ಲಕ್ಷ್ಮೇಶ್ವರ ಸಮೀಪದ ಪು.ಬಡ್ನಿ ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಶಾಸಕ ಡಾ.ಚಂದ್ರು ಲಮಾಣಿ ಭೂಮಿಪೂಜೆ ನೆರವೇರಿಸಿದರು. ಪ್ರೇಮಕ್ಕ ಮಾದರ, ಶಾಂತವ್ವ ಬಟಗುರ್ಕಿ, ಅಶೋಕ ಬಟಗುರ್ಕಿ ಇತರರಿದ್ದರು.
ಲಕ್ಷ್ಮೇಶ್ವರ: ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಶಾಸಕ ಡಾ. ಚಂದ್ರು ಲಮಾಣಿ ಸಲಹೆ ನೀಡಿದರು.
ತಾಲೂಕಿನ ಪು.ಬಡ್ನಿ ಗ್ರಾಮದಲ್ಲಿ ಅಂದಾಜು 12.60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಗ್ರಂಥಾಲಯ ಜ್ಞಾನಭಂಡಾರವಿದ್ದಂತೆ. ಜ್ಞಾನಾರ್ಜನೆಗೆ ಗ್ರಂಥಾಲಯಗಳು ಉತ್ತಮ ವೇದಿಕೆಯಾಗಿವೆ. ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮದಲ್ಲಿ ಗ್ರಂಥಾಲಯವಿದ್ದರೆ ದೇವಸ್ಥಾನವಿದ್ದಂತೆ. ಪುಸ್ತಕವನ್ನು ತಲೆ ಬಾಗಿಸಿ ಓದಿದರೆ, ಅದು ನಿಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ ಎಂದರು.
ಪ್ರೇಮಕ್ಕ ಮಾದರ, ಶಾಂತವ್ವ ಬಟಗುರ್ಕಿ, ಅಶೋಕ ಬಟಗುರ್ಕಿ, ಸುಭಾಸ ಬಟಗುರ್ಕಿ, ಮುತ್ತಣ್ಣ ಚೋಟಗಲ್, ಶಿವಪುತ್ರಪ್ಪ ಚೋಟಗಲ್, ರಾಜು ಚೋಟಗಲ್, ಶ್ರೀಕಾಂತ ಚೋಟಗಲ್, ವಾಗೀಶ ಬಟಗುರ್ಕಿ, ಅಶೋಕ ಯಲವಿಗಿ, ಪರಶುರಾಮ ಯಲವಿಗಿ, ಪ್ರಶಾಂತಗೌಡ ಪಾಟೀಲ್, ಶಿವಾನಂದ ಮಾದರ, ಕುಮಾರ ಬೂದಿಹಾಳ, ಶೇಖಣ್ಣ ಕರಣ್ಣವರ್, ಹೊಳಲಪ್ಪ ಕರಣ್ಣವರ, ಶಿವಶರಣಪ್ಪ ಚೋಟಗಲ್, ಶಂಭು ಕರಣ್ಣಬರ್, ಶಿವಪ್ಪ ಕೊರಕನವರ್ ಇತರರಿದ್ದರು.