪರೀಕ್ಷೆಯಲ್ಲಿನ ಅಕ್ರಮ ಹಾಗೂ ವಿದ್ಯಾರ್ಥಿಗಳ ಮೇಲೆ ಪೊಲೀಸರ ಹಲ್ಲೆ ಖಂಡಿಸಿ ತಾಲೂಕು ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ತಹಸೀಲ್ದಾರ್ ಕಚೇರಿಯವರೆಗೆ ಕ್ಯಾಂಡಲ್ ಮಾರ್ಚ್ ಮೂಲಕ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ್ ಮಾತನಾಡಿ, ನೀಟ್ ಪರೀಕ್ಷೆಯಲ್ಲಿನ ಅಕ್ರಮ ಕೇಂದ್ರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಪ್ರತಿಭಟಿಸಲು ಹೋದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ರಾಜೀನಾಮೆ ನೀಡಿದರೆ ಸಾಲದು. ಬದಲಾಗಿ ನೀಟ್ ಪರೀಕ್ಷೆಯಲ್ಲಿ ಮುಂದೆಂದೂ ಅಕ್ರಮ ನಡೆಯದಂತೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೋಣ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಮುತ್ತು ನವಲಗುಂದ ತಾಪಂ ಮಾಜಿ ಅಧ್ಯಕ್ಷ ಪ್ರಭು ಮೇಟಿ, ಅಭಿಷೇಕ ನವಲಗುಂದ, ಬಸವರಾಜ ನವಲಗುಂದ, ಬಾವಾಸಾಬ್ ಬೆಟಗೇರಿ, ಮಲಿಕ್ ಯಲಿಗಾರ, ಸೋಮು ನಾಗರಾಜ, ಸಂಜಯ್ ದೊಡ್ಡಮನಿ, ಬಸವರಾಜ ತಳವಾರ, ಹನುಮಂತ ದ್ವಾಸಲ, ರಾಜು ಮುಗಳಿ, ದುರಗಪ್ಪ ಹಿರೇಮನಿ, ಯಲ್ಲಪ್ಪ ಕಿರೇಸೂರ, ಅಸ್ಲಾಂ ಕೊಪ್ಪಳ, ಗೋಪಿ ರಾಯನಗೌಡ್ರ, ಮೈಲಾರಪ್ಪ ಚಳ್ಳಮರದ, ಮೇಘರಾಜ ಬಾವಿ, ಮಹೇಶ ಕಳಸಣ್ಣವರ ಇತರರಿದ್ದರು.