ಗಜೇಂದ್ರಗಡ ಪುರಸಭೆಯಿಂದ ಹಮ್ಮಿಕೊಂಡಿದ್ದ ವಾಹನ ಹಸ್ತಾಂತರ ಕಾರ್ಯಕ್ರಮವನ್ನು ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸಿದರು. ಶಿವರಾಜ ೂರ್ಪಡೆ, ಸಿದ್ದಣ್ಣ ಬಂಡಿ, ಚಂಬಣ್ಣ ಚವಡಿ, ಆರ್.ಎಂ. ರಾಯಬಾಗಿ, ರಾಜು ಸಾಂಗ್ಲಿಕಾರ ಇತರರಿದ್ದರು.
ಗಜೇಂದ್ರಗಡ: ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಬಜೆಟ್ ಉಳಿತಾಯ ಹಣದಲ್ಲಿ ಪೌರಕಾಮಿರ್ಕರಿಗೆ ವಿಶ್ರಾಂತಿ ಗೃಹ ನಿಮಿರ್ಸುವುದರ ಜತೆಗೆ ಪಟ್ಟಣದ ಸ್ವಚ್ಛತೆಗೆ ಪೂರಕವಾಗುವ ವಾಹನಗಳನ್ನು ಖರೀದಿಸಿರುವುದು ಶ್ಲಾನೀಯ ಕಾರ್ಯ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಗಜೇಂದ್ರಗಡ ಪುರಸಭೆ ವತಿಯಿಂದ 15ನೇ ಹಣಕಾಸು ಯೋಜನೆಯ ಉಳಿತಾಯ ಹಣದಲ್ಲಿ ನಿಮಿರ್ಸಲಾಗಿರುವ ಪುರಸಭೆ ಪೌರಕಾಮಿರ್ಕರ ವಿಶ್ರಾಂತಿ ಗೃಹ ಹಾಗೂ ಪಟ್ಟಣದ ಸ್ವಚ್ಛತೆಗೆ ಖರೀದಿಸಿದ ವಿವಿಧ ವಾಹನಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾತನಾಡಿ, 2025&26ನೇ ಸಾಲಿನ ಬಜೆಟ್ನಲ್ಲಿ 9.58 ಕೋಟಿ ಆದಾಯ ನಿರೀಸಲಾಗಿತ್ತು. ಅದರಲ್ಲಿ ನೀರಿನ ಕರದಿಂದ ಶೇ. 51, ತೆರಿಗೆಯಿಂದ ಶೇ. 98. ಮಳಿಗೆಗಳಿಂದ ಶೇ 100, ವಾಣಿಜ್ಯದಿಂದ ಶೇ. 98ರಷ್ಟು ತೆರಿಗೆ ಸಂಗ್ರಹವಾಗಿದ್ದು, 2026&27ನೇ ಸಾಲಿನ ಬಜೆಟ್ನಲ್ಲಿ 9.75 ಕೋಟಿ ರೂ.ಆದಾಯ ನಿರೀಸಲಾಗಿದೆ ಎಂದರು.
"ಕಳೆದ ವರ್ಷದ 15ನೇ ಹಣಕಾಸು ಯೋಜನೆಯ ಒಟ್ಟು 77 ಲ ರೂ. ಉಳಿತಾಯ ಹಣದಲ್ಲಿ ಪುರಸಭೆ ಪೌರ ಕಾಮಿರ್ಕರ ವಿಶ್ರಾಂತಿ ಗೃಹ ನಿರ್ಮಾಣ (12 ಲ ರೂ.), ಮಲ್ಟಿಜೆಟ್ ಕೆಮಿಕಲ್ ಸ್ಟೇಯರ್ (11 ಲ ರೂ.), ಸಕ್ಕಿಂಗ್ ಆ್ಯಂಡ್ ಜೆಟ್ಟಿಂಗ್ (40.81 ಲ ರೂ.), ಟಿಪ್ಪರ್ (26 ಲ ರೂ.) ವಾಹನಗಳನ್ನು ಖರೀದಿಸಲಾಗಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ಅಳವಡಿಸುತ್ತಿರುವ ಕಾಮಗಾರಿಯಲ್ಲಿ ಹಳೆಯ ನಲ್ಲಿಯ ತೆರಿಗೆ ತುಂಬಿದ ಮನೆಗಳಿಗೆ ಮಾತ್ರ ಹೊಸ ಪೈಪ್ಲೈನ್ಗೆ ಸಂಪರ್ಕ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಶಿವರಾಜ ೂರ್ಪಡೆ, ಸಿದ್ದಣ್ಣ ಬಂಡಿ, ಆರ್.ಎಂ. ರಾಯಬಾಗಿ, ಚಂಬಣ್ಣ ಚವಡಿ, ರಾಜು ಸಾಂಗ್ಲಿಕಾರ ಇತರರಿದ್ದರು.