ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಸೋಮವಾರ ಅಂದಪ್ಪ ಹಾರೂಗೇರಿ ಅವರು ಬಿಜೆಪಿ ಧ್ವಜಾರೋಹಣ ನೆರವೇರಿಸಿದರು. ಕೃಷ್ಣಾ ಬಂಡಿ, ಪಂಚಾಕ್ಷರಯ್ಯ ಹರ್ಲಾಪುರಮಠ, ಮೈಲಾರೆಪ್ಪ ನೋಟಗಾರ, ಗೋಪಾಲ ವಾಲೀಕಾರ ಇತರರಿದ್ದರು.
ಮುಂಡರಗಿ: ಕಾರ್ಯಕರ್ತರ ಅವಿರತ ಪರಿಶ್ರಮ, ತ್ಯಾಗ ಮತ್ತು ಸಂಘಟನೆಯ ಶಕ್ತಿಯಿಂದ ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ ಎಂದು ಬಿಜೆಪಿ ಡಂಬಳ ಮಂಡಲ ಅಧ್ಯಕ್ಷ ಅಂದಪ್ಪ ಹಾರೂಗೇರಿ ಹೇಳಿದರು.
ತಾಲೂಕಿನ ಮೇವುಂಡಿ ಗ್ರಾಮದ ಕೋಟೇಶ ಸಿಂದೋಗಿ ಮನೆಯಲ್ಲಿ ಬಿಜೆಪಿ ಸಂಸ್ಥಾಪನಾ ದಿನದ ನಿಮಿತ್ತ ಸೋಮವಾರ ಬಿಜೆಪಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಂಘಟನೆ, ಸಮರ್ಪಣೆ, ತ್ಯಾಗದ ತತ್ವಗಳನ್ನು ಅಳವಡಿಸಿಕೊಂಡು ದೇಶಸೇವೆಗೆ ಮೊದಲಾದ್ಯತೆ ನೀಡಿ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರ ಹಾಗೂ ಕಾರ್ಯಕರ್ತರ ಸೇವೆ ಸ್ಮರಿಸಬೇಕು ಎಂದರು.
ಎಸ್‌ಸಿ ಮೋರ್ಚಾ ಅಧ್ಯಕ್ಷ ಕೃಷ್ಣಾ ಬಂಡಿ ಮಾತನಾಡಿದರು. ಪ್ರ.ಕಾರ್ಯದರ್ಶಿ ಪಂಚಾಕ್ಷರಯ್ಯ ಹರ್ಲಾಪುರಮಠ, ಮೈಲಾರೆಪ್ಪ ನೋಟಗಾರ, ಗೋಪಾಲ ವಾಲೀಕಾರ, ದೇವಪ್ಪ ತಾಮ್ರಗುಂಡಿ, ಪ್ರಭು ಕೊರ್ಲಹಳ್ಳಿ, ರಾಜೇಶ ಅರಕಾಲ, ಪ್ರಕಾಶ ಕೋತಂಬ್ರಿ, ಪ್ರಭು ಕರಮುಡಿ, ಮುತ್ತು ಚಿನ್ನಪ್ಪಗೌಡ್ರ, ಮುತ್ತಣ್ಣ ಬಿಸನಳ್ಳಿ, ನಿಂಗಪ್ಪ ಮಡಿವಾಳರ, ಮಹಾಂತೇಶ ಕೊಡಗಾನೂರ, ಸೋಮಶೇಖರಯ್ಯ ಹಿರೇಮಠ, ಮುದಕಪ್ಪ ಮುಳಗುಂದ, ಶಿವಾನಂದ ಬಂಡಿ, ಮಾಂತೇಶ ಬಂಡಿ, ಲಕ್ಷ್ಮಣ ಬೂದಿಹಾಳ, ಮಲ್ಲೇಶ ಪೂಜಾರ, ವಿನಾಯಕ ರಾಠೋಡ ಇತರರು ಇದ್ದರು.