BOY DEAD 
ಗದಗ

BOY DEAD ತುಂಗಭದ್ರಾ ನದಿಯಲ್ಲಿ ಮುಳುಗಿ ಬಾಲಕ ಮೃತ

ಮುಂಡರಗಿ: ತುಂಗಭದ್ರಾ ನದಿಯಲ್ಲಿ ಬಾಲಕನೊಬ್ಬ (BOY DEAD) ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ. ಶಿಂಗಟಾಲೂರ ಗ್ರಾಮದ ಬಸವರಾಜ ಮೇಗಳಮನಿ (16) ಮೃತ ಬಾಲಕ. ಬಾಲಕ ಬುದ್ಧಿಮಾಂದ್ಯನಾಗಿದ್ದು, ಶುಕ್ರವಾರದಿಂದಲೇ ಮನೆಯಿಂದ ಕಾಣೆಯಾಗಿದ್ದ ಎಂದು ಹೇಳಲಾಗುತ್ತಿದೆ. ಅತನ ಪಾದರಕ್ಷೆಗಳು ತುಂಗಭದ್ರಾ ನದಿಯ ದಂಡೆ ಮೇಲೆ ಪತ್ತೆಯಾಗಿದ್ದವು. ಹೀಗಾಗಿ ಬಾಲಕ ನದಿಯಲ್ಲಿ ಮುಳುಗಿರಬಹುದು ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಶನಿವಾರ ಅಗ್ನಿ ಶಾಮಕ ದಳದ ಸಿಬ್ಬಂದಿ ನದಿ ದಂಡೆಗೆ ಆಗಮಿಸಿ ಕಾರ್ಯಾಚರಣೆ ನಡೆಸಿ ಬೋಟ್ ನೆರವಿನಿಂದ ನದಿಯಲ್ಲಿ ಶೋಧ ಕಾರ್ಯ ಕೈಗೊಂಡರು. ಸಂಜೆಗೆ ಬಾಲಕನ ಮೃತ ದೇಹ ನದಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.