ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆ ಹುಡ್ಕೋ ಕಾಲನಿ ಕಿರು ಬಸ್ ನಿಲ್ದಾಣದಲ್ಲಿ ವಾಮಾಚಾರ (black magic)ಮಾಡಿರುವುದು. 
ಗದಗ

ಬಸ್ ನಿಲ್ದಾಣದಲ್ಲಿ ವಾಮಾಚಾರ black magic

ವಿವೇಕಾನಂದ ದಾಸನಕೊಪ್ಪ
ಮುಂಡರಗಿ: ಪಟ್ಟಣದ ಕೊಪ್ಪಳ ರಸ್ತೆಯ ಹುಡ್ಕೋ ಕಾಲನಿ ಕಿರು ಬಸ್ ನಿಲ್ದಾಣದಲ್ಲಿ ಯಾರೋ ಕಿಡಿಗೇಡಿಗಳು ಮಂಗಳವಾರ ಅಮಾವಾಸ್ಯೆ ದಿನ ವಾಮಾಚಾರ (ಮಾಟ ಮಂತ್ರ) black magic ಮಾಡಿಸಿದ್ದಾರೆ. ಇದರಿಂದ ಅಲ್ಲಿನ ಸಾರ್ವಜನಿಕರು ತೀವ್ರ ಆತಂಕಗೊಂಡಿದ್ದಾರೆ.
ಬಸ್ ನಿಲ್ದಾಣದ ಮಧ್ಯೆ ಭಾಗದ ಆವರಣದಲ್ಲಿ ರಂಗೋಲಿ ಚಿತ್ರ ಬಿಡಿಸಿ, ಅದರೊಳಗೆ ಅರಿಷಿಣ, ಕುಂಕುಮ ಹಾಕಿದ್ದಾರೆ. ಅಡಕೆ ಮತ್ತು ಎಲೆ ಮೇಲೆ ಲಿಂಬೆಹಣ್ಣು ಇಟ್ಟಿದ್ದಾರೆ. ಹಾಗೆ ಅದರ ಮುಂಭಾಗದಲ್ಲಿ ಮೊಟ್ಟೆ ಹಾಗೂ ಮಧ್ಯಭಾಗದಲ್ಲಿ ಕರಿಗೊಂಬೆ ಇಟ್ಟಿದ್ದಾರೆ. ರಂಗೋಲಿ ಚಿತ್ರದ ಸುತ್ತಲೂ ಸಹ ಅರಿಷಿಣ, ಕುಂಕುಮ ಚೆಲ್ಲಿದ್ದಾರೆ. ಅಲ್ಲದೆ, ರಂಗೋಲಿಯಿಂದಲೇ ಹೋದ ವರ್ಷ ನಾ ಬಯಸಿದ್ದು ಸಿಕ್ಕಿಲ್ಲ. ಆದರೆ, ಈ ವರ್ಷ ತೊಗೊಳ್ಳದೇ ಬಿಡಲ್ಲ ಅಂತ ಬರೆದಿದ್ದಾರೆ.
ವಾಮಾಚಾರಕ್ಕೆ ಅಲ್ಲಿನ ನಿವಾಸಿಗಳಲ್ಲಿ ತೀವ್ರತರ ಆತಂಕ ಮೂಡಿಸಿದೆ. ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.