ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಇಟಗಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಇಸ್ಮಾಯಿಲ್ ಹೊರಪೇಟಿ, ಮಲ್ಲಿಕಾರ್ಜುನ ಕೋಮಾರ, ಶೇಖಪ್ಪ ಕೊಡಗಾನೂರ, ಭೀಮಪ್ಪ ಸೀಮಿಕೇರಿ, ಭೀಮಾಟಬಿಕಾ ಕಂಬಳಿ ಭೀಮಾಂಬಿಕ ದೇವಿಗೆ ಹರಕೆ ಹೊತ್ತು ದೀರ್ಘ ದಂಡ ನಮಸ್ಕಾರ ಹಾಕಿದರು. 
ಗದಗ

cabinet: ಸಚಿವ ಸ್ಥಾನ ಸಿಗಲೆಂದು ದೀರ್ಘ ದಂಡ ನಮಸ್ಕಾರ

ಮಂಜುನಾಥ ಗದಗಿನ
ಗಜೇಂದ್ರಗಡ: ರೋಣ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ತಾಲೂಕಿನ ಇಟಗಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಧರ್ಮದೇವತೆ ಭೀಮಾಟಬಿಕಾ ದೇವಿಗೆ ಗ್ರಾಮದ ಪಾದಗಟ್ಟಿಯಿಂದ ಭೀಮಾಂಬಿಕ ಗುಡಿಯವರೆಗೆ ದೀರ್ಘ ದಂಡ ನಮಸ್ಕಾರ ಹಾಕಿದರು.
ಇಸ್ಮಾಯಿಲ್ ಹೋರಪೇಟಿ, ಮಲ್ಲಿಕಾರ್ಜುನ ಕೋಮಾರ, ಶೇಖಪ್ಪ ಕೊಡಗಾನೂರ, ಭೀಮಪ್ಪ ಸೀಮಿಕೇರಿ, ಭೀಮಾಟಬಿಕಾ ಕಂಬಳಿ ದೀರ್ಘ ದಂಡ ನಮಸ್ಕಾರ ಹಾಕಿದವರು.\
ಬಳಿಕ ಇಸ್ಮಾಯಿಲ್ ಹೋರಪೇಟಿ ಮಾತನಾಡಿ, ತಾಯಿ ಭೀಮಾಂಬಿಕಾ ದೇವಿಗೆ ನಮ್ಮ ರೋಣ ಶಾಸಕರು ಸಚಿವರಾಗಲಿ ಎಂದು ಗ್ರಾಮಸ್ಥರ ಜತೆಗೂಡಿ ದೀರ್ಘದಂಡ ನಮಸ್ಕಾರ ಹಾಕಿ ತಾಯಿಗೆ ಹರಕೆಯ ಕಾಯಿಯನ್ನು ಕಟ್ಟಿದ್ದೇವೆ. ನಮ್ಮ ಶಾಸಕರು ಹಿರಿಯ ನಾಯಕರಾಗಿದ್ದಾರೆ. 40 ವರ್ಷದ ರಾಜಕೀಯ ರಂಗದಲ್ಲಿ ಅಜಾತ ಶತ್ರುವಿನನಂತೆ ರಾಜಕಾರಣ ಮಾಡುತ್ತ ಬಂದಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಲೇ ಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯಮನೂರಪ್ಪ ವಡಗೇರಿ, ಶರಣಪ್ಪ ಕೋಮಾರ, ಯಲ್ಲಪ್ಪ ಕಟ್ಟಿಮನಿ, ಪ್ರಭು ಜಾಲಾಪೂರ, ಶಾಂತವೀರಯ್ಯ ಹಿರೇಮಠ, ಮುತ್ತಪ್ಪ ಹೊಸಮನಿ, ಯಲ್ಲಪ್ಪ ಕಟ್ಟಿಮನಿ, ಉಮೇಶ ಜಾಲಾಪೂರ, ಕರಿಯಪ್ಪ ತೋಪಲಕಟ್ಟಿ, ಭೀಮಪ್ಪ ಕೋರಿ ಭೀಮಪ್ಪ ಚಳಗೇರಿ, ದುರಗಪ್ಪ ಮಾದರ ಸೇರಿದಂತೆ ಅನೇಕರು ಇದ್ದರು.